For the best experience, open
https://m.hosakannada.com
on your mobile browser.
Advertisement

Kids Mobile Addiction: ನಿಮ್ಮ ಮಕ್ಕಳು ಅತಿಯಾದ ಮೊಬೈಲ್‌ ಬಳಕೆ ಮಾಡುತ್ತಾರೆಯೇ..? ಮಕ್ಕಳ ನಡುವಳಿಕೆ ಬದಲಾದೀತು ಎಚ್ಚರ ಪೋಷಕರೇ..

Kids Mobile Addiction:  ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್.‌ ಮೊಬೈಲ್‌ ಇಲ್ಲದೆ ಪ್ರಪಂಚನೇ ಇಲ್ಲ. ದೊಡ್ಡವರು ಮಾತ್ರವಲ್ಲ ಸಣ್ಣ ಸಣ್ಣ ಮಕ್ಕಳಿಗೂ ಈಗ ಮೊಬೈಲೇ ಬೇಕು.
04:10 PM Aug 02, 2024 IST | ಸುದರ್ಶನ್
UpdateAt: 04:10 PM Aug 02, 2024 IST
kids mobile addiction  ನಿಮ್ಮ ಮಕ್ಕಳು ಅತಿಯಾದ ಮೊಬೈಲ್‌ ಬಳಕೆ ಮಾಡುತ್ತಾರೆಯೇ    ಮಕ್ಕಳ ನಡುವಳಿಕೆ ಬದಲಾದೀತು ಎಚ್ಚರ ಪೋಷಕರೇ
Advertisement

Kids Mobile Addiction:  ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್.‌ ಮೊಬೈಲ್‌ ಇಲ್ಲದೆ ಪ್ರಪಂಚನೇ ಇಲ್ಲ. ದೊಡ್ಡವರು ಮಾತ್ರವಲ್ಲ ಸಣ್ಣ ಸಣ್ಣ ಮಕ್ಕಳಿಗೂ ಈಗ ಮೊಬೈಲೇ ಬೇಕು. ಊಟ- ಪಾಠ- ಆಟ ಎಲ್ಲದಕ್ಕೂ ಮೊಬೈಲ್.‌ ಆದರೆ ಇದು ಮಕ್ಕಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ ಎಂದು ತಜ್ಞರು ಪೋಷಕರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಅತೀಯಾದ ಮೊಬೈಲ್‌ ಬಳಕೆಯಿಂದ ಮಕ್ಕಳ ನಡುವಳಿಕೆಯಲ್ಲಿ ಭಾರಿ ಬದಲಾವಣೇ ಆದೀತು. ಇದಕ್ಕಾಗಿ ನೀವು ಮುಂದೆ ದೊಡ್ಡ ಬೆಲೆಯನ್ನೆ ತೆರಬೇಕಾದಿತು ಎನ್ನುತ್ತಾರೆ ತಜ್ಞರು.

Advertisement

ನಮ್ಮ ದೇಶದಲ್ಲಿ ಒಂದು ಕಾಲವಿತ್ತು. ಇಂಟರ್ನೇಟ್‌ ಖರೀದಿಸಬೇಕಾದರೆ ದೊಡ್ಡ ಮೊತ್ತವನ್ನೇ ಕೊಡಬೇಕಾಗಿತ್ತು. ಆದರೆ ಈಗ ಹಾಗಿಲ್ಲ. ಸಾಮಾನ್ಯ ದರಕ್ಕೆ ದಿನವಿಡೀ ನೆಟ್‌ ಬಳಸಿಕೊಂಡು ಮೋಬೈಲ್‌ನಲ್ಲಿ ಕಾಲ ಕಳೆಯಬಹದು. ದೇಶದಲ್ಲಿ ಸರಾಸರಿ 7 ಗಂಟೆಗಳ ಕಾಲ ಮೊಬೈಲ್‌ ನೋಡುತ್ತಾರೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಆದರಲ್ಲೂ ರಾತ್ರಿ ಸಮಯದಲ್ಲಿ ಮೊಬೈಲ್‌ ಬಳಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಆರೋಗ್ಯದ ಮೇಳೆ ಗಂಭೀರ ಪರಿಣಾಮವನ್ನು ಉಂಡುಮಾಡಲಿದೆ.

