For the best experience, open
https://m.hosakannada.com
on your mobile browser.
Advertisement

Wayanad: ಪ್ರವಾಸಿಗರ ತಾಣವೀಗ ಮರಣ ಮೃದಂಗ ಸ್ಮಶಾನ: 300ಕ್ಕೂ ಹೆಚ್ಚು ಬಲಿ ಪಡೆದ ವಯನಾಡ್ ಮಹಾಮಳೆ, ರಾತ್ರೋ ರಾತ್ರಿ ಸೇನೆಯಿಂದ ನಿರ್ಮಾಣವಾಯ್ತು ಸೇತುವೆ !

Wayanad: ಭಾರಿ ಹವಾಮಾನ ವೈಪರಿತ್ಯ ನಡುವೆಯೋ ಸೇನೆ ಮತ್ತು ಎನ್‌ಡಿಆರ್‌ಎಫ್ (NDRF) ತಮ್ಮ ಪ್ರಯತ್ನ ಬಿಡದೆ ಹುಡುಕುವ ಕೆಲಸವನ್ನು ಮಾಡುತ್ತಿದೆ.
08:21 AM Aug 02, 2024 IST | ಸುದರ್ಶನ್
UpdateAt: 08:21 AM Aug 02, 2024 IST
wayanad  ಪ್ರವಾಸಿಗರ ತಾಣವೀಗ ಮರಣ ಮೃದಂಗ ಸ್ಮಶಾನ  300ಕ್ಕೂ ಹೆಚ್ಚು ಬಲಿ ಪಡೆದ ವಯನಾಡ್ ಮಹಾಮಳೆ  ರಾತ್ರೋ ರಾತ್ರಿ ಸೇನೆಯಿಂದ ನಿರ್ಮಾಣವಾಯ್ತು ಸೇತುವೆ
Advertisement

Wayanad: ಕೇರಳ ಸಣ್ಣ ರಾಜ್ಯ. ಇದನ್ನು ದೇವರ ನಾಡು ಅಂತ ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿ ನೆಲೆ ನಿಂತಿರುವ ಅನೇಕ ದೇವರುಗಳು, ಹಾಗೂ ಇಲ್ಲಿನ ಪ್ರಕೃತಿ. ಸಸ್ಯಶ್ಯಾಮಲೆಯೇ ಇಲ್ಲಿ ಅವತಾರವೆತ್ತಿ ನಿಂತಿದ್ದಾಳೆ. ಅನೇಕ ಪ್ರವಾಸಿಗರ ಸ್ವರ್ಗ ಇದು. ಆದರೆ ಅಂತ ಸ್ವರ್ಗದ ನೆಲೆವೀಡಾಗಿದ್ದ ವಯನಾಡು ಈಗ ಸ್ಮಶಾನವಾಗಿ ಮಾರ್ಪಟ್ಟಿದೆ. ರಣ ಭೀಕರ ಮಳೆಗೆ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಇದುವರೆಗೆ ಮುನ್ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಅದಿನ್ನೆಷ್ಟು ಜನ ಮಣ್ಣಿನ ಅಡಿಯಲ್ಲಿ ಮಣ್ಣಾಗಿದ್ದಾರೆ ಅನ್ನೋದು ದೇವರೇ ಬಲ್ಲ.

