For the best experience, open
https://m.hosakannada.com
on your mobile browser.
Advertisement

Uttar Pradesh: ಉರ್ದು ಭಾಷೆ ಮೇಲೂ ಕಣ್ಣಿಟ್ಟ ಹಿಂದೂ ಹುಲಿ - ಹೊಸ ಕಾನೂನು ತಂದು ಮಹತ್ವದ ಬದಲಾವಣೆ ಘೋಷಿಸಿದ ಯೋಗಿ ಸರ್ಕಾರ!!

05:43 PM Dec 08, 2023 IST | ಅಶ್ವಿನಿ ಹೆಬ್ಬಾರ್
UpdateAt: 05:59 PM Dec 08, 2023 IST
uttar pradesh  ಉರ್ದು ಭಾಷೆ ಮೇಲೂ ಕಣ್ಣಿಟ್ಟ ಹಿಂದೂ ಹುಲಿ    ಹೊಸ ಕಾನೂನು ತಂದು ಮಹತ್ವದ ಬದಲಾವಣೆ ಘೋಷಿಸಿದ ಯೋಗಿ ಸರ್ಕಾರ
image source: The print.in
Advertisement

Uttar Pradesh: ಉತ್ತರ ಪ್ರದೇಶ( Uttar Pradesh)ಸರ್ಕಾರ ಉರ್ದು ಭಾಷೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಂಡಿದೆ.ಯೋಗಿ ಆದಿತ್ಯನಾಥ್(Yogi Adityanath)ಸರ್ಕಾರವು ಉತ್ತರ ಪ್ರದೇಶದಲ್ಲಿ ನಡೆಯಲಿರುವ ನೋಂದಣಿಗಾಗಿ 1908 ರಲ್ಲಿ ಮಾಡಿದ ನೋಂದಣಿ ಕಾಯಿದೆಯಲ್ಲಿ ಬದಲಾವಣೆಗಳನ್ನು ತರಲು ಮುಂದಾಗಿದೆ.

Advertisement

ಉತ್ತರ ಪ್ರದೇಶ ಸರ್ಕಾರ ನೋಂದಾವಣೆ ದಾಖಲೆಗಳಿಂದ ಉರ್ದು-ಪರ್ಷಿಯನ್ ಪದಗಳನ್ನು ತೆಗೆದುಹಾಕುವ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದಲ್ಲದೆ, ಈಗ ಸಬ್ ರಿಜಿಸ್ಟ್ರಾರ್ ಉರ್ದು ಪರೀಕ್ಷೆಯನ್ನು ಬರೆಯಬೇಕಾಗಿಲ್ಲ. ಈ ಮೊದಲು ಲೋಕಸೇವಾ ಆಯೋಗದಿಂದ ಆಯ್ಕೆಯಾದ ನಂತರ ಕೂಡ ಸಬ್ ರಿಜಿಸ್ಟ್ರಾರ್ ಖಾಯಂ ಉದ್ಯೋಗ ಪಡೆಯಲು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿತ್ತು. ಅಧಿಕೃತ ದಾಖಲೆಗಳಲ್ಲಿ ಉರ್ದು ಮತ್ತು ಪರ್ಷಿಯನ್ ಪದಗಳ ಬಳಕೆ ಕಡ್ಡಾಯವಾಗಿದ್ದ ಹಿನ್ನೆಲೆ ಈ ಈ ಪದಗಳ ಬದಲಿಗೆ ಸಾಮಾನ್ಯ ಹಿಂದಿ ಪದಗಳನ್ನು ಬಳಸಲು ಯೋಗಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಇದನ್ನು ಮಾಡಲು, ನೋಂದಣಿ ಕಾಯಿದೆ 1908 ಅನ್ನು ತಿದ್ದುಪಡಿ ಮಾಡಲಾಗುತ್ತದೆ.

ಇದನ್ನು ಓದಿ: Lok Sabha: ಬಿಜೆಪಿಯ ಈ ಸಂಸದರಿಗೆ ಮನೆ ಖಾಲಿ ಮಾಡುವಂತೆ ಬಂತು ನೋಟಿಸ್- ಯಾಕಾಗಿ, ಸಂಸದರು ಮಾಡಿದ್ದಾದ್ರೂ ಏನು?

Advertisement

ಸರ್ಕಾರಿ ದಾಖಲೆಗಳಲ್ಲಿ ಉರ್ದು ಮತ್ತು ಪರ್ಷಿಯನ್ ಭಾಷೆಗಳನ್ನು ವ್ಯಾಪಕವಾಗಿ ಬಳಸುವ ಹಿನ್ನೆಲೆ ನೋಂದಾವಣೆ ಅಧಿಕಾರಿಗಳು ಕೂಡ ಉರ್ದು ಭಾಷೆಗಳನ್ನು ಕಲಿಯಬೇಕಾಗಿತ್ತು. ಇದಕ್ಕಾಗಿ ಸಬ್ ರಿಜಿಸ್ಟ್ರಾರ್ ಮಟ್ಟದಿಂದ ನೇಮಕಗೊಂಡ ಅಧಿಕಾರಿಗಳು ಲೋಕಸೇವಾ ಆಯೋಗದಿಂದ ಆಯ್ಕೆಯಾದ ನಂತರ ಉರ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿತ್ತು. ಈ ಪರೀಕ್ಷೆಯ ಬದಲಿಗೆ ಕಂಪ್ಯೂಟರ್ ಜ್ಞಾನವನ್ನು ತೆಗೆದುಕೊಳ್ಳಲಾಗುವುದು ಎಂದು ಯೋಗಿ ಆದಿತ್ಯನಾಥ್ ಸರ್ಕಾರ ತೀರ್ಮಾನ ಕೈಗೊಂಡಿದೆ. ಉರ್ದು ಮತ್ತು ಪರ್ಷಿಯನ್ ಪದಗಳನ್ನು ಎಲ್ಲರಿಗೂ ಅರ್ಥವಾಗುವ ಸರಳ ಹಿಂದಿ ಪದಗಳೊಂದಿಗೆ ಬದಲಿಸಲು 1908 ರ ಸ್ಟ್ಯಾಂಪ್ ಮತ್ತು ನೋಂದಣಿ ಕಾಯಿದೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗುತ್ತಿದೆ. ರಾಜ್ಯ ಸರ್ಕಾರ ಶೀಘ್ರವೇ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಲಿದೆ.

Advertisement
Advertisement
Advertisement