ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Robbery: ದರೋಡೆ ಮಾಡಿದ ಹಣದಲ್ಲಿ 7 ಗ್ರಾಮಗಳಿಗೆ ರಸ್ತೆ ನಿರ್ಮಿಸಿದ್ದ ಬಿಹಾರದ ರಾಬಿನ್ ಹುಡ್ : ಇದೀಗ ಕೇರಳ ಪೊಲೀಸರ ಅತಿಥಿ

Robbery: ರಾಬಿನ್ ಹುಡ್ ಆಫ್ ಬಿಹಾರ' ಎಂಬ ಬಿರುದನ್ನು ಹೊಂದಿರುವ  ಮೊಹಮ್ಮದ್ ಆರ್ನಾನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 
02:42 PM Apr 23, 2024 IST | ಸುದರ್ಶನ್
UpdateAt: 03:13 PM Apr 23, 2024 IST
Advertisement

Robbery: ಇದನ್ನು ವ್ಯಂಗ್ಯ ಎಂದೇ ಕರೆಯಬೇಕು, ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಅಭಿನಯದ  ಚಲನಚಿತ್ರ 'ರಾಬಿನ್ ಹುಡ್' ನಿರ್ದೇಶಕ ಜೋಶಿಯವರ ನಿವಾಸದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ, 'ರಾಬಿನ್ ಹುಡ್ ಆಫ್ ಬಿಹಾರ' ಎಂಬ ಬಿರುದನ್ನು ಹೊಂದಿರುವ  ಮೊಹಮ್ಮದ್ ಆರ್ನಾನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಇದನ್ನೂ ಓದಿ:  Lok Sabha Election 2024: ಬೆಂಗಳೂರಿನಲ್ಲಿ 144 ಸೆಕ್ಷನ್‌ ಜಾರಿ; ಮದ್ಯ ಇಲ್ಲ, ಬಹಿರಂಗ ಪ್ರಚಾರ ಸ್ಟಾಪ್ ‌

ಈ "ರಾಬಿನ್ ಹುಡ್" ಚಿತ್ರದಲ್ಲಿ ಚಿತ್ರದ ನಾಯಕ ಎಟಿಎಂನಿಂದ ಹಣ ಕದಿಯುವ ಮೂಲಕ ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. ಆದರೆ ಇಲ್ಲಿ ಇರ್ಫಾನ್ ತಾನು ಕದಿಯುತ್ತಿದ್ದ ಹಣದಿಂದ ಅನೇಕ ಜನರಿಗೆ ಸಹಾಯ ಮಾಡಿದ್ದು, ತಾನು ಕದಿಯುತ್ತಿದ್ದ ಹಣದಲ್ಲಿ 20 ರಷ್ಟು ಹಣವನ್ನು ಬಡವರ ವೈದ್ಯಕೀಯ ವೆಚ್ಚ ಮತ್ತು ಮದುವೆ ವೆಚ್ಚಗಳು, ರಸ್ತೆಗಳನ್ನು ನಿರ್ಮಿಸಲು ಖರ್ಚು ಮಾಡುತ್ತಿದ್ದ ಹಾಗೆಯೇ ಏಳು ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೂ ಹಣ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಇಷ್ಟೆಲ್ಲ ಖರ್ಚು ಮಾಡಿದ ನಂತರ, ಮಿಕ್ಕ ಹಣದಲ್ಲಿ ಇರ್ಫಾನ್ ಐಷಾರಾಮಿ ಜೀವನವನ್ನು ನಡೆಸಲು ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: Robbery: ದರೋಡೆ ಮಾಡಿದ ಹಣದಲ್ಲಿ 7 ಗ್ರಾಮಗಳಿಗೆ ರಸ್ತೆ ನಿರ್ಮಿಸಿದ್ದ ಬಿಹಾರದ ರಾಬಿನ್ ಹುಡ್ : ಇದೀಗ ಕೇರಳ ಪೊಲೀಸರ ಅತಿಥಿ

