Aadhaar linkage: ಸರ್ಕಾರದ ಸೌಲಭ್ಯ ಪಡೆಯಲು ಜಮೀನಿನ ಆರ್‌ಟಿಸಿಗೆ ಆಧಾರ್ ಲಿಂಕ್ ಕಡ್ಡಾಯ: ಸರ್ಕಾರದಿಂದ ಆದೇಶ!
Aadhaar Linkage: ರೈತರು ತಮ್ಮ ಆರ್‌ಟಿಸಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡಿದರೆ ಮಾತ್ರ ಇನ್ನುಮುಂದೆ ಸರಕಾರದಿಂದ ಸವಲತ್ತು ಪಡೆಯಲು ಸಾಧ್ಯ. ಹೌದು, ರೈತರು ತಮ್ಮ ಜಮೀನಿನ ಆರ್‌ಟಿಸಿಗೆ (ಪಹಣಿ ಪತ್ರ) ಇನ್ನುಮುಂದೆ ಆಧಾರ್ ಲಿಂಕ್ (Aadhaar Linkage) ಮಾಡುವುದು ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ: Eye Shape: ಕಣ್ಣಿನ ಆಕಾರ ನೋಡಿ ವ್ಯಕ್ತಿತ್ವ ರಹಸ್ಯವನ್ನು ತಿಳಿಯುವುದು ತುಂಬಾ ಸುಲಭ!
ರೈತರ ಆರ್‌ಟಿಸಿಗೆ (ಪಹಣಿ ಪತ್ರ) ಆಧಾರ್ ಲಿಂಕ್ ಮಾಡಲು, ಸರಕಾರ ಹೊಸ ತಂತ್ರಾಂಶವನ್ನು ಸಿದ್ಧಪಡಿಸಿದ್ದು ಇದನ್ನು ರೈತರು ತಮ್ಮ ಮೊಬೈಲ್ ನಿಂದಲೇ ಮನೆಯಲ್ಲೇ ಕುಳಿತು ತಮ್ಮ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಬಹುದು. ಅಥವಾ ತಮ್ಮ ಗ್ರಾಮ ಲೆಕ್ಕಿಗರ ಕಚೇರಿಗೆ ಭೇಟಿ ನೀಡಿ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಬಹುದು.
7 ವರ್ಷದ ಹಿಂದೆಯೇ ಕರ್ನಾಟಕ ಸರ್ಕಾರ ಆರ್‌ಟಿಸಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕಾರ್ಯವನ್ನು ಆರಂಭಿಸಿತ್ತು. ಒಂದು ವೇಳೆ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಂತಹ ರೈತರಿಗೆ ಸರಕಾರದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ.
ರೈತರು ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡುವುದರಿಂದ ಜಮೀನಿನ ದಾಖಲೆಗಳು ಇನ್ನಷ್ಟು ಸುರಕ್ಷಿತ ಮತ್ತು ಭೂ ದಾಖಲೆ ಪಡೆಯುವುದು ಸುಲಭ ಆಗಲಿದ್ದು, ಮುಂದಿನ ಯಾವುದೇ ಸರಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಸುಲಭ ಆಗಲಿದೆ. ಅಲ್ಲದೇ ಖಾತೆಯ ಯಾವುದೇ ವಿವಾದಗಳನ್ನು ತಪ್ಪಿಸಲು ಅನುಕೂಲದ ಜೊತೆಗೆ ನಿಮಗೆ ಆರ್‌ಟಿಸಿ ಮೂಲಕ ಸಾಲ ಪ್ರಕ್ರಿಯೆ ಸುಲಭ ಆಗಲಿದೆ.
ಈ ಕುರಿತು ಮಾತನಾಡಿದ ಕಂದಾಯ ಸಚಿವ ಬೈರೇಗೌಡ, ಹೆಚ್ಚಿನ ಸಂಖ್ಯೆಯ ಹಕ್ಕುಗಳು, ಗೇಣಿದಾರರು ಮತ್ತು ಬೆಳೆಗಳ ಮಾಹಿತಿ ಸತ್ತ ರೈತರ ಹೆಸರಿನಲ್ಲಿ ಇನ್ನೂ ಇವೆ. ಆದ್ದರಿಂದ ಸರ್ಕಾರದ ಯೋಜನೆಗಳ ಸಹಾಯವನ್ನು ಪಡೆಯಲು, ಶಾಶ್ವತ ಪರಿಹಾರದ ಅಂಗವಾಗಿ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಲಾಗಿದೆ” ಎಂದು ಕಂದಾಯ ಸಚಿವ ತಿಳಿಸಿದ್ದಾರೆ.