ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Karnataka Rain: ಬಿರು ಬೇಸಿಗೆಯ ನಡುವೆ ವರುಣನ ಕೃಪೆ; ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Karnataka Rain: ಬಿರು ಬೇಸಿಗೆ ನಡುವೆ ರಾಜ್ಯದ ಹಲವೆಡೆ ವರುಣನ ಕೃಪೆ ಮುಂದು ವರಿದಿದ್ದು, ಬುಧವಾರವೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ
08:50 AM Apr 24, 2024 IST | ಸುದರ್ಶನ್
UpdateAt: 08:51 AM Apr 24, 2024 IST
Advertisement

Karnataka Rain: ಬಿರು ಬೇಸಿಗೆ ನಡುವೆ ರಾಜ್ಯದ ಹಲವೆಡೆ ವರುಣನ ಕೃಪೆ ಮುಂದು ವರಿದಿದ್ದು, ಬುಧವಾರವೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಏಳು ಜಿಲ್ಲೆಗಳಿಗೆ ' ಯೆಲ್ಲೊ ಅಲರ್ಟ್' ಘೋಷಿಸಿದೆ.

Advertisement

ಇದನ್ನೂ ಓದಿ: CAA: ಪೌರತ್ವ ಕಾಯಿದೆ ಜಾರಿ ತಡೆಯಲು ಸಾಧ್ಯವೇ ಇಲ್ಲ- ಗುಡುಗಿದ ಅಮಿತ್ ಶಾ

ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗೆ 'ಯೆಲ್ಲೊ ಅಲರ್ಟ್' ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

Advertisement

ಇದನ್ನೂ ಓದಿ:  Free Food: ಮತದಾನದ ಗುರುತು ತೋರಿಸಿ, ಉಚಿತ ದೋಸೆ, ತುಪ್ಪದ ಲಾಡು ನಿಮ್ಮದಾಗಿಸಿ

ಕೆಲ ಜಿಲ್ಲೆಗಳಲ್ಲಿ ಮಳೆಯ ಜತೆಗೆ ಬಿಸಿಗಾಳಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಕಲಬುರಗಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗುವ ಸಂಭವವಿದೆ.

Advertisement
Advertisement