Advertisement

ಈಗ ದೊರೆತಿರುವ ಮಾಹಿತಿ ಪ್ರಕಾರ ಮಣ್ಣಿನ ಅವಶೇಷಗಳಡಿ ಬರೋಬ್ಬರಿ 250ಕ್ಕೂ ಹೆಚ್ಚು ಮಂದಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಭಾರಿ ಹವಾಮಾನ ವೈಪರಿತ್ಯ ನಡುವೆಯೋ ಸೇನೆ ಮತ್ತು ಎನ್‌ಡಿಆರ್‌ಎಫ್ (NDRF) ತಮ್ಮ ಪ್ರಯತ್ನ ಬಿಡದೆ ಹುಡುಕುವ ಕೆಲಸವನ್ನು ಮಾಡುತ್ತಿದೆ. ಮಳೆ, ಗಾಳಿ, ಚಳಿ ಎನ್ನದೆ ತನ್ನವರಿಗಾಗಿ ಕಾಯುತ್ತಿರುವ ಸಂಬಂಧಿಕರಿಗೋಸ್ಕರ ಕಾರ್ಯ ನಿರತರಾಗಿದ್ದಾರೆ. ಎಲ್ಲೆಂದರಲ್ಲಿ ಜೆಸಿಬಿಗಳದ್ದೇ ಸದ್ದು ೧೦-೧೨ ಜೆಸಿಬಿಗಳು ನದಿ, ಮಣ್ಣು, ಕಲ್ಲು, ಗುಡ್ಡ ಅನ್ನದೆ ಕಾರ್ಯಚರಿಸುತ್ತಿವೆ. ನಾಯಿಗಳು ಕೂಡ ಶೋಧ ಕಾರ್ಯದಲ್ಲಿ ನಿರತವಾಗಿವೆ. ಚಲಿಯಾರ್ ನದಿ ಪ್ರವಾಹ ತಕ್ಕ ಮಟ್ಟಿಗೆ ತಹಬದಿಗೆ ಬಂದಿದ್ದು, ತಾತ್ಕಾಲಿಕವಾಗಿ ಸೇನೆ ನಿರ್ಮಿಸಿದ್ದ ಸೇತುವೆ ಈಗ ಪ್ರಯೋಜನಕ್ಕೆ ಬಂದಿದೆ.

ಪ್ರವಾಹ, ಭೂಕುಸಿತ, ಭೂಕಂಪದಂತಹ ಸಂಧರ್ಭದಲ್ಲಿ ಕಾರ್ಯಚರಣೆಗೆ ಅಡ್ಡಿಯಾಗೋದೆ ಮೂಲಭೂತ ಸೌಕರ್ಯವಾದಂತ ರಸ್ತೆ, ಸೇತುವೆಗಳು. ಘಟನೆಯಲ್ಲಿ ಇವೆಲ್ಲಾ ಕೊಚ್ಚಿಕೊಂಡು ಹೋಗಿರುತ್ತವೆ. ಇಲ್ಲಾ ಮಣ್ಣು ಪಾಲಾಗಿರುತ್ತವೆ. ಈ ಸಂದರ್ಭದಲ್ಲಿ ನೆರವಿಗೆ ಬರುವುದೇ ಸೇನೆ. ವಯನಾಡಿನಲ್ಲೂ ರಕ್ಷಣಾ ತಂಡಗಳು ರಾತ್ರಿ ಬೆಳಗಾಗುವುದರೊಳಗೆ ನದಿಗೆ ಅಡ್ಡಲಾಗಿ 2 ಕಬ್ಬಿಣದ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿದೆ.
ಈ ಮೂಲಕ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ರಾವಾನಿಸಲಾಗುತ್ತಿದೆ.

Advertisement

ಕಾರ್ಯಾಚರಣೆ ನಿರಂತರವಾಗಿ ಸಾಗುತ್ತಿದೆ. ಹಾಗೂ ಸದ್ಯದ ಮಟ್ಟಿಗೆ ನಿಲ್ಲಿಸುವಂತ ಪರಿಸ್ಥಿತಿಯೂ ಇಲ್ಲ. ಇನ್ನೂ ಕನಿಷ್ಠ ಪಕ್ಷ 15ರಿಂದ 20 ದಿನಗಳವರೆಗೆಯಾದರೂ ಈ ಕಾರ್ಯಾಚರಣೆ ಮುಂದುವರೆಸುವ ಅನಿವಾರ್ಯತೆ ಕಂಡುಬರುತ್ತಿದೆ. ನೂರಾರು ಸಂಖ್ಯೆಯಲ್ಲಿ ಸಾವುಗಳು ಸಂಭವಿಸಿರುವ ಕಾರಣ ಹೆಚ್1ಎನ್1 ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹೀಗಾಗಿ ದುರಂತ ಸ್ಥಳದಲ್ಲಿ, ಆಸ್ಪತ್ರೆ ಆವರಣ, ಸಂತ್ರಸ್ಥರ ಕೇಂದ್ರಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

Karnataka Politics: ಅಜ್ಞಾತ ಸ್ಥಳಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ, ದಿಢೀರ್ ಪತ್ರಿಕಾಗೋಷ್ಠಿ ಕರೆದ ಡಿಕೆಶಿ !! ರಾಜ್ಯ ರಾಜಕೀಯದಲ್ಲಿ ಸಂಚಲನ

Advertisement
Advertisement
Advertisement