For the best experience, open
https://m.hosakannada.com
on your mobile browser.
Advertisement

Everest Masala: ಜನಪ್ರಿಯ ಮಸಾಲೆ ಪದಾರ್ಥಗಳ ನಿಷೇಧ: ವರದಿ ಕೇಳಿದ ಸರಕಾರ

Everest Masala: ಎಂಡಿಎಚ್ ಮತ್ತು ಎವರೆಸ್ಟ್ ಬ್ರಾಂಡ್‌ಗಳ ನಾಲ್ಕು ಮಸಾಲೆ ಉತ್ಪನ್ನಗಳನ್ನು ಹಾಂಕಾಂಗ್ ಮತ್ತು ಸಿಂಗಾಪುರ ನಿಷೇಧಿಸಿದೆ.
08:14 AM Apr 24, 2024 IST | ಸುದರ್ಶನ್
UpdateAt: 08:30 AM Apr 24, 2024 IST
everest masala  ಜನಪ್ರಿಯ ಮಸಾಲೆ ಪದಾರ್ಥಗಳ ನಿಷೇಧ  ವರದಿ ಕೇಳಿದ ಸರಕಾರ

Everest Masala: ಎಂಡಿಎಚ್ ಮತ್ತು ಎವರೆಸ್ಟ್ ಬ್ರಾಂಡ್‌ಗಳ ನಾಲ್ಕು ಮಸಾಲೆ ಉತ್ಪನ್ನಗಳನ್ನು ಹಾಂಕಾಂಗ್ ಮತ್ತು ಸಿಂಗಾಪುರ ನಿಷೇಧಿಸಿದೆ. ಈ ಕುರಿತು ವಿವರವಾದ ವರದಿ ಕಳುಹಿಸುವಂತೆ ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ದೇಶನ ನೀಡಿದೆ.

Advertisement

ಇದನ್ನೂ ಓದಿ:  Mango Tips: ಮಾವಿನಹಣ್ಣಿನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯವಿದು! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

ಮಾರಾಟ ತಡೆಗೆ ಮೂಲ ಕಾರಣಗಳನ್ನು ತಿಳಿದುಕೊಂಡು ಅದನ್ನು ಸರಿಪಡಿಸುವುದರ ಕುರಿತು ಸಂಬಂಧಪಟ್ಟ ರಫ್ತುದಾರರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Everest Masala: ಜನಪ್ರಿಯ ಮಸಾಲೆ ಪದಾರ್ಥಗಳ ನಿಷೇಧ: ವರದಿ ಕೇಳಿದ ಸರಕಾರ

ಈ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕ ಎನ್ನಲಾಗಿರುವ ಎಥಿಲೀನ್ ಆಕ್ಸೆಡ್ ಎಂಬ ಕೀಟನಾಶಕವು ಗೊತ್ತುಪಡಿಸಿದ ಮಿತಿಗಿಂತಲೂ ಹೆಚ್ಚು ಬಳಕೆಯಾಗಿರುವುದರಿಂದ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಭಾರತೀಯ ಮಸಾಲೆ ಮಂಡಳಿ ಪರಿಶೀಲನೆ ನಡೆಸುತ್ತಿದೆ.

"ಸಿಂಗಾಪುರ ಫುಡ್ ಏಜೆನ್ಸಿ ಮತ್ತು ಹಾಂಕಾಂಗ್‌ ಸೆಂಟರ್ ಫಾರ್ ಫುಡ್ ಸೇಫ್ಟಿ, ಆಹಾರ ಮತ್ತು ಪರಿಸರ ನೈರ್ಮಲ್ಯ ಇಲಾಖೆಗಳೂ ನಮಗೆ ವಿವರಗಳನ್ನು ನೀಡುತ್ತವೆ,'' ಎಂದು ಸಚಿವಾಲಯದ ಹೇಳಿದೆ.

2022-23ರ ಹಣಕಾಸು ವರ್ಷದಲ್ಲಿ ಭಾರತ ಸುಮಾರು 32,000 ಕೋಟಿ ರೂ.ಗಳು ಸಾಂಬಾರ ಪದಾರ್ಥಗಳನ್ನು ರಫ್ತು ಮಾಡಿದೆ. ಮೆಣಸಿನ ಕಾಯಿ, ಜೀರಿಗೆ, ಸ್ಟೈಸ್ ಆಯಿಲ್ ಮತ್ತು ಅರಿಶಿನ, ಕರಿಬೇವಿನ ಪುಡಿ ಮತ್ತು ಏಲಕ್ಕಿ- ರಫ್ತು ಮಾಡುವ ಪ್ರಮುಖ ಮಸಾಲೆಗಳಾಗಿವೆ.

Advertisement
Advertisement