Udupi Nejaru Case: ಆರೋಪಿ ಪ್ರವೀಣ್ ಚೌಗುಲೆಗೆ ಜಾಮೀನು ನಿರಾಕರಣೆ
Udupi Nejaru Case: ಪ್ರವೀಣ್ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ
02:44 PM Mar 30, 2024 IST
|
ಸುದರ್ಶನ್
UpdateAt: 02:47 PM Mar 30, 2024 IST
Advertisement
Udupi Nejaru Case: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ. ಈ ಕುರಿತು ಇಂದು ಆದೇಶ ನೀಡಿದೆ.
Advertisement
ಇದನ್ನೂ ಓದಿ: Mangaluru: ಹಿಂದುತ್ವದ ಕೋಟೆ ಬೇಧಿಸಿ ಈ ಬಾರಿ ಜಯ; ಕಾಂಗ್ರೆಸ್ ತೆಕ್ಕೆಗೆ ಕ್ಷೇತ್ರ- ಅಭಯಚಂದ್ರ ಜೈನ್
ಪ್ರವೀಣ್ ಚೌಗುಲೆ ಮಾ.13 ರಂದು ಎರಡನೇ ಬಾರಿಗೆ ಜಾಮೀನು ಅರ್ಜಿ ಹಾಕಿದ್ದು, ಈ ಅರ್ಜಿಗೆ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಮಾ.27 ರಂದು ಆಕ್ಷೇಪಣೆ ಸಲ್ಲಿಸಿದ್ದರು. ಈ ಕುರಿತು ಆರೋಪಿ ಪರ ವಕೀಲರಾದ ರಾಜೇಶ್ ಹಾಗೂ ವಿಶೇಷ ಸರಕಾರಿ ಅಭಿಯೋಜಕರ ಮಧ್ಯೆ ವಾದ ಪ್ರತಿವಾದ ನಡೆಯಿತು. ನಂತರ ನ್ಯಾಯಾಧೀಶ ದಿನೇಶ್ ಹೆಗ್ಡೆ ಜಾಮೂನು ಅರ್ಜಿಯ ನಿರಾಕರಣೆಯ ಆದೇಶವನ್ನು ನೀಡಿದರು.
Advertisement
Advertisement