ನಿದ್ರೆಗೆ ಉತ್ತೇಜಿನ ನೀಡುವ ಮೆಲಟೋನಿನ್ ಹಾರ್ಮೋನ್ ಸ್ರವಿಸುವಿಕೆ ಬಹಳ ಮುಖ್ಯ. ಮೊಬೈಲ್‌ನಿಂದ ಹೊರಸೂಸುವ ನೀಲಿ ಬೆಳಕಿನಿಂದ ಈ ಹಾರ್ಮೋನ್ ಕಡಿಮೆಯಾಗುತ್ತದೆ. ವೈದ್ಯರು ಪದೇ ಪದೇ ರಾತ್ರಿ ಮೊಬೈಲ್‌ ನೋಡುವುದನ್ನು ಕಡಿಮೆ ಮಾಡಲು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಇದು ನಿದ್ರಾಹೀನತೆ, ಖಿನ್ನತೆ, ಮಾನಸಿಕ ಕಿರಿಯಂತ ಅಪಾಯಗಳನ್ನು ಉಂಟು ಮಾಡಿ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹದು.

Advertisement

ಇನ್ನು ಯುವ ಜನತೆ ಹಾಗೂ ಮಕ್ಕಳು ಜಾಸ್ತಿ ಮೊಬೈಲ್‌ ಚಟಕ್ಕೆ ದಾಸರಾಗುತ್ತಿದ್ದಾರೆ. ಮಕ್ಕಳು, ಯುವಕರು ಇಡೀ ಜೀವನವನ್ನೇ ಮೊಬೈಲ್‌ ಮೇಲೆ ಕಳೆಯುತ್ತಿದ್ದಾರೆ. ಇದು ಮಕ್ಕಳ ಬೆಳವಣಿಗೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ
ಎಂದು ಡಾ ಎಸ್ಎನ್ ಮೆಡಿಕಲ್ ಕಾಲೇಜ್ನ ಮನೋವೈಜ್ಞಾನಿಕ ವಿಭಾಗದ ಮಾಜಿ ಮುಖ್ಯಸ್ಥ ಡಾ ಜಿಡಿ ಕೂಲ್ವಾಲ್ ತಿಳಿಸಿದ್ದಾರೆ. ಮಕ್ಕಳು ವಾಸ್ತವದಿಂದ ದೂರಾಗುತ್ತಿದ್ದಾರೆ. ಅವರ ಅತಿಯಾದ ಮೊಬೈಲ್‌ ಬಳಕೆ ಅವರ ಹಾರ್ಮೋನ್‌ ಬದಲಾವಣೆಗೆ ಕಾರಣವಾಗುತ್ತಿದೆ. ಇದರಿಂದ ಮಕ್ಕಳ ಸಿರ್ಕಾಡಿಯನ್ ರಿಥಂ ಅಂದರೆ ನಿದ್ರೆ, ಮೆದುಳಿನಲ್ಲಿ ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇರುವ ಜೈವಿಕ ಗಡಿಯಾರದ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿದೆ.

