For the best experience, open
https://m.hosakannada.com
on your mobile browser.
Advertisement

Crime: ಗದಗ ನಾಲ್ವರ ಕೊಲೆ ಪ್ರಕರಣ; ಸಿಸಿ ಕ್ಯಾಮೆರಾದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ದೃಶ್ಯ ವೈರಲ್

Crime: ಗದಗ ಬೆಟಕೇರಿ ನಗರಸಭೆ ಉಪಾಧ್ಯಕ್ಷ ಸುನಂದಾ ಬಾಕಳೆ ಪುತ್ರ ಸಹಿತ ನಾಲ್ವರ ಕೊಲೆ ಪ್ರಕರಣದ ಅನುಮಾನಾಸ್ಪದ ವ್ಯಕ್ತಿಗಳ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
07:36 AM Apr 21, 2024 IST | ಸುದರ್ಶನ್
UpdateAt: 07:36 AM Apr 21, 2024 IST
crime  ಗದಗ ನಾಲ್ವರ ಕೊಲೆ ಪ್ರಕರಣ  ಸಿಸಿ ಕ್ಯಾಮೆರಾದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ದೃಶ್ಯ ವೈರಲ್

Crime: ಗದಗ ಬೆಟಕೇರಿ ನಗರಸಭೆ ಉಪಾಧ್ಯಕ್ಷ ಸುನಂದಾ ಬಾಕಳೆ ಪುತ್ರ ಸಹಿತ ನಾಲ್ವರ ಕೊಲೆ ಪ್ರಕರಣದ ಅನುಮಾನಾಸ್ಪದ ವ್ಯಕ್ತಿಗಳ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.

Advertisement

ಐವರು ಯುವಕರು ಬಾಕಳೆ ನಿವಾಸದಿಂದ ಸ್ವಲ್ಪ ದೂರದಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಚನ್ನಮ್ಮ ವೃತ್ತದ ಬಳಿಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಮಧ್ಯ ರಾತ್ರಿ 2.55 ಗಂಟೆ ಸುಮಾರಿಗೆ ಯುವಕರು ಗುಂಪು ಹೊರಟಿರುವುದು ದಾಖಲಾಗಿದೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸುಮಾರು 18ರಿಂದ 25 ವರ್ಷದೊಳಗಿನ ಐವರು ಯುವಕರ ಗುಂಪು ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದಿದ್ದು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Advertisement
Advertisement
Advertisement