For the best experience, open
https://m.hosakannada.com
on your mobile browser.
Advertisement

Zombie Deer Disease: ಮಾಂಸ ಪ್ರಿಯರೇ ಹುಷಾರ್ - ಇನ್ನು ಈ ಪ್ರಾಣಿಯ ಮಾಂಸ ತಿಂದ್ರೆ ಇಡೀ ಜಗತ್ತಿಗೆ ಹರಡುತ್ತೆ ಪ್ರಾಣವನ್ನೇ ತೆಗೆಯೋ ಸಾಂಕ್ರಾಮಿಕ ರೋಗ !!

02:37 PM Dec 26, 2023 IST | ಅಶ್ವಿನಿ ಹೆಬ್ಬಾರ್
UpdateAt: 02:37 PM Dec 26, 2023 IST
zombie deer disease  ಮಾಂಸ ಪ್ರಿಯರೇ ಹುಷಾರ್   ಇನ್ನು  ಈ ಪ್ರಾಣಿಯ ಮಾಂಸ ತಿಂದ್ರೆ ಇಡೀ ಜಗತ್ತಿಗೆ ಹರಡುತ್ತೆ ಪ್ರಾಣವನ್ನೇ ತೆಗೆಯೋ ಸಾಂಕ್ರಾಮಿಕ ರೋಗ
Advertisement

Disease: ಅಮೆರಿಕದಲ್ಲಿ ಕಳೆದ ವರ್ಷದಿಂದ ನೂರಾರು ಪ್ರಾಣಿಗಳು ಅನಾರೋಗ್ಯದಿಂದ ಸೋಂಕಿಗೆ ಒಳಗಾದ ಹಿನ್ನೆಲೆ ಜೋಂಬಿ ಜಿಂಕೆ ಕಾಯಿಲೆ (Diesase)ಮನುಷ್ಯರಿಗೆ ಹರಡಬಹುದು ಎಂದು ವಿಜ್ಞಾನಿಗಳು(scientists)ಎಚ್ಚರಿಕೆ ನೀಡಿದ್ದಾರೆ. ವ್ಯೋಮಿಂಗ್‌ ನಲ್ಲಿ 800 ಜಿಂಕೆ (Deer), ಎಲ್ಕ್ ಮತ್ತು ಮೂಸ್‌ಗಳ ಮಾದರಿಗಳಲ್ಲಿ ಪ್ರಾಣಿಗಳು ಜೊಲ್ಲು ಸುರಿಸುವಿಕೆ, ಆಲಸ್ಯ, ಮತ್ತು ಬ್ಲ್ಯಾಂಕ್‌ ಸ್ಟೇರ್‌ನಿಂದ ಬಿಡುವ ದೀರ್ಘಕಾಲದ ಕ್ಷೀಣಿಸುವ ಕಾಯಿಲೆ (CWD) ಕಾಣಿಸಿಕೊಂಡಿದೆ.

Advertisement

ಸಾಮಾನ್ಯವಾಗಿ ಆರೋಗ್ಯಕರ ಮೆದುಳಿನ ಪ್ರೋಟೀನ್‌ ವಿಧದಲ್ಲಿ ಒಂದಾದ ಪ್ರಿಯಾನ್‌ನಿಂದ ಅಸಹಜವಾಗಿ ಮಡಚಲು ಪ್ರಚೋದನೆ ನೀಡುತ್ತವೆ. ಇದು ಮನುಷ್ಯರು ಮತ್ತು ಪ್ರಾಣಿಗಳಲ್ಲಿ ರೋಗಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಹೆಚ್ಚು ಸಾಂಕ್ರಾಮಿಕ ರೋಗಗಳು ಸೋಂಕಿತ ಮಾಂಸವನ್ನು ಸೇವಿಸುವ ಮೂಲಕ ಸಂಭಾವ್ಯವಾಗಿ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ.

Advertisement

ವಿಸ್ಕಾನ್ಸಿನ್‌ನಲ್ಲಿ, ಸಾವಿರಾರು ಜನರು ಬಹುಶಃ ಸೋಂಕಿತ ಜಿಂಕೆಗಳಿಂದ ಮಾಂಸ ಸೇವಿಸಿದ್ದಾರೆ ಎಂದು ಡಾ. ಆಂಡರ್ಸನ್ ಹೇಳಿದ್ದಾರೆ. ಯುಎಸ್ ಬಯೋಟೆಕ್ ಕಂಪನಿ ಗಿಂಕ್ಗೊ ಬಯೋವರ್ಕ್ಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಗಳಿಂದ 2020ಕ್ಕಿಂತ 2050 ರಲ್ಲಿ 12 ಪಟ್ಟು ಹೆಚ್ಚು ಜನರನ್ನು ಕೊಲ್ಲುವ ಸಾಧ್ಯತೆ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದೆ. ಹವಾಮಾನ ಬದಲಾವಣೆ ಮತ್ತು ಅರಣ್ಯನಾಶದಿಂದಾಗಿ ಭವಿಷ್ಯದಲ್ಲಿ ಸ್ಪಿಲ್‌ಓವರ್‌ಗಳು ಎಂದು ಕರೆಯಲ್ಪಡುವ ಝೂನೋಟಿಕ್ ಕಾಯಿಲೆಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಸಂಭವಿಸಬಹುದು.

ಪ್ರಿಯಾನ್ ಕಾಯಿಲೆಯಿಂದ ಬುದ್ಧಿಮಾಂದ್ಯತೆ, ಭ್ರಮೆ, ನಡೆಯಲು ಮತ್ತು ಮಾತನಾಡಲು ತೊಂದರೆ, ಗೊಂದಲ, ಆಯಾಸ ಮತ್ತು ಸ್ನಾಯುಗಳ ಬಿಗಿತ ಕಾಣಿಸಿಕೊಳ್ಳಬಹುದು. ಈ ಪ್ರಿಯಾನ್ ಕಾಯಿಲೆಯು ಉತ್ತರ ಅಮೆರಿಕ, ನಾರ್ವೆ, ಕೆನಡಾ ಮತ್ತು ದಕ್ಷಿಣ ಕೊರಿಯಾ ಪ್ರದೇಶಗಳಲ್ಲಿ ಜಿಂಕೆ, ಹಿಮಸಾರಂಗ, ಮೂಸ್ ಮತ್ತು ಎಲ್ಕ್‌ಗಳಲ್ಲಿ ರೋಗನಿರ್ಣಯ ಮಾಡಲಾಗಿದೆ.

ಇದನ್ನು ಓದಿ: Anchor Anushree: 35 ವರ್ಷವಾದರೂ ಅನುಶ್ರೀ ಮದುವೆಯಾಗದಿರಲು ಕಾರಣವೇನು? ಈಕೆಯ ಮನಸ್ಸಿನಲ್ಲೇನಿದೆ? ಇಲ್ಲಿದೆ ಉತ್ತರ

Advertisement
Advertisement
Advertisement