UPSC ನೇಮಕಾತಿ- ಸ್ನಾತಕೋತ್ತರ ಪದವೀಧರರಿಗೆ ಸುವರ್ಣಾವಕಾಶ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
UPSC: Union Public services Commission ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 48 ಇಂಡಿಯನ್ ಎಕನಾಮಿಕ್ ಸರ್ವೀಸ್/ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಎಕ್ಸಾಮಿನೇಶನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 30, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಹಾಕಿ.
ಹುದ್ದೆಯ ಮಾಹಿತಿ:
ಇಂಡಿಯನ್ ಎಕನಾಮಿಕ್ ಸರ್ವೀಸ್ - 18
ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್- 30
ವಿದ್ಯಾರ್ಹತೆ:
ಇಂಡಿಯನ್ ಎಕನಾಮಿಕ್ ಸರ್ವೀಸ್ - ಎಕನಾಮಿಕ್ಸ್/ ಅಪ್ಲೈಡ್ ಎಕನಾಮಿಕ್ಸ್/ ಬ್ಯುಸಿನೆಸ್ ಎಕನಾಮಿಕ್ಸ್/ ಎಕನಾಮೆಟ್ರಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ
ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್- ಸ್ಟಾಟಿಸ್ಟಿಕ್ಸ್/ಮ್ಯಾಥಮೆಟಿಕಲ್ ಸ್ಟಾಟಿಸ್ಟಿಕ್ಸ್/ ಅಪ್ಲೈಡ್ ಸ್ಟಾಟಿಸ್ಟಿಕ್ಸ್ ಪದವಿ, ಸ್ನಾತಕೋತ್ತರ ಪದವಿ
ಇದನ್ನೂ ಓದಿ: SSLC ಪಾಸ್ ಆದವರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ಬಂಪರ್ ಉದ್ಯೋಗಾವಕಾಶ!l
ವಯೋಮಿತಿ:
ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2024ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
SC/ST/ಮಹಿಳೆ/PwBD ಅಭ್ಯರ್ಥಿಗಳು: ಇಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.200/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ
ವೇತನ:
ನಿಗದಿಪಡಿಸಿಲ್ಲ.
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
https://upsconline.nic.in/upsc/OTRP/ apply here
ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.