For the best experience, open
https://m.hosakannada.com
on your mobile browser.
Advertisement

UGC NET: ಯುಜಿಸಿ ನೆಟ್ 2024 ಪರೀಕ್ಷೆಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್‌ ಬಿಡುಗಡೆ, ಇಲ್ಲಿದೆ ನೋಡಿ ಲಿಂಕ್ ಮತ್ತು ವೇಳಾಪಟ್ಟಿ

UGC NET: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಯುಜಿಸಿ ನೆಟ್ (UGC NET) ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.
11:06 AM Apr 22, 2024 IST | ಸುದರ್ಶನ್ ಬೆಳಾಲು
UpdateAt: 11:16 AM Apr 22, 2024 IST
ugc net  ಯುಜಿಸಿ ನೆಟ್ 2024 ಪರೀಕ್ಷೆಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್‌ ಬಿಡುಗಡೆ  ಇಲ್ಲಿದೆ ನೋಡಿ ಲಿಂಕ್ ಮತ್ತು ವೇಳಾಪಟ್ಟಿ

UGC NET: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಯುಜಿಸಿ ನೆಟ್ (UGC NET) ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. NET ಪರೀಕ್ಷೆ ಬರೆಯಲು ಇಚ್ಛಿಸುವ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು.

Advertisement

ಕಾಲೇಜು ಶಿಕ್ಷಕರು ಆಗಬೇಕಾದರೆ, ವಿಶ್ವವಿದ್ಯಾಲಯ- ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬೇಕಾದರೆ, ಜೂನಿಯರ್ ರಿಸರ್ಚ್‌ ಫೆಲೋಶಿಪ್‌ ಪಡೆಯಬೇಕೆಂದು ಬಯಸುವವರಿಗೆ ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (NTA) ಪ್ರತಿವರ್ಷ ಎರಡು ಬಾರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ನಡೆಸುತ್ತದೆ.

ಸಾಮಾನ್ಯವಾಗಿ ಇದನ್ನು ನೆಟ್ ಪರೀಕ್ಷೆ ಎಂದೇ ಕರೆಯಲಾಗುತ್ತದ. ಇದೀಗ ನ್ಯಾಷನಲ್‌ ಟೆಸ್ಟಿಂಗ್ ಏಜೆನ್ಸಿಯು ಜೂನ್‌ ಸೆಷನ್‌ ನ ಪರೀಕ್ಷೆಗೆ ಅರ್ಜಿ ಆಹ್ವಾನಿಸಿ ತನ್ನ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅವುಗಳ ಸಂಪೂರ್ಣ ವೇಳಾಪಟ್ಟಿಯನ್ನು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿದೆ ನೋಡಿ ಪ್ರಮುಖ ದಿನಾಂಕಗಳು.

Advertisement

ನೋಟಿಫಿಕೇಶನ್ ನ ಮುಖ್ಯಾಂಶಗಳು:
*ಯುಜಿಸಿ ಎನ್‌ಇಟಿ ಜೂನ್‌ ಅವಧಿಯ ಅಧಿಸೂಚನೆ ಪ್ರಕಟ
*ಮೇ 10, 2024 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ
*ಜೂನ್‌ 16, 2024 ರಂದು ಪರೀಕ್ಷೆ
ಅಧಿಸೂಚನೆ ಪ್ರಕಟಣೆ : ಏಪ್ರಿಲ್ 20, 2024
ಅರ್ಜಿ ಸ್ವೀಕಾರ ಆರಂಭ : ಏಪ್ರಿಲ್ 20, 2024
ಅರ್ಜಿ ಸಲ್ಲಿಸಲು ಕೊನೆ : ಮೇ 10, 2024ರ ರಾತ್ರಿ11:50 PM ತನಕ
ಪರೀಕ್ಷೆ ಶುಲ್ಕ ಕೊನೆ ದಿನಾಂಕ (ಆನ್‌ಲೈನ್‌) ಮೂಲಕ: ಮೇ 11-12, 2024 ರ ಮಧ್ಯೆ ಮಾಡಲು ಅವಕಾಶ
ಅರ್ಜಿಯಲ್ಲಿನ ಮಾಹಿತಿಗಳ ತಿದ್ದುಪಡಿಗೆ ಅಂತಿಮ ದಿನಾಂಕ : ಮೇ 13-15, 2024 ಮಧ್ಯೆ ಮಾಡಲು ಅವಕಾಶ
ಪರೀಕ್ಷೆ ಪ್ರಕಟಿಸುವ ದಿನಾಂಕ: ಇನ್ನೂ ನಿಗದಿಯಾಗಿಲ್ಲ
ಪ್ರವೇಶ ಪತ್ರ ಬಿಡುಗಡೆ ದಿನಾಂಕ: ಇನ್ನೂ ನಿಗದಿಯಾಗಿಲ್ಲ
ಪರೀಕ್ಷೆ ದಿನಾಂಕ : ಜೂನ್ 16, 2024 ರಂದು
ಪರೀಕ್ಷೆ ಫಲಿತಾಂಶ : ಜುಲೈ 2024 ರಂದು

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯಿಂದ ಅಂಪೈರ್‌ಗೆ ಅವಮಾನ : ಅಸಲಿಗೆ ಅಂಪೈರ್‌ ಏನ್ ಮಾಡಿದ್ರು?

