For the best experience, open
https://m.hosakannada.com
on your mobile browser.
Advertisement

Dakshina Kannada: ರೈತರಿಗೆ ಶಸ್ತ್ರಾಸ್ತ್ರ ವಾಪಸ್; ಷರತ್ತು ಅನ್ವಯ

Dakshina Kannada: ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಕೆಲವು ಷರತ್ತುಗಳನ್ವಯ ವಾಪಸ್ ನೀಡಲು ನಿರ್ಧರಿಸಿರುವುದಾಗಿ ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
08:02 AM Apr 21, 2024 IST | ಸುದರ್ಶನ್
UpdateAt: 09:01 AM Apr 21, 2024 IST
dakshina kannada  ರೈತರಿಗೆ ಶಸ್ತ್ರಾಸ್ತ್ರ ವಾಪಸ್  ಷರತ್ತು ಅನ್ವಯ

Dakshina Kannada: ಲೋಕಸಭಾ ಚುನಾವಣೆ ಕಾರಣದಿಂದಾಗಿ ವನ್ಯಜೀವಿಗಳ ಹಾವಳಿಯಿರುವ ಭಾಗಗಳಲ್ಲಿ ಪರವಾನಗಿ ಹೊಂದಿರುವ ರೈತರಿಂದ ಸ್ವಾಧೀನಕ್ಕೆ ಪಡೆದಿರುವ ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಕೆಲವು ಷರತ್ತುಗಳನ್ವಯ ವಾಪಸ್ ನೀಡಲು ನಿರ್ಧರಿಸಿರುವುದಾಗಿ ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಇದನ್ನೂ ಓದಿ: Hubballi Murder: ನೇಹಾ ಹಿರೇಮಠ, ಫಯಾಜ್ ಫೋಟೋದೊಂದಿಗೆ 'ಜಸ್ಟಿಸ್ ಫಾರ್ ಲವ್ ' ಅಂದ ಯುವಕರು ಅರೆಸ್ಟ್ !

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಐವರನಾಡು ಸೇರಿ ಹಲವು ಮಂದಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಆಗ ಸರಕಾರದ ಪರ ಹಾಜರಿದ್ದ ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಸರಕಾರದ ನಿರ್ಧಾರ ವಿವರಿಸಿದರು.

Advertisement

ಇದನ್ನೂ ಓದಿ: Crime: ಗದಗ ನಾಲ್ವರ ಕೊಲೆ ಪ್ರಕರಣ; ಸಿಸಿ ಕ್ಯಾಮೆರಾದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ದೃಶ್ಯ ವೈರಲ್

ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, 'ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಚುನಾವಣಾ ಸಂದರ್ಭದಲ್ಲಿ ಸರಕಾರದ ಸುಪರ್ದಿಗೆ ಒಪ್ಪಿಸುವಂತೆ ಆದೇಶ ನೀಡಲು ಅಧಿಕಾರವಿದೆಯೇ, ಇಲ್ಲವೇ ಎಂಬ ಬಗ್ಗೆ ಮಾಹಿತಿ ನೀಡಬೇಕು,'' ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಷರತ್ತುಗಳೇನು?

1. ಚುನಾವಣಾ ಪ್ರಚಾರ ಸಭೆ, ಮೆರವಣಿಗೆ, ಪಾದಯಾತ್ರೆಗಳಲ್ಲಿ ಶಸ್ತ್ರಾಸ್ತ್ರ ಒಯ್ಯಲು ಅವಕಾಶವಿಲ್ಲ.

2. ಮತದಾನದಂದು ಮತಗಟ್ಟೆಗೆ ಶಸ್ತ್ರಾಸ್ತ್ರ ಕೊಂಡೊಯ್ಯುವಂತಿಲ್ಲ.

3. ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದರೂ ಬಹಿರಂಗ ಪ್ರದರ್ಶನ ಮಾಡುವಂತಿಲ್ಲ.

4. ಸಾರ್ವಜನಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆದರಿಕೆ ಹಾಕುವುದಕ್ಕೆ ಬಳಸುವಂತಿಲ್ಲ.

5. ಪೊಲೀಸರ ತಪಾಸಣೆ ವೇಳೆ ಹಾಜರುಪಡಿಸಿ ದಾಖಲೆ ಒದಗಿಸಬೇಕು.

6. ಷರತ್ತು ಉಲ್ಲಂಘಿಸಿದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಬಹುದು.

7. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವಂತಿಲ್ಲ.

Advertisement
Advertisement