CAA: ಪೌರತ್ವ ಕಾಯಿದೆ ಜಾರಿ ತಡೆಯಲು ಸಾಧ್ಯವೇ ಇಲ್ಲ- ಗುಡುಗಿದ ಅಮಿತ್ ಶಾ
CAA: "ಕಾಂಗ್ರೆಸ್ ಆಗಲಿ, ಟಿಎಂಸಿಯ ಮಮತಾ ಬ್ಯಾನರ್ಜಿ ಆಗಲಿ ಅಥವಾ ಮತ್ಯಾವುದೇ ಪಕ್ಷದ ನಾಯಕರಿಂದಾಗಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡುವುದನ್ನು ತಡೆಯಲು ಸಾಧ್ಯವೇ ಇಲ್ಲ" ಎಂದು ಅಮಿತ್ ಶಾ ಗುಡುಗಿದ್ದಾರೆ.
ಇದನ್ನೂ ಓದಿ: Free Food: ಮತದಾನದ ಗುರುತು ತೋರಿಸಿ, ಉಚಿತ ದೋಸೆ, ತುಪ್ಪದ ಲಾಡು ನಿಮ್ಮದಾಗಿಸಿ
"ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತದಲ್ಲಿ ನಿರಾಶ್ರಿತರಾಗಿರುವ ಹಿಂದೂಗಳು, ಬೌದ್ಧರಿಗೆ ಪೌರತ್ವ ನೀಡುವುದರಿಂದ ಮಮತಾ ತಿದ್ದುಪಡಿ ಕಾಯಿದೆ (ಸಿಎಎ)ಜಾರಿ ಮಾಡುವುದನ್ನು ತಡೆಯಲು ಸಾಧ್ಯವೇ ಇಲ್ಲ,'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಗುಡುಗಿದ್ದಾರೆ. ಪಶ್ಚಿಮ ಬಂಗಾಳದ ಕರಂದಿಫಿಯಲ್ಲಿ ಬಿಜೆಪಿ ಅವರಿಗೆ ಯಾವ ತೊಂದರೆ,'' ಎಂದು ಅಮಿತ್ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಶಾ ಖಾರವಾಗಿ ಪ್ರಶ್ನಿಸಿದರು.
“ಪಶ್ಚಿಮ ಬಂಗಾಳದಲ್ಲಿ ಹೆಚ್ಚಿರುವ ಒಳ ನುಸುಳುಕೋರರನ್ನು ಹೊರ ಹಾಕಲು, ನುಸುಳುವಿಕೆ ತಡೆಯಲು ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ರಚನೆಗೆ ಜನತೆ ಕೈ ಜೋಡಿಸಬೇಕು,'' ಎಂದು ಕರೆ ನೀಡಿದ ಅಮಿತ್ ಶಾ, “ಬಂಗಾಳದಲ್ಲಿ ಹೆಚ್ಚಿರುವ ಗೂಂಡಾ ಪ್ರವೃತ್ತಿಯನ್ನು ಶೀಘ್ರವೇ ಹತ್ತಿಕ್ಕಲಾಗುವುದು. ಬಿಜೆಪಿಗೆ ಮತ ನೀಡಿದರೆ ಟಿಎಂಸಿ ಗೂಂಡಾಗಳನ್ನು ತಲೆಕೆಳಗೆ ಮಾಡಿ ನೇತು ಹಾಕಲಾಗುವುದು,'' ಎಂದು ವಾಗ್ದಾಳಿ ನಡೆಸಿದರು.