ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Weight Loss Tips: ಸ್ಲಿಮ್ ಆಗಿ ಕಾಣಬೇಕೇ? ಜಸ್ಟ್ ಅಡುಗೆ ಮನೆಯಲ್ಲಿರುವ ಈ ಸೂಪರ್ ಫುಡ್ ತಿಂದ್ರೆ ಸಾಕು!

Weight Loss Tips: ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು, ತೂಕ ಇಳಿಸಿಕೊಳ್ಳಲು ನಾನಾ ಸರ್ಕಸ್ ಮಾಡಿ ಸೋತು ಹೋಗಿರಬಹುದು. ಹಾಗಿದ್ರೆ ನಿಮ್ಮ ದೇಹವನ್ನು ಸಣ್ಣಗಾಗಿಸಲು ಇಲ್ಲಿ ಹೇಳಿದಂತ ಹೊಸ ಪ್ರಯತ್ನ ಒಂದನ್ನು ಮಾಡಿ ನೋಡಿ.
12:06 PM May 12, 2024 IST | ಸುದರ್ಶನ್
UpdateAt: 12:06 PM May 12, 2024 IST
Advertisement

Weight Loss Tips: ನಿಮ್ಮ ದೇಹದ ಅಧಿಕವಾದ ತೂಕವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಅದಲ್ಲದೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು, ತೂಕ ಇಳಿಸಿಕೊಳ್ಳಲು ನಾನಾ ಸರ್ಕಸ್ ಮಾಡಿ ಸೋತು ಹೋಗಿರಬಹುದು. ಹಾಗಿದ್ರೆ ನಿಮ್ಮ ದೇಹವನ್ನು ಸಣ್ಣಗಾಗಿಸಲು ಇಲ್ಲಿ ಹೇಳಿದಂತ ಹೊಸ ಪ್ರಯತ್ನ ಒಂದನ್ನು ಮಾಡಿ ನೋಡಿ.

Advertisement

ಸಾಕಷ್ಟು ಜನ ಬೊಜ್ಜು ಕರಗಿಸಲು ವರ್ಕೌಟ್,ಜಿಮ್, ಯೋಗ, ಡಯೆಟ್, ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಇಷ್ಟಾದರೂ ಬೊಜ್ಜು ನಿಮ್ಮ ದೇಹವನ್ನು ಬಿಟ್ಟು ಕದಲುವುದಿಲ್ಲ. ಅದಕ್ಕಾಗಿ ನಿಮಗೆ ಅಡುಗೆ ಮನೆಯ ಆಹಾರ ಮೂಲಕ ಸುಲಭ ಪರಿಹಾರ (Weight Loss Tips) ಇಲ್ಲಿ ತಿಳಿಸಲಾಗಿದೆ.

ಏಲಕ್ಕಿ ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಅದರ ಮೂತ್ರವರ್ಧಕ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಏಲಕ್ಕಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.

Advertisement

ಕಾಳುಮೆಣಸಿನ ಪುಡಿಯನ್ನು ಕಷಾಯ, ಸೂಪ್, ಸಾಲಾಡ್ ಮೊದಲಾದವುಗಳ ಮೇಲೆ ಚಿಮುಕಿಸಿ ಸೇವಿಸಿದರೆ ಫೈಟೋನ್ಯೂಟ್ರಿಯಂಟುಗಳು ಅಥವಾ ಕಾಯಿಲೆಗಳ ವಿರುದ್ದ ಹೋರಾಡಿ ರಕ್ಷಣೆ ನೀಡುತ್ತದೆ. ಜೀರ್ಣಕ್ರಿಯೆಯನ್ನೂ ನೈಸರ್ಗಿಕವಾಗಿ ಉತ್ತಮಗೊಳಿಸುತ್ತವೆ.

ಮೆಂತೆ ಕುದಿಸಿ ತಣಿಸಿದ ನೀರನ್ನು ಕುಡಿಯುವುದರಿಂದ ದೇಹದ ಕಲ್ಮಶಗಳು ನಿವಾರಣೆಯಾಗುತ್ತವೆ. ಮೆಂತೆಯ ಪುಡಿಯನ್ನು ಟೀಪುಡಿ ಜೊತೆಗೆ ಕುದಿಸಿಯೂ ಕುಡಿಯಬಹುದು. ಇದರ ಅಧಿಕ ಕರಗುವ ನಾರಿನಂಶ ಜೀರ್ಣಕ್ರಿಯೆಯನ್ನೂ ಸುಲಭಗೊಳಿಸುತ್ತದೆ.

ಸೋಂಪು ಸೇವನೆಯಿಂದ ಉತ್ತಮ ಜೀರ್ಣಕ್ರಿಯೆ ನೈಸರ್ಗಿಕವಾಗಿ ಆರೋಗ್ಯಕರ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಮೂತ್ರವರ್ಧಕ ಮತ್ತು ಹಸಿವು ನಿವಾರಕವಾಗಿದೆ. ಫೆನ್ನೆಲ್ ಟೀ ಕುಡಿಯುವ ಮೂಲಕ ನೀವು ವಿಟಮಿನ್ ಎ, ಸಿ ಮತ್ತು ಡಿ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಅನೇಕ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: ದೇಶಾದ್ಯಂತ ಕೆಂಪು ಲಿಪ್‌ಸ್ಟಿಕ್ ಬ್ಯಾನ್ ; ಬಳಸಿದರೆ ಕಠಿಣ ಶಿಕ್ಷೆ !!ಹೊಸ ಆದೇಶ

ಅರಿಶಿನವು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಇದು ಆಂಟಿಬಯೋಟಿಕ್ ಆಗಿದ್ದು ಅಲ್ಲದೇ ಕರ್ಕ್ಯುಮಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ನೀವು ಆಹಾರದಲ್ಲಿ ಜೀರಿಗೆ ಸೇರಿಸುವುದರಿಂದ ದೇಹವು ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ದಾಲ್ಚಿನ್ನಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಚಹಾದ ರೂಪದಲ್ಲಿ ಕುಡಿಯುವುದರಿಂದ ಬೇಗನೆ ಕೊಬ್ಬು ಕರಗಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Gowrishankar temple Jammu Kashmir: ಹಿಂದೂ ದೇವಾಲಯಕ್ಕೆ ಭೂಮಿ ನೀಡಿದ ಮುಸ್ಲಿಮರು : ಹಿಂದು ಮುಸ್ಲಿಂ ಸೌಹಾರ್ದತೆಗೆ ಇದೇ ಪ್ರತೀಕ ಎಂದ ನೆಟ್ಟಿಗರು

Advertisement
Advertisement