For the best experience, open
https://m.hosakannada.com
on your mobile browser.
Advertisement

Union Budget 2024: ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ 'ದೊಡ್ಡ ಉಡುಗೊರೆ'

Union Budget 2024: ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ  ಬಜೆಟ್‌ನಲ್ಲಿ ಸಂತಸದ ಸುದ್ದಿ ನೀಡಲಾಗಿದೆ.
12:27 PM Jul 23, 2024 IST | ಸುದರ್ಶನ್
UpdateAt: 12:34 PM Jul 23, 2024 IST
union budget 2024  ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ  ದೊಡ್ಡ ಉಡುಗೊರೆ
Advertisement

Union Budget 2024: ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ  ಬಜೆಟ್‌ನಲ್ಲಿ ಸಂತಸದ ಸುದ್ದಿ ನೀಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆಯಲ್ಲಿ ಆಂಧ್ರಪ್ರದೇಶಕ್ಕೆ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ಆಂಧ್ರಪ್ರದೇಶವು ತನ್ನ ರಾಜಧಾನಿಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ 15,000 ಕೋಟಿ ರೂಪಾಯಿಗಳ ಬೆಂಬಲವನ್ನು ಪಡೆಯಲಿದೆ ಎಂದು ಸೀತಾರಾಮನ್ ಘೋಷಿಸಿದ್ದಾರೆ. ಟಿಡಿಪಿ ಎನ್‌ಡಿಎಯಲ್ಲಿ ಮಿತ್ರ ಪಕ್ಷವಾಗಿದ್ದು, ಕಿಂಗ್ ಮೇಕರ್ ಪಾತ್ರವನ್ನೂ ವಹಿಸಿದೆ.

Advertisement

ಟಿಡಿಪಿಯಿಂದ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸುವ ಬೇಡಿಕೆ ಇತ್ತು. ಇದಕ್ಕಾಗಿ ಅವರಿಗೆ 15 ಸಾವಿರ ಕೋಟಿ ನೀಡಬೇಕು. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರದ ಅಭಿಪ್ರಾಯಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ಈಗ ಹೊಸ ರಾಜಧಾನಿ ನಿರ್ಮಾಣಕ್ಕೆ ಹಣ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಮರಾವತಿಯು ವಿಜಯವಾಡದ ಸಮೀಪದಲ್ಲಿದೆ.

India Budget 2024: ಯುವಕರಿಗೆ ಉದ್ಯೋಗ ಕಲ್ಪಿಸಲು ಹಣಕಾಸು ಸಚಿವರಿಂದ 3 ಯೋಜನೆಗಳಿಗೆ ಚಾಲನೆ; ಮೊದಲ ಬಾರಿಗೆ ಉದ್ಯೋಗ ಪಡೆಯುವವರಿಗೆ ಸರ್ಕಾರ ನೀಡಲಿದೆ 15,000 ರೂ.

Advertisement

Advertisement
Advertisement
Advertisement