RTC -Adhaar Link: ನಿಮ್ಮ RTC ಯನ್ನು ಆಧಾರ್'ಗೆ ಲಿಂಕ್ ಮಾಡಬೇಕಾ? ಸ್ವತಃ ಮೊಬೈಲ್ ಮೂಲಕ ನೀವೇ ಆಧಾರ್ ಲಿಂಕ್ ಮಾಡಿ !
RTC -Adhaar Link: ನಮ್ಮಲ್ಲಿ ಅನೇಕರಿಗೆ ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ದಾಖಲೆಗಳ ಕುರಿತಾಗಿ ಸರಿಯಾದ ಮಾಹಿತಿಯೇ ಇರುವುದಿಲ್ಲ. ಅದರಲ್ಲೂ ತಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಎಂಬ ಸಂಗತಿಯೂ ಸಹ ತಿಳಿದಿರುವುದಿಲ್ಲ. ಈ ರೀತಿ ಪಹಣಿಗೆ ಆಧಾರ್ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನವಾದರೂ ಏನು? ನಿಮ್ಮದೇ ಮೊಬೈಲ್ ನಲ್ಲಿ ಆಧಾರ್ ಲಿಂಕ್ ಹೇಗೆ ಮಾಡಬಹುದು? ಬನ್ನಿ ತಿಳಿಯೋಣ.
ಇದನ್ನೂ ಓದಿ: Crime: ತನ್ನ ನಾಲ್ಕು ಜನ ಅಪ್ರಾಪ್ತ ಮಕ್ಕಳು ಹಾಗೂ ಹೆಂಡತಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪತಿ
ಪಹಣಿಗೆ ಆಧಾರ್ ಲಿಂಕ್ ಮಾಡುವುದರ ಅಸಲಿ ಪ್ರಯೋಜನವೇನು?
ಸಾಮಾನ್ಯವಾಗಿ ಭೂ ವ್ಯಾಜ್ಯಗಳಲ್ಲಿ ಪಹಣಿ ಮಾಹತ್ತರ ಪಾತ್ರವಹಿಸುತ್ತದೆ. ನಾವು ಪಹಣಿಗೆ ಆಧಾರ್ ಅನ್ನು ಲಿಂಕ್ ಮಾಡುವ ಮೂಲಕ ನಮ್ಮ ಜಮೀನಿನ ಮೇಲೆ ಆಗಬಹುದಾದ ವಚನಗಳಿಂದ ಪಾರಾಗಬಹುದು ಹಾಗೆಯೇ ನಮ್ಮ ಜಮೀನಿಗೆ ಸಂಬಂಧಿಸಿದಂತೆ ಸಕ್ರಮ ದಾಖಲಾತಿಗಳನ್ನು ಹೊಂದುವುದರಿಂದ ನಮಗೆ ಕಾನೂನಾತ್ಮಕವಾಗಿ ಹೆಚ್ಚು ಬಲ ದೊರೆಯುತ್ತದೆ.
ಇದನ್ನೂ ಓದಿ: Bengaluru: ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ : ಕಳ್ಳಿಯಾಗಿ ಇದೀಗ ಪೊಲೀಸರ ಅತಿಥಿ
ಇನ್ನು ನಮ್ಮ ರೈತರು ಪಹಣಿಗೆ ಆಧಾರ್ ಲಿಂಕ್ ಮಾಡುವುದರಿಂದ ಸರ್ಕಾರದಿಂದ ಬರುವ ಎಲ್ಲಾ ರೀತಿಯ ಬೆಳೆ ಪರಿಹಾರ, ಹಾಗೆಯೇ ವಿವಿಧ ಯೋಜನೆಗಳಿಂದ ಬರುವ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಅಸಲಿಗೆ ಪಹಣಿಗೆ ಆಧಾರ್ ಲಿಂಕ್ ಮಾಡಿಸುವುದು ಹೇಗೆ?
