ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Urine Infection: ನಿಮ್ಮ ಮೂತ್ರದಲ್ಲಿ ವಾಸನೆ ಇದೆಯಾ!! ಮನೆ ಮದ್ದಿನಿಂದ ಪರಿಹಾರವಾಗುತ್ತದೆ

10:12 PM Feb 23, 2024 IST | ಸುದರ್ಶನ್
UpdateAt: 10:12 PM Feb 23, 2024 IST
Advertisement

ಕೆಲವರು ಮೂತ್ರ ವಿಸರ್ಜನೆ ಮಾಡುವಾಗ ವಾಸನೆ ಬರುತ್ತದೆ ಎಂದು ಹೇಳುವುದು ಸಹಜ. ಆದ್ರೆ ಈ ವಾಸನೆ ಕೆಲವರಲ್ಲಿ ವಿಪರೀತವಾಗಿ ಬರುವುದು ಒಳ್ಳೆಯದಲ್ಲ. ಇದರಿಂದ ಮುಕ್ತಿ ಪಡೆಯಲು ಮನೆಮದ್ದುಗಳನ್ನು ಬಳಸಿದರೆ ಸಾಕು.

Advertisement

ನಮ್ಮ ಮೂತ್ರವು ಅಮೋನಿಯದ ವಾಸನೆಯನ್ನು ಹೊಂದಿರುತ್ತದೆ. ಮುಖ್ಯವಾಗಿ ಹೆಚ್ಚು ನೀರು ಕುಡಿಯದಿರುವುದೂ ಸಹ ವಾಸನೆಗೆ ಕಾರಣವಾಗುತ್ತದೆ. ಇದನ್ನು ನಿರ್ಜಲೀಕರಣ ಎನ್ನಬಹುದು.

ಸಾಮಾನ್ಯವಾಗಿ ಬಿಟ್ಟು ವಾಸನೆಯು ಅಧಿಕವಾಗಿ ಬಂದರೆ ನಮ್ಮ ದೇಹದಲ್ಲಿ ಯಾವುದೋ ಅಂಗಾಗ ಸಮಸ್ಯೆ ಇರಬಹುದು ಎಂದು ಉಹಿಸಬಹುದು. ಹಾಗೂ ನಮ್ಮ ಆಹಾರ ಪದ್ಧತಿ, ಅತಿಯಾದ ಔಷಧಿಗಳ ಸೇವನೆ, ಮೂತ್ರ ವ್ಯವಸ್ಥೆಯಲ್ಲಿ ಸೋಂಕು,ಯಕೃತ್ ಕಾಯಿಲೆ, ಹಾಗೂ ರಕ್ತದ ಒತ್ತಡಕ್ಕೂ ವಾಸನೆ ಬರುತ್ತದೆ.

Advertisement

ಹೆಚ್ಚು ನೀರು ಕುಡಿಯಿರಿ 

ಮನುಷ್ಯನ ದೇಹ ಶೇಕಡಾ 70 ರಷ್ಟು ನೀರಿನಿಂದಲೇ ಆಗಿದೆ. ಆದ ಕಾರಣ ಆಗಾಗ ನೀರನ್ನು ಕುಡಿಯಬೇಕು. ಕನಿಷ್ಟ ಏಳು ಎಂಟು ಲೋಟ ನೀರು ದಿನಕ್ಕೆ ಕುಡಿಯಬೇಕು. ಇತ್ತೀಚಿನ ಸಂಶೋಧನೆಯ ಪ್ರಕಾರ ಮನುಷ್ಯ ಅವನ ತೂಕದ ಆಧಾರದಲ್ಲಿ ನೀರು ಕುಡಿಯಬೇಕು . ಪ್ರತಿ ಕೆಜಿಗೆ 35 ಮಿಲಿ ಲೀಟರ್ ನೀರನ್ನು ಕುಡಿಯಬೇಕು. 60 ಕೆಜಿ ಇರುವವರು 2.1 ಲೀಟರ್ ನೀರು ಕುಡಿಯಬೇಕು ಎಂದು ತಿಳಿಸಿದೆ.

