For the best experience, open
https://m.hosakannada.com
on your mobile browser.
Advertisement

Viral Video: ರಾತ್ರಿ ಮಲಗಿದವನ ಚಡ್ಡಿಯೊಳಗೆ ಸೇರಿದ ನಾಗರಹಾವು - ಹೊರ ಬರುವ ಮುನ್ನ ಒಳಗೆ ಮಾಡಿದ್ದೇನು?

Viral Video: ಹಾವು ಮಲಗಿದ ಮನುಷ್ಯನ ಚಡ್ಡಿಯೊಳಗೆ ಹೊಕ್ಕುತ್ತದೆ ಅಂದ್ರೆ ಸುಮ್ಮನಿರಲು ಸಾಧ್ಯವೇ ಹೇಳಿ? ಅದೂ ಕೂಡ ನಾಗರಹಾವು!
12:36 PM Jun 29, 2024 IST | ಸುದರ್ಶನ್
UpdateAt: 12:38 PM Jun 29, 2024 IST
viral video  ರಾತ್ರಿ ಮಲಗಿದವನ ಚಡ್ಡಿಯೊಳಗೆ ಸೇರಿದ ನಾಗರಹಾವು   ಹೊರ ಬರುವ ಮುನ್ನ ಒಳಗೆ ಮಾಡಿದ್ದೇನು
Advertisement

Viral Video: ಸೋಷಿಯಲ್ ಮೀಡಿಯಾಗಳಲ್ಲಿ ಇದುವರೆಗೂ ಎಂತೆಂತಾ ವಿಚಾರವಾಗಳು ವೈರಲ್(Viral Video) ಆಗಿ ಹಲವರಿಗೆ ಮನರಂಜನೆ, ಬೇಸರ, ಕೋಪ-ತಾಪ, ಸಂತೋಷ, ದುಃಖ ಎಲ್ಲವನ್ನೂ ಉಂಟುಮಾಡಿದೆ. ಆದರೆ ಇದೀಗ ವೈರಲ್ ಆಗಿಯೋ ಸುದ್ದಿ ಕೇಳಿದ್ರೆ ನಿವೇ ಒಮ್ಮೆಲೆ ಹೌಹಾರುತ್ತೀರಾ!! ಯಾಕೆಂದರೆ ಹಾವುಗಳು ಮಳೆಗಾಲದಲ್ಲಿ ಮನೆಗೆ ಬರುವುದು ಕಾಮನ್. ಆದ್ರೆ ಮನೆಗೆ ಬಂದು, ಮಲಗಿದ ಮನುಷ್ಯನ ಚಡ್ಡಿಯೊಳಗೆ ಹೊಕ್ಕುತ್ತದೆ ಅಂದ್ರೆ ಸುಮ್ಮನಿರಲು ಸಾಧ್ಯವೇ ಹೇಳಿ? ಅದೂ ಕೂಡ ನಾಗರಹಾವು(Cobra)

Advertisement

Karkala: ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ನಾಯಿ; ಎರಡು ತಿಂಗಳ ಹಿಂದಷ್ಟೇ ಮದುವೆಯಾದ ಯುವತಿ ಸಾವು

ಹೌದು, ಹಗಲಿಡಿಯ ಕೆಲಸದಿಂದ ಸುಸ್ತಾಗಿ, ರಾತ್ರಿ ವೇಳೆ ಮಲಗಿ ಗಾಢವಾದ ನಿದ್ರೆಗೆ ಜಾರಿದ ವ್ಯಕ್ತಿಯ ಚಡ್ಠಿಯೊಳಗೆ ನಾಗರಹಾವೊಂದು ಸೇರಿಕೊಂಡುಬಿಟ್ಟಿದೆ !! ಆದರೆ, ಆತನಿಗೆ ಆಗ ನಿದ್ದೆ ಬಂದಿತ್ತು. ಬಳಿಕ ಎಚ್ಚರವಾದಾಗ ಆ ವ್ಯಕ್ತಿಗೆ ಗೊತ್ತಾಗಿದೆ. ಮುಂದೇನಾಯ್ತು? ಆ ಹುಡುಗ ಏನು ಮಾಡಿದ ಎಂಬ ಎಲ್ಲಾ ವಿವರ ಇಲ್ಲಿದೆ ನೋಡಿ.