ಬಂದಿತ ಆರೋಪಿ ಇರ್ಫಾನ್ ಈಗಾಗಲೇ ಅನೇಕ ಶ್ರೀಮಂತರ ಮನೆಗಳಲ್ಲಿ ದರೋಡೆ ಮಾಡಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಮೇಲೆ 13 ರಾಜ್ಯಗಳಲ್ಲಿ 40ಕ್ಕೂ ಅಧಿಕ ಸುಲಿಗೆ ದರೋಡೆ ಪ್ರಕರಣಗಳು ದಾಖಲಾಗಿವೆ. ಈತ 2021 ರಲ್ಲಿ ತಿರುವನಂತಪುರಂನಲ್ಲಿರುವ ಪ್ರಮುಖ ಆಭರಣ ಮಳಿಗೆ ಮಾಲೀಕರ ಮನೆಯಲ್ಲಿ ದರೋಡೆ ಮಾಡಿದ ಬಳಿಕ ಕೇರಳ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರು. ಅಂದು ಆತ 2 ಲಕ್ಷ ರುಪಾಯಿ ಮೌಲ್ಯದ ವಜ್ರಾಭರಣ ಹಾಗೂ ಅರವತ್ತು ಸಾವಿರ ರೂಪಾಯಿ ನಗದನ್ನು ದರೋಡೆ ಮಾಡಿದ್ದ.

ನಿರ್ದೇಶಕ ಜೋಶಿ ಮನೆಗೆ ಕನ್ನ ಹಾಕಿದ್ದು ಹೇಗೆ?

ಬಂದಿತ ಆರೋಪಿ ಇರ್ಫಾನ್ ಚೆನ್ನೈನಲ್ಲಿರುವ ಜೋಶಿ ಅವರ ಮನೆಗೆ ಜಿಲ್ಲಾ ಪಂಚಾಯತ್ ಬೋರ್ಡ್ ಇರುವ ವಾಹನದಲ್ಲಿ ಬಂದು 1 ಕೋಟಿ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದ. ಇದರಿಂದ ಎಚ್ಚೆತ್ತ ಕೇರಳ ಪೊಲೀಸರು, ಕರ್ನಾಟಕ ಪೊಲೀಸರ ಸಹಾಯದಿಂದ ಉಡುಪಿಯಲ್ಲಿ  ಇರ್ಫಾನ್ ನನ್ನು ಸೆರೆಹಿಡಿದಿದ್ದಾರೆ.

ಈತನ ಪತ್ನಿ ಬಿಹಾರ ಜಿಲ್ಲಾ ಪಂಚಾಯತ್ ಸದಸ್ಯೆ

ಬಂದಿತ ಆರೋಪಿ ಇರ್ಫಾನ್ ಬಿಹಾರದ ಜಿಲ್ಲಾ ಪಂಚಾಯತ್ ಸದಸ್ಯೆ ಪತಿ. ಇನ್ನೊಂದು ಅಚ್ಚರಿ ಘಟನೆ ಎಂದರೆ ಈತ ಜಿಲ್ಲಾ ಪಂಚಾಯತ್ ಬೋರ್ಡ್ ಇರುವ ಕಾರಿನಲ್ಲಿಯೇ ಬಂದು ಜೋಶಿ ಅವರ ಮನೆಗೆ ಕನ್ನ ಹಾಕಿದ್ದ. ಈತ ಈ ಮುಂಚೆ ಬಟ್ಟೆ ವ್ಯಾಪಾರ ಮಾಡುತ್ತಿದ್ದು ಆದರೆ ಅದರಲ್ಲಿ ನಷ್ಟ ಸಂಭವಿಸಿದ್ದರಿಂದ ಕಳ್ಳತನಕ್ಕೆ ಇಳಿದಿದ್ದಾನೆ.

Advertisement
Advertisement