Gold-Silver Rate: ಚಿನ್ನ, ಬೆಳ್ಳಿ ದರದಲ್ಲಿ ಬಂಪರ್ ಇಳಿಕೆ !!
Gold-Silver Rate: ಕಳೆದ ವಾರ ಚಿನ್ನ, ಬೆಳ್ಳಿ ಬೆಲೆ(Gold-Silver)ಯಲ್ಲಿ ಗರಿಷ್ಠ ಮಟ್ಟದ (73,958 ರೂ.) ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನ ಹಾಗೂ ಬೆಳ್ಳಿ ಬೆಲೆ ತೀವ್ರ ಇಳಿಮುಖ ಕಂಡಿದೆ.
ಇದನ್ನೂ ಓದಿ: Robbery: ದರೋಡೆ ಮಾಡಿದ ಹಣದಲ್ಲಿ 7 ಗ್ರಾಮಗಳಿಗೆ ರಸ್ತೆ ನಿರ್ಮಿಸಿದ್ದ ಬಿಹಾರದ ರಾಬಿನ್ ಹುಡ್ : ಇದೀಗ ಕೇರಳ ಪೊಲೀಸರ ಅತಿಥಿ
ಹೌದು, ಇಸ್ರೇಲ್ - ಇರಾನ್ ಯುದ್ಧ(Israel-Iran War) ವು ಭೌಗೋಳಿಕ- ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಇದು ಚಿನ್ನದ ಅಸಾಧಾರಣ ಬೆಲೆ ಏರಿಕೆಗೆ ಬ್ರೇಕ್ ಹಾಕಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 2006 ರೂ. ಇಳಿಕೆಯಾಗಿದ್ದು, 71952 ರೂ. ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಒಂದೇ ದಿನ ಚಿನ್ನದ ಫ್ಯೂಚರ್ ಬೆಲೆ (ಜೂನ್ ವಿತರಣೆಗೆ) ಪ್ರತಿ 10 ಗ್ರಾಂಗೆ 854 ರೂ. (ಶೇ. 1 ಕ್ಕಿಂತ ಹೆಚ್ಚು) ಕುಸಿದಿದ್ದು, 71952 ರೂ. ತಲುಪಿದೆ. ಬೆಳ್ಳಿ ಬೆಲೆಯೂ ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿಯ ಫ್ಯೂಚರ್ಸ್ ಬೆಲೆ (ಮೇ ವಿತರಣೆಗಾಗಿ) 1,785 ರೂ. ಇಳಿಕೆಯಾಗಿದ್ದು ಪ್ರತಿ ಕೆಜಿಗೆ 81,722 ರೂ. ತಲುಪಿದೆ.
ಇದನ್ನೂ ಓದಿ: Lok Sabha Election 2024: ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ; ಮದ್ಯ ಇಲ್ಲ, ಬಹಿರಂಗ ಪ್ರಚಾರ ಸ್ಟಾಪ್
ಅಂದಹಾಗೆ ಈ ಕುರಿತು ಸರಕು ಮತ್ತು ಕರೆನ್ಸಿಯ VP ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ LKP ಸೆಕ್ಯುರಿಟೀಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಹಳದಿ ಲೋಹದಲ್ಲಿ ಲಾಭದ ಬುಕಿಂಗ್ ಮುಂದುವರೆದಿರುವುದರಿಂದ ಚಿನ್ನದ ಬೆಲೆಗಳು ಕುಸಿತದ ಹಾದಿ ಹಿಡಿದಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯಾವುದೇ ಹೊಸ ಉದ್ವಿಗ್ನತೆ ಕಂಡುಬರದಿದ್ದರೆ ಮುಂದಿನ ಒಂದು ವಾರದವರೆಗೆ ಬೆಲೆ ಇಳಿಕೆ ಮುಂದುವರಿಯಬಹುದು" ಎಂದಿದ್ದಾರೆ. ಒಟ್ಟಿನಲ್ಲಿ ಚಿನ್ನ ಖರೀದಿದ್ರರಿಗೆ ಇದು ಸುವರ್ಣವಕಾಶ !!