ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Yoga for Men’s: ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಈ ಆಸನಗಳು ಬೆಸ್ಟ್ !

Yoga for Mens: ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಈ ಆಸನ ಮಾಡುವುದರಿಂದ ವೀರ್ಯದಲ್ಲಿ ಹೆಚ್ಚಳ ಕಾಣಬಹುದಾಗಿದೆ.
10:00 AM Jul 17, 2024 IST | ಕಾವ್ಯ ವಾಣಿ
UpdateAt: 10:00 AM Jul 17, 2024 IST
Advertisement

Yoga for Men’s: ಇತ್ತೀಚಿಗೆ ಪುರುಷರಲ್ಲಿಯೂ ಬಂಜೆತನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಮುಖ್ಯವಾಗಿ ಪುರುಷರಲ್ಲಿನ ಅತಿಯಾದ ಧೂಮಪಾನ, ಮದ್ಯಪಾನ, ಅವರ ಒತ್ತಡದ ಜೀವನ, ಅತಿಯಾದ ಇಲೆಕ್ಟ್ರಾನಿಕ್ಸ್ ವಸ್ತುಗಳ ಬಳಕೆ ಮುಂತಾದ ಕಾರಣದಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗಿ ಸಂತಾನೋತ್ಪತ್ತಿಗೆ ತಡೆ ಉಂಟಾಗಿದೆ. ಅದಕ್ಕಾಗಿ ಪುರುಷರು ಸಿಕ್ಕ ಸಿಕ್ಕ ಮಾತ್ರೆ ಔಷಧಿ ನುಂಗುವ ಬದಲು ನೈಸರ್ಗಿಕವಾಗಿ ತಮ್ಮ ವೀರ್ಯ ಕಾಪಾಡಿಕೊಳ್ಳಲು ಪ್ರಯತ್ನ ಮಾಡುವುದು ಅಗತ್ಯವಾಗಿದೆ. ಆದ್ದರಿಂದ ಪುರುಷರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಈ ಆಸನ ಮಾಡುವುದರಿಂದ ವೀರ್ಯದಲ್ಲಿ ಹೆಚ್ಚಳ ಕಾಣಬಹುದಾಗಿದೆ.

Advertisement

Chaitra Achar: ‘ಹುಡುಗರ ಯಾವ ಬಾಡಿ ಪಾರ್ಟ್ ನಿಮಗಿಷ್ಟ?’ ಚೈತ್ರಾ ಆಚಾರ್ ಗೆ ಹೀಗೊಂದು ಪ್ರಶ್ನೆ- ಜಾಣ ಉತ್ತರ ಕೊಟ್ಟ ನಟಿ !!

Advertisement

ಹೌದು, ಪುರುಷರ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಂಜುಳಾಯೋಗ (manjulayoga.in) ಎಂಬ ಇನ್ಸ್ಟ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಳ್ಳಲಾಗಿದ್ದು ಇಲ್ಲಿ ತಿಳಿಸಿರುವ ಯೋಗ ದಿನಚರಿಯನ್ನು ಪುರುಷರು (Yoga for Men’s)  ಪಾಲನೆ ಮಾಡುವುದರಿಂದ ಸಂತಾನೋತ್ಪತ್ತಿ ಅಂಗಗಳ ಆರೋಗ್ಯವೂ ಹೆಚ್ಚಾಗುತ್ತದೆ ಎನ್ನಲಾಗಿದೆ.

ಈ ವೀಡಿಯೊದಲ್ಲಿ, ನೌಕಾಸನ ರೂಪಾಂತರಗಳು, ಬದ್ದ ಕೋನಾಸನ, ಪಶ್ಚಿಮೋತ್ಥಾನಾಸನ ಮತ್ತು ಚಿಟ್ಟೆ ಭಂಗಿಗಳ ಬಗ್ಗೆ ಮತ್ತು ಅವುಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿಸಲಾಗಿದ್ದು ಈ ನಾಲ್ಕು ಆಸನಗಳು ಕೂಡ ಪುರುಷರಿಗೆ ಉತ್ತಮ ಫಲಿತಾಂಶ ನೀಡುತ್ತದೆ.

ನೌಕಾಸನ, ಬದ್ದ ಕೋನಾಸನ, ಪಶ್ಚಿಮೋತ್ಥಾನಾಸನ ಮತ್ತು ಚಿಟ್ಟೆ ಭಂಗಿ ನಿಯಮಿತವಾಗಿ ಮಾಡುವುದರಿಂದ ಮುಖ್ಯವಾಗಿ ಮನಸ್ಸಿಗೆ ಆರಾಮ, ತೊಡೆಗಳಿಗೆ ಹಾಗೂ ಕಾಲುಗಳಿಗೆ ದೃಢತೆಯನ್ನು ಕೊಡುವುದರೊಂದಿಗೆ ಆರೋಗ್ಯ ಸುಧಾರಿಸುತ್ತದೆ. ಒತ್ತಡ ಕಡಿಮೆಯಾಗುತ್ತದೆ, ಅಲ್ಲದೆ ಈ ಆಸನಗಳು ಸ್ನಾಯುಗಳನ್ನು ಶಕ್ತಿಯುತವನ್ನಾಗಿ ಮಾಡುತ್ತದೆ.

ಈ ಆಸನಗಳನ್ನು ಬೆಳಿಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಒಂದೊಂದೇ ಹಂತವಾಗಿ ಅಭ್ಯಾಸ ಮಾಡುವುದು ಉತ್ತಮ.

Basavanagouda Yatnal: ಪ್ರತಿಭಟನೆ ಮಾಡ್ತಾರೆ, ಮತ್ತೆ ಸಿಎಂಗೆ ಫೋನ್ ಮಾಡಿ ತಪ್ಪು ತಿಳಿಬೇಡಿ ಸಾರ್ ಹೈಕಮಾಂಡ್ ಪ್ರೆಶರ್ ಅಂತಾರೆ – ಸ್ವಪಕ್ಷ ಬಿಜೆಪಿ ವಿರುದ್ಧವೇ ಯತ್ನಾಳ್ ಬಾಂಬ್ !!

Advertisement
Advertisement