Advertisement

ಥಾಯ್ಲೆಂಡ್‌ನಲ್ಲಿ(Thailand) ಇತ್ತೀಚೆಗೆ ಯುವಕನೊಬ್ಬ ರಾತ್ರಿ ಮಲಗಿದ್ದಾನೆ. ಇಡೀ ದಿನ ಸುತ್ತಾಡಿದ ಸುಸ್ತೋ ಏನೋ, ಗಾಢವಾಗಿ ಆತನನ್ನು ನಿದ್ರಾದೇವತೆ ಆವರಿಸಿದ್ದಾಳೆ. ಇದೇ ವೇಳೆ ಎಲ್ಲಿಂದಲೋ ಮೆಲ್ಲಗೆ ಬಂದ ಹಾವು, ನಿಧಾನವಾಗಿ ಯುವಕನ ಚಡ್ಡಿಯೊಳಗೆ (ಶಾರ್ಟ್ಸ್)‌ ಪ್ರವೇಶಿಸಿದೆ. ಇಡೀ ರಾತ್ರಿ ಹಾವು ಆತನ ಚಡ್ಡಿಯೊಳಗೆ ಕಳೆದಿದ್ದು, ಯುವಕನು ಬೆಳಗ್ಗೆ ಎದ್ದು ನೋಡಿದಾಗ ಬರೀ ಆಘಾತವಲ್ಲ, ಮರ್ಮಾಘಾತವಾಗಿದೆ.


ಪುಣ್ಯಕ್ಕೆ ಅವನು ಮಾಲಗಿದ್ದಾಗ ಅಲುಗಾಡದೆ ಮಲಗಿದ್ದರಿಂದ ಆತನಿಗೆ ಹಾವು ಕಚ್ಚಿಲ್ಲ. ಆ ವೇಳೆ ಆತ ಸ್ವಲ್ಪ ಅಲುಗಾಡಿದ್ದರೂ ಹಾವು ಕಚ್ಚುತ್ತಿತ್ತು. ಅಲ್ಲದೆ ಅಪಾಯದ ಮುನ್ಸೂಚನೆ ಅರಿತ ಯುವಕನು ಅಲುಗಾಡದೆ ಚಡ್ಡಿಯೊಳಗೆ ಏನಿದೆ ಎಂಬುದನ್ನು ನೋಡಿದ್ದಾನೆ. ಪುಣ್ಯಕ್ಕೆ ಆತನಿಗೆ ತಕ್ಷಣ ಚಡ್ಡಿಯಲ್ಲಿ ಹಾವು ಸೇರಿವುದು ಅವನ ಅರಿವಿಗೆ ಬಂದಿದೆ. ಆಗ ಕೂಡಲೇ ಅವನು ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸುದ್ದಿ ತಿಳಿದ ಗೆಳೆಯರು ಕೂಡ ಆಘಾತಕ್ಕೊಳಗಾಗಿದ್ದು, ಕೂಡಲೇ ಸ್ಥಳೀಯ ಉರಗ ತಜ್ಞರನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.
ಬಳಿಕ, ಉರಗ ತಜ್ಞರು ಬಂದು ಹಾವು ಹಿಡಿದು ಆತನ ಜೀವ ಉಳಿಸಿದ್ದಾರೆ. ಉರಗ ತಜ್ಞ ಆ ಹಾವನ್ನು ಹೊರಗೆ ತೆಗೆದ ಬಳಿಕ ಅದು ನಾಗರಹಾವು ಎಂದು ತಿಳಿದುಬಂದಿದೆ. ಈ ವೇಳೆ ಯುವಕ ಭಾರೀ ಶಾಕ್‌ಗೆ ಆಗಿದೆ!

ಯುವಕನ ಮನೆಗೆ ಬಂದ ಉರಗ ತಜ್ಞನು ಯುವಕನ ಚಡ್ಡಿಯಿಂದ ನಿಧಾನವಾಗಿ ಹಾವನ್ನು ಹೊರತೆಗೆದಿದ್ದಾರೆ. ಹಾವು ನೋಡಿದ ಕ್ಷಣದಿಂದ, ಗೆಳೆಯರಿಗೆ ಕರೆ ಮಾಡಿ, ಅವರು ಉರಗ ತಜ್ಞನನ್ನು ಕರೆದುಕೊಂಡು ಬಂದು, ಆತ ಹಾವನ್ನು ಹೊರಗೆ ತೆಗೆಯುವವರೆಗೂ ಯುವಕನು ಸ್ವಲ್ಪವೂ ಅಲುಗಾಡದೆ ಇದ್ದಿದ್ದು, ಹಾವು ಕೂಡ ಕೋಪದಲ್ಲಿ ಈತನಿಗೆ ಕಚ್ಚದೆ ಇದ್ದಿದ್ದು ಆತನ ಅದೃಷ್ಟವೇ ಸರಿ. ಇನ್ನು, ಯುವಕನ ಚಡ್ಡಿಯಿಂದ ಹಾವನ್ನು ತೆಗೆದಿರುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

Putturu: ಪುತ್ತೂರಿನಲ್ಲಿ ಫ್ರಿಡ್ಜ್‌ ಸ್ಫೋಟ; ಸುಟ್ಟುಕರಕಲಾದ ಮನೆ, ಕಲ್ಲುರ್ಟಿ ದೈವದ ಪೀಠಕ್ಕೆ ತಗಲದ ಅಗ್ನಿ

Advertisement
Advertisement
Advertisement