ಆರೋಗ್ಯಕರ ಬ್ಯಾಕ್ಟೀರಿಯಾಗಳು

ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಡಲು ಕೆಲವು ಬ್ಯಾಕ್ಟೀರಿಯಾಗಳು ಸಹಾಯ ಮಾಡುತ್ತವೆ. ಇವುಗಳು ಮೊಸರು ಹಾಗೂ ಇತರ ಆಹಾರ ಪದಾರ್ಥಗಳಲ್ಲಿ ಇರುತ್ತವೆ. ನಮ್ಮ ಮೆದುಳಿಗೂ ಇವುಗಳು ಬೇಕಾಗಿವೆ. ಟೋಫು ಮತ್ತು ಚೀಸ್ ಸೇವನೆಯಿಂದ ಮೂತ್ರದ ವಾಸನೆಯನ್ನು ಕಡಿಮೆ ಮಾಡಬಹುದು.

ಕ್ರ್ಯಾನ್‌ಬೆರಿ ಜ್ಯೂಸ್

ನಿಮ್ಮ ಮೂತ್ರನಾಳದಲ್ಲಿ ಏನಾದರೂ ತೊಂದರೆ ಇದ್ದರೆ, ಈ ಜ್ಯೂಸನ್ನು ಸೇವನೆ ಮಾಡುವುದರಿಂದ ಸರಿ ಹೋಗುತ್ತದೆ. ನಮ್ಮ ಮೂತ್ರ ನಾಳಗಳು ಸಹ ಸ್ವಚ್ಚ ವಾಗುತ್ತವೆ. ಈ ಜ್ಯೂಸ್ ಬ್ಯಾಕ್ಟೀರಿಯಾಗಳನ್ನು ಕೊಳ್ಳುವ ತಾಕತ್ತನ್ನು ಹೊಂದೆದೆ. ಸಕ್ಕರೆ ಇಲ್ಲದ ಜ್ಯೂಸ್ ಕುಡಿಯುವುದು ಉತ್ತಮ

ವಿಟಮಿನ್ ಸಿ

ನಮ್ಮ ಆಹಾರದಲ್ಲಿ ವಿಟಮಿನ್ ಸಿ ಸೇವನೆ ಬಹಳ ಮುಖ್ಯ. ಇದು ನಮ್ಮ ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಳು ಮೆಣಸು, ಕಿತ್ತಳೆ ಕಿವಿ ಹಣ್ಣು ಮೊದಲಾದವುಗಳನ್ನು ಸೇವಿಸಿ. ಒಂದು ವೇಳೆ ನಿಮಗೆ ಮೂತ್ರ ಕೋಶದ ತೊಂದರೆ ಇದ್ದರೆ ಕಾಳು ಮೆಣಸು ಸೇವಿಸಬೇಡಿ.

ಶತಾವರಿ ಸೊಪ್ಪು ಸೇವನೆ

ಈ ಸೊಪ್ಪು ಒಳ್ಳೆಯ ಅಂಶಗಳನ್ನು ಹೊಂದಿದೆ. ಆದರೆ ಇದು ಸಹ ಹೆಚ್ಚು ವಾಸನೆ ಬರಲು ಕಾರಣವಾಗುತ್ತವೆ. ಇದರ ಬದಲಿಗೆ ಬಾಳೆ ಹಣ್ಣು ಇತರ ಹಣ್ಣುಗಳನ್ನು ಸೇವಿಸಿ.

ಹಸಿರು ಟೀ ಕುಡಿಯಿರಿ.

ಇದರಲ್ಲಿ ಆಮ್ಲಗಳು ಅಧಿಕವಾಗಿರುತ್ತವೆ. ಇವು ನಮ್ಮ ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ. ಇದು ನೆಫ್ರಾನ್‌ಗಳನ್ನು ಸಂಕುಚಿತ ಮಾಡುತ್ತದೆ. ಈ ಕಾರಣದಿಂದಲೇ ನಮಗೆ ಮೂತ್ರ ಆರ್ಜೆಟ್ ಆಗುವುದು. ಹಸಿರು ಟೀ ಕುಡಿದ ನಂತರ ಹೆಚ್ಚು ನೀರು ಕುಡಿಯಿರಿ.

ಬೆಳ್ಳುಳ್ಳಿ

ನೀವು ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿ. ಇದು ಸೋಂಕನ್ನು ನಿವಾರಿಸುತ್ತದೆ. ಮಾಸಲೆ ಪಾದರ್ಥಗಳನ್ನು ಕಡಿಮೆ ತಿನ್ನಿ. ಕೊತ್ತಮರಿ ಸೊಪ್ಪನ್ನು ಸೇವನೆ ಮಾಡಬಹುದು.

Related News

Advertisement
Advertisement