UGC NET 2022 ಪರೀಕ್ಷೆಗೆ ಬಗ್ಗೆ ಒಂದಷ್ಟು ಮಾಹಿತಿ
ಯುಜಿಸಿ ಎನ್‌ಇಟಿ ಪರೀಕ್ಷಾ ವಿಧಾನ ಸಂಪೂರ್ಣ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು ಅಭ್ಯರ್ಥಿಗಳು ಈ ಪರೀಕ್ಷೆಗೆ ಸಾಕಷ್ಟು ತಯಾರಿ ಮಾಡಿಕೊಳ್ಳುವುದು ಅಗತ್ಯ.

ಎನ್‌ಇಟಿ ಅಂದರೆ ನೆಟ್ ಪರೀಕ್ಷೆಗೆ ಅರ್ಜಿ ಹಾಕಲು ಅರ್ಹತೆಗಳು ಈ ಕೆಳಗಿನಂತಿವೆ.
ಜನರಲ್ ಕೆಟಗರಿ ಅಥವಾ ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಆದರೆ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮತ್ತು ಶೆಡ್ಯೂಲ್ಡ್ ಕಾಸ್ಟ್ ಮತ್ತು ಶೆಡ್ಯೂಲ್ಡ್ ಟ್ರೈಬ್ (ಎಸ್‌ಸಿ/ಎಸ್‌ಟಿ) ಮತ್ತು ಪಿಡಬ್ಲ್ಯೂಡಿ (ಪರ್ಸನ್ಸ್ ವಿಥ್ ಡಿಸಬಿಲಿಟಿ) ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಶೇ.50 ಅಂಕ ಪಡೆದು ಉತ್ತೀರ್ಣರಾದರೆ ಸಾಕು.

ಯುಜಿಸಿ ಎನ್‌ಇಟಿ ಪರೀಕ್ಷೆ ಮಾದರಿ ಹೇಗಿರುತ್ತದೆ?
ಎನ್‌ಇಟಿ ಪರೀಕ್ಷೆಯನ್ನು 300 ಅಂಕಗಳಿಗೆ ನಡೆಸಲಾಗುತ್ತಿದ್ದು, ಸಾಮಾನ್ಯ ಪತ್ರಿಕೆ ಪೇಪರ್ 1 ಎಲ್ಲ ವಿಷಯದ ಅಭ್ಯರ್ಥಿಗಳಿಗೆ ಸಾಮಾನ್ಯ. ಸಾಮಾನ್ಯ ಪೇಪರ್ 100 ಅಂಕಗಳ 50 ಪ್ರಶ್ನೆಗಳನ್ನು ಹೊಂದಿರುತ್ತದೆ. ಆದರೆ ವಿಷಯ ಪತ್ರಿಕೆ (ಪತ್ರಿಕೆ 2) ಆಗಿದ್ದು 200 ಅಂಕಗಳ 100 ಪ್ರಶ್ನೆಗಳನ್ನು ಹೊಂದಿರುತ್ತದೆ. ಅಭ್ಯರ್ಥಿಗಳು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಬೇಕಿದ್ದು, ಒಟ್ಟು 3 ಗಂಟೆ ಸಮಯ ಅವಧಿಯಲ್ಲಿ ಅಭ್ಯರ್ಥಿಯು ಈ 2 ಪತ್ರಿಕೆಗಳಲ್ಲಿ ಯಾವ ಪ್ರಶ್ನೆಪತ್ರಿಕೆಯನ್ನು ಬೇಕಾದರೂ ಮೊದಲು ಬರೆಯಬಹುದು. ನೆಟ್ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿದ್ದು, ಒಂದು ಭಾಷೆಯನ್ನು ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಬಹುದು(ಭಾಷಾ ವಿಷಯ ಹೊರಡುಪಡಿಸಿ).

ಅರ್ಜಿ ಸಲ್ಲಿಸುವ ವಿಧಾನ ಮತ್ತು ಶುಲ್ಕ:
ನೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವೆಬ್‌ ವಿಳಾಸ https://ugcnet.nta.ac.in/ ಕ್ಕೆ ಭೇಟಿ ನೀಡಿ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.1150.
ಸಾಮಾನ್ಯ EWS ಮತ್ತು ಹಿಂದುಳಿದ ವರ್ಗಗಳ (NCL) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600.
ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ, ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.325 ಇರುತ್ತದೆ.

ಇದನ್ನೂ ಓದಿ: Dandiya Dance: ದಾಂಡಿಯಾ ನೃತ್ಯದೊಂದಿಗೆ ಫಿಟ್ನೆಸ್ : ಈ ನೃತ್ಯದಿಂದ ಸಂತೋಷ ಮಾತ್ರವಲ್ಲದೆ, ಸೌಂದರ್ಯವೂ ವೃದ್ಧಿ

Advertisement
Advertisement