ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Viral News: ಉಸಿರಾಟದ ವೇಳೆ ಶ್ವಾಸಕೋಶ ಹೊಕ್ಕ ಮೂಗುಬೊಟ್ಟು; ಶಸ್ತ್ರಚಿಕಿತ್ಸೆಯ ಮೊರೆ ಹೋದ ಮಹಿಳೆ

Viral News: ಮೂಗುಬೊಟ್ಟೊಂದು ಉಸಿರಾಟದ ಸಮಯದಲ್ಲಿ ಆಕಸ್ಮಿಕವಾಗಿ ಶ್ವಾಸಕೋಶದೊಳಕ್ಕೆ ಹೋಗಿದ್ದು, ಈ ಕಾರಣದಿಂದ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆಗೊಳಗಾದ ಘಟನೆ
12:04 PM May 01, 2024 IST | ಸುದರ್ಶನ್
UpdateAt: 12:07 PM May 01, 2024 IST
Advertisement

Viral News: ಮೂಗುಬೊಟ್ಟೊಂದು ಉಸಿರಾಟದ ಸಮಯದಲ್ಲಿ ಆಕಸ್ಮಿಕವಾಗಿ ಶ್ವಾಸಕೋಶದೊಳಕ್ಕೆ ಹೋಗಿದ್ದು, ಈ ಕಾರಣದಿಂದ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆಗೊಳಗಾದ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. 35 ವರ್ಷದ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಮೂಗುಬೊಟ್ಟು ಉಸಿರಾಟದ ಸಮಯದಲ್ಲಿ ಶ್ವಾಸಕೋಶಕ್ಕೆ ಎರಡು ತಿಂಗಳ ಹಿಂದೆ ಸೇರಿತ್ತು.

Advertisement

ಇದನ್ನೂ ಓದಿ:  Windfall Tax: ಕಚ್ಚಾ ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ ಕೇಂದ್ರ ಸರಕಾರ

ಮೊದಲಿಗೆ ಮಹಿಳೆ ವರ್ಷಾ ಸಾಹು ಈ ಕುರಿತು ನಿರ್ಲಕ್ಷ್ಯ ಮಾಡಿದ್ದರು. ಮಲ ವಿಸರ್ಜನೆ ಮಾಡುವಾಗ ಹೊರ ಬರುತ್ತದೆ ಎಂದು ನಂಬಿ ಕುಳಿತಿದ್ದು. ಆದರೆ ದಿನ ಹೆಚ್ಚಾಗುತ್ತಿದ್ದಂತೆ ಅಸ್ವಸ್ಥತೆ, ಉಸಿರಾಟದ ತೊಂದರೆ ಉಂಟಾದಾಗ ವೈದ್ಯರನ್ನು ಸಂಪರ್ಕ ಮಾಡಿದಾಗ, ನಂತರ ಶಸ್ತ್ರಚಿಕಿತ್ಸೆ ಮೂಲಕ ಮೂಗುಬೊಟ್ಟನ್ನು ಹೊರಕ್ಕೆ ತೆಗೆಯಲಾಯಿತು. ಇದೊಂದು ಅತ್ಯಂತ ಅಪರೂಪದ ವೈದ್ಯಕೀಯ ಪ್ರಕರಣ ಎಂದು ವೈದ್ಯರು ಹೇಳಿದ್ದಾರೆ.

Advertisement

ಇದನ್ನೂ ಓದಿ:  World Tallest Building: ಬುರ್ಜ್ ಖಲೀಫಾಕ್ಕಿಂತ ಎತ್ತರದ ಕಟ್ಟಡ ಎಲ್ಲಿದೆ ಗೊತ್ತೇ? ಇದರ ಎತ್ತರ ನಿಮ್ಮನ್ನು ಖಂಡಿತ ಬೆರಗಾಗಿಸುತ್ತೆ

ಮೂಗುಬೊಟ್ಟಿನ ತಿರುಪು ಸಡಿಲವಾಗಿದ್ದು, ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ಆಳವಾಗಿ ಉಸಿರು ತೆಗೆದುಕೊಂಡಾಗ ಅದು ಶ್ವಾಸಕೋಶಕ್ಕೆ ಹೋಗಿದೆ ಎಂದು ಗೊತ್ತಿರಲಿಲ್ಲ. ಹೊಟ್ಟೆ ಭಾಗ ತಲುಪಿರುತ್ತದೆ, ಮಲ ವಿಸರ್ಜನೆ ಸಮಯದಲ್ಲಿ ಬರುತ್ತದೆ ಎಂದು ಭಾವಿಸಿದ್ದೆ ಎಂದು ವರ್ಷಾ ಸಾಹು ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ತಿರುಪು ಒಳಗೆ ಹೋದ ನಂತರ ವರ್ಷಾ ಸಾಹು ಅವರಿಗೆ ಕೆಮ್ಮು ಪ್ರಾರಂಭವಾಗಿದ್ದು, ವೈದ್ಯರ ಬಳಿ ಹೋದಾಗ ಅಲ್ಲಿ ಮೂಗಿನೊಳಗಿನಿಂದ ಹೋದ ತಿರುಪು ಬಗ್ಗೆ ಹೇಳಿದ್ದಾರೆ. ನಂತರ ವೈದ್ಯರ ಸಲಹೆ ಪಡೆದು ಸಿಟಿ ಸ್ಕ್ಯಾನ್‌ ಮಾಡಿದಾಗ ಶ್ವಾಸಕೋಶದಲ್ಲಿ ತಿರುಪು ಪತ್ತೆಯಾಗಿತ್ತು. ಈ ಘಟನೆ ನಡೆದು ಎರಡು ತಿಂಗಳ ನಂತರ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ.

Advertisement
Advertisement