For the best experience, open
https://m.hosakannada.com
on your mobile browser.
Advertisement

Union Budget 2024: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ದೊಡ್ಡ ಘೋಷಣೆ; ಹೊಸ ತೆರಿಗೆ ಪದ್ಧತಿಯಲ್ಲಿ ಬಂತು ಈ ಬದಲಾವಣೆ

Union Budget 2024: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಪೂರ್ಣ ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಸತತ 7ನೇ ಬಜೆಟ್ ಆಗಿದೆ.
12:45 PM Jul 23, 2024 IST | ಸುದರ್ಶನ್
UpdateAt: 12:55 PM Jul 23, 2024 IST
union budget 2024  ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ದೊಡ್ಡ ಘೋಷಣೆ  ಹೊಸ ತೆರಿಗೆ ಪದ್ಧತಿಯಲ್ಲಿ ಬಂತು ಈ ಬದಲಾವಣೆ
Advertisement

Union Budget 2024: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಪೂರ್ಣ ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಸತತ 7ನೇ ಬಜೆಟ್ ಆಗಿದೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಸರ್ಕಾರ ಉಡುಗೊರೆ ನೀಡಿದೆ. ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50 ಸಾವಿರದಿಂದ 75000 ರೂ.ಗೆ ಹೆಚ್ಚಿಸಲಾಗಿದೆ.

Advertisement

Union Budget 2024: ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ‘ದೊಡ್ಡ ಉಡುಗೊರೆ’

ವಾರ್ಷಿಕ ಆದಾಯದ ಮೇಲಿನ ತೆರಿಗೆ

Advertisement

0-3 lakhs : 0%
3-7 lakhs : 5%
7-10 lakhs : 10%
10-12 lakhs : 15%
12-15 lakhs : 20%
15 lakhs + : 30%

ಮೊಬೈಲ್ ಫೋನ್ ಚಾರ್ಜರ್ ಅಗ್ಗವಾಗಲಿದೆ. ಮೊಬೈಲ್ ಮತ್ತು ಚಾರ್ಜರ್ ಗಳ ಮೇಲಿನ BCD (basic custom duty) ತೆರಿಗೆ 15% ಕಡಿತ. ಇದಲ್ಲದೇ ವಿದ್ಯುತ್ ತಂತಿಗಳು ಮತ್ತು ಎಕ್ಸ್ ರೇ ಯಂತ್ರಗಳು ಅಗ್ಗವಾಗಲಿದೆ. ಮೂರು ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಕ್ಯಾನ್ಸರ್ ಗುಣಪಡಿಸುವ 3 ವಿವಿಧ ಔಷಧಗಳ ಮೇಲಿನ BCD ಸು೦ಕ ಮನ್ನಾ ಮಾಡಲಾಗಿದೆ. ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದೆ.

ಆದಾಯ ತೆರಿಗೆಯನ್ನು ಸರಳೀಕರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಟಿಡಿಎಸ್ ಪಾವತಿಸದಿರುವುದು ಇನ್ನು ಮುಂದೆ ಅಪರಾಧವಾಗುವುದಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ 12 ಕೈಗಾರಿಕಾ ಪಾರ್ಕ್‌ಗಳ ಮಂಜೂರು, ಆನ್ ಲೈನ್ ವಾಣಿಜ್ಯ ವ್ಯವಹಾರ ಮೇಲಿನ TDS ತೆರಿಗೆ 1% ನಿಂದ 0.1% ಗೆ ಇಳಿಕೆ, 100 ನಗರಗಳಲ್ಲಿ/ಸಮೀಪದಲ್ಲಿ ಸಂಪೂರ್ಣ ಮೂಲಸೌಕರ್ಯದೊಂದಿಗೆ, ರಾಜ್ಯಗಳು ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಟರ್ಮ್ ಪ್ಲಾನಿಂಗ್ ಕೌಶಲ್ಯ ಅಭಿವೃದ್ಧಿ

Budget 2024: ಬಜೆಟ್ ಗುಡ್ ನ್ಯೂಸ್! ಇನ್ಮುಂದೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌!

Advertisement
Advertisement
Advertisement