For the best experience, open
https://m.hosakannada.com
on your mobile browser.
Advertisement

Hubballi Murder: ನೇಹಾ ಹಿರೇಮಠ, ಫಯಾಜ್ ಫೋಟೋದೊಂದಿಗೆ 'ಜಸ್ಟಿಸ್ ಫಾರ್ ಲವ್ ' ಅಂದ ಯುವಕರು ಅರೆಸ್ಟ್ !

Hubballi Murder: ಕೊಲೆ ಸಮರ್ಥಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಇಬ್ಬರು ಯುವಕರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
07:26 AM Apr 21, 2024 IST | ಸುದರ್ಶನ್
UpdateAt: 07:30 AM Apr 21, 2024 IST
hubballi murder  ನೇಹಾ ಹಿರೇಮಠ  ಫಯಾಜ್ ಫೋಟೋದೊಂದಿಗೆ  ಜಸ್ಟಿಸ್ ಫಾರ್ ಲವ್   ಅಂದ ಯುವಕರು ಅರೆಸ್ಟ್

Hubballi Murder: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿ, ಈಗ ಪ್ರಕರಣ ಸಂಬಂಧ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಅಭಿಯಾನ ಶುರುಮಾಡಲಾಗಿದೆ. ಈ ಕೊಲೆ ಸಮರ್ಥಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಇಬ್ಬರು ಯುವಕರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ನೇಹಾ ಹಿರೇಮಠ ಹತ್ಯೆ ಬಗ್ಗೆ ಧಾರವಾಡ ನಗರದ ನಿವಾಸಿಗಳಾದ ಸಾದಿಕ್ ತಡಕೋಡ ಹಾಗೂ ಆದಿಲ್ ಎಂಬವರು ನೇಹಾ ಹಾಗೂ ಫಯಾಜ್ ಫೋಟೋ ಹಾಕಿ ' ಜಸ್ಟಿಸ್ ಫಾರ್ ಲವ್ ' ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಇದೀಗ ಈ ಘಟನೆ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಕಾರ್ಯಕರ್ತರು ಇದನ್ನು ಗಮನಿಸಿ ಆ ಇಬ್ಬರು ಯುವಕರನ್ನು ಸ್ಥಳೀಯ ವಿದ್ಯಾಗಿರಿ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಆ ಬಳಿಕ ಪೊಲೀಸ್ ಠಾಣೆ ಎದುರು ಜೈ ಶ್ರೀರಾಮ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಗಿದೆ.

ಮೊನ್ನೆ, ಏಪ್ರಿಲ್ 18 ರ ಗುರುವಾರ ಸಂಜೆ 4.45ರ ಸುಮಾರಿಗೆ ಆರೋಪಿ ಫಯಾಜ್ ಮಾಸ್ಕ್ ಧರಿಸಿಕೊಂಡ ಫಯಾಜ್ ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್ ಒಳಗೆ ಎಂಟ್ರಿ ಕೊಟ್ಟಿದ್ದು, ಅಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಗೀರಿ ಚುಚ್ಚಿ ಗಂಭೀರ ಗಾಯಗೊಳಿಸಿದ್ದ. ತಕ್ಷಣ ನೇಹಾಳನ್ನು ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿನಿಯರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ನೇಹಾ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.

Advertisement

ಅಲ್ಲಿ ಹೀನ ಕೃತ್ಯ ನಡೆಸಿದ ನಂತರ ಆತ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಹಿಂಬಂದಿಯಲ್ಲಿ ಬಂಧಿಸಲಾಗಿದೆ. ಸುದ್ದಿ ಪ್ರಕಟ ಆಗುತ್ತಿದ್ದಂತೆಯೇ ಹುಬ್ಬಳ್ಳಿಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು. ಆರೋಪಿ ಫಯಾಜ್ ನನ್ನು ಎನ್ ಕೌಂಟರ್ ಮಾಡಿ ಇಲ್ಲವೇ ಗಲ್ಲಿಗೇರಿಸಿ, ಅಥವಾ ಜನರಿಗೆ ಒಪ್ಪಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ನ್ನೇ ಸಂಜೆ ಕೂಡಾ ಈ ಪ್ರಯುಕ್ತ ಪ್ರತಿಭಟನೆ ಮುಂದುವರಿದಿದೆ. ಜೊತೆಗೆ #JusticeForNeha ಎಂಬ ಅಭಿಯಾನ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಲಾಗಿದೆ. ಈ #JusticeForNeha ಕ್ಯಾಂಪೇನ್‍ಗೆ ಸ್ಯಾಂಡಲ್‍ವುಡ್ ಕೂಡ ತನ್ನ ಸಾಥ್ ನೀಡಿದೆ.

Advertisement
Advertisement
Advertisement