ಸಾಮಾನ್ಯವಾಗಿ ಪಹಣಿಯಲ್ಲಿ ಜಮೀನು ಮಾಲೀಕನ ವಿವರ, ಭೂಮಿಯ ಸ್ವಾಧೀನ ಸ್ವರೂಪ, ಬೆಳೆ, ಋಣ, ಮಣ್ಣಿನ ಪ್ರಕಾರ, ಪ್ರದೇಶ, ಸೇರಿದಂತೆ ಇನ್ನು ವಿವಿಧ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದನ್ನು RTC ಎಂದು ಸಹ ಹೇಳಲಾಗುತ್ತದೆ.
ರೈತರು ನಿಗದಿತ ಸಮಯದಲ್ಲಿ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾಯ್ದೆ ಕಾಲಂ 4 (4) ಬಿ (2)ರ ಅಡಿಯಲ್ಲಿ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿಸುವುದನ್ನು ಕಡ್ಡಾಯ ಮಾಡಿದೆ.
ಆಧಾರ್ ಗೆ ಪಹಣಿಯನ್ನು ಹೇಗೆಲ್ಲ ಲಿಂಕ್ ಮಾಡಬಹುದು ಗೊತ್ತಾ?
ಸಾಮಾನ್ಯವಾಗಿ ನಮ್ಮ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಸಲು ನಮ್ಮ ಗ್ರಾಮಗಳಲ್ಲಿರುವ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿಯಾಗಿ ಪಹಣಿಗೆ ಆಧಾರ್ ಲಿಂಕ್ ಮಾಡಿಸಬಹುದು, ಹಾಗೆಯೇ ಹತ್ತಿರವಿರುವ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕವು ಸಹ ಆಧಾರ್ ಲಿಂಕ್ ಮಡಿಸ ಬಹುದು. ಆದರೆ ಇವೆಲ್ಲಕ್ಕಿಂತ ಉತ್ತಮವೆಂದರೆ ನಿಮ್ಮ ಮೊಬೈಲ್ ನಲ್ಲಿ ನೀವೇ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು.
ಮೊಬೈಲ್ ಮೂಲಕ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ
ನೀವು ಪಹಣಿಗೆ ಆಧಾರ್ ಲಿಂಕ್ ಮಾಡಲು ಮಾಡಬೇಕಿರುವುದು ಇಷ್ಟೆ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಆಧಾರ್ ಲಿಂಕ್ ಮಾಡಿಸಬಹುದು. ಆಧಾರ್ ಲಿಂಕ್ ಮಾಡಿಸುವುದಕ್ಕಾಗಿ ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://landrecords.karnataka.gov.in/service4/.
ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅದು ನಿಮ್ಮನ್ನು ಸರ್ಕಾರದ Bhoomi Citizen Services ವೆಬ್ಸೈಟ್ಗೆ ಕರೆದೊಯ್ಯುತ್ತದೆ. ಬಳಿಕ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಹಾಗೆಯೇ ಕೆಳಗಿನ ಕ್ಯಾಪ್ಷನನ್ನು ಸಹ ನಮೂದಿಸಿ ಸೆಂಡ್ ಒಟಿಪಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ನಿಮ್ಮ ಮೊಬೈಲ್ ನಂಬರಿಗೆ ಆರು ಅಂಕಿಯ ಓಟಿಪಿ ಬಂದಿರುತ್ತದೆ. ಆ ಒಟಿಪಿಯನ್ನು ನಮೂದಿಸಿ ಬಳಿಕ ಲಾಗಿನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಈ ರೀತಿ ನೀವು ಲಾಗಿನ್ ಆದ ಬಳಿಕ ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಆ ಪುಟದಲ್ಲಿ ನಿಮ್ಮ ಆಧಾರ್ ನಂಬರ್ ಹಾಗೂ ಆಧಾರ್ ನಲ್ಲಿರುವಂತೆ ನಿಮ್ಮ ಹೆಸರನ್ನು ಇಂಗ್ಲಿಷ್ ನಲ್ಲಿಯೇ ನಮೂದಿಸಬೇಕು. ಬಳಿಕ verify ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಪಹಣಿಗೆ ಯಶಸ್ವಿಯಾಗಿ ಆಧಾರ್ ಲಿಂಕ್ ಆಗಿದೆ ಎಂದು ಈ ಕೆಳಗಿನಂತೆ ತೋರಿಸುತ್ತದೆ.