ಬೆಳಗ್ಗೆ ಎದ್ದಾಕ್ಷಣ ನಮ್ಮನ್ನು ಚುರುಕಾಗಿಡುವ ಹಾರ್ಮೋನ್ ಕಾರ್ಟಿಸೋಲ್ ದಿನದ ಒತ್ತಡ ನಿರ್ವಹಣೆ ಮಾಡಲು ಉಪಯೋಗವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರೋಟೀನ್ ಅನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಹಾರ್ಮೋನ್ ಇನ್ಸುಲಿನ್ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ರಾತ್ರಿವರೆಗೆ ನಿರಂತರವಾಗಿ ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿದ್ರೆಯ ಕುರಿತ ಸಿಗ್ನಲ್ ಅನ್ನು ಮೆದುಳು ಪಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾರ್ಟಿಸೋನ್ ನಿರಂತರವಾಗಿ ಸಕ್ರಿಯವಾಗುತ್ತದೆ.
ಮೊಬೈಲ್‌ ಬಳಕೆಯಿಂದ ಮೆದುಳಿಗೆ ರಾತ್ರಿ ಯಾವುದು..? ಹಗಲು ಯಾವುದು ಎಂದು ಒಗ್ಗಿಕೊಳ್ಳಲು ಕಷ್ಟವಾಗುತ್ತಿದೆ. ಇದರಿಂದ ನಿದ್ರೆಗೆ ಭಂಗವಾಗುತ್ತಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ, 12 ವರ್ಷದ ಒಳಗಿನ ಶೇ 42ರಷ್ಟು ಮಕ್ಕಳು ದಿನದಲ್ಲಿ 2-4 ಗಂಟೆ ಮೊಬೈಲ್‌-ಟ್ಯಾಬ್‌ಗಳ ಬಳಕೆ ಮಾಡುತ್ತಾರೆ. ೧೨ ವರ್ಷದ ಮಕ್ಕಳಿಂದ ಮೇಲ್ಪಟ್ಟವರು ಸುಮಾರು ಶೇ 47ರಷ್ಟು ಪ್ರಮಾಣದಲ್ಲಿ ಸ್ಕ್ರೀನ್‌ ನಲ್ಲಿ ಟೈಂ ಕಳೆಯುತ್ತಾರೆ.

ಮೊಬೈಲ್ ಗೀಳಿಗೆ ಸಿಲುಕಿದ ಮಕ್ಕಳ ನಡವಳಿಕೆಯಲ್ಲಿ ಬಾರಿ ಬದಲಾವಣೆ ಕಂಡುಬರುತ್ತಿದೆ ಎಂದು ಡಾ ಕೂಲ್ವಾಲ್ ವಿವರಿಸುತ್ತಾರೆ. ಮೊಬೈಲ್ ದಾಸತನದಿಂದ ಇತರರ ಮಾತನ್ನು ಕೇಳದೆ ನಿರ್ಲಕ್ಷ್ಯ ತೋರುವುದು, ಮೆದುಳು ನಿಷ್ಕ್ರೀಯಗೊಂಡು ರೂಮ್ನಲ್ಲಿ ಲಾಕ್ ಮಾಡಿಕೊಳ್ಳುವುದು, ಅಲ್ಲದೇ, ಮನೆಯವರೊಂದಿಗೆ ಪದೇ ಪದೇ ಜಗಳವಾಡುವುದು ನಡೆಯುತ್ತಿದೆ. ಪೋಷಕರು ಆದಷ್ಟು ಮಕ್ಕಳನ್ನು ಮೊಬೈಲ್‌ ಉಪಯೋಗಿಸುವುದರಿಂದ ದೂರವಿಡಬೇಕು. ಅವರನ್ನು ಬೇರೆ ಚಟುವಟಿಕೆಗಳತ್ತ ಗಮನಹರಿಸುವಂತೆ ಮಾಡಬೇಕು. ಮಕ್ಕಳು ಮೊಬೈಲ್‌ನಲ್ಲಿ ಯಾವ ವಿಚಾರಗಳ ಬಗ್ಗೆ ನೋಡುತ್ತಾರೆ ಅನ್ನುವುದರ ಬಗ್ಗೆ ಗಮನವಿಡಬೇಕು. ಅವರ ಮೇಲೆ ನಿಗಾ ಇಡುವುದರ ಮೂಲಕ ಮಕ್ಕಳನ್ನು ಅಪಾಯದಿಂದ ಪಾರು ಮಾಡಬಹುದು.

Advertisement
Advertisement
Advertisement