For the best experience, open
https://m.hosakannada.com
on your mobile browser.
Advertisement

HD Kumaraswamy: ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು: ಪ್ರಜ್ವಲ್ ಗೆ ಕುಮಾರಸ್ವಾಮಿ ತಾಕೀತು

HD Kumaraswamy: ಮುಂದಿನ 24 ಇಲ್ಲ 48 ಗಂಟೆಯಲ್ಲಿ ಬಂದು ಶರಣಾಗು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಂಸದ ಪ್ರಜ್ವಲ್ ರೇವಣ್ಣಗೆ ಮನವಿ ಮಾಡಿದ್ದಾರೆ.
07:13 PM May 20, 2024 IST | ಸುದರ್ಶನ್ ಬೆಳಾಲು
UpdateAt: 07:13 PM May 20, 2024 IST
hd kumaraswamy  ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು  ಪ್ರಜ್ವಲ್ ಗೆ ಕುಮಾರಸ್ವಾಮಿ ತಾಕೀತು
Photo Credit: The Economic Times

HD Kumaraswamy: ನನ್ನ ಹಾಗೂ ಹೆಚ್ ಡಿ ದೇವೇಗೌಡರ ಮೇಲೆ ಗೌರವ ಇದ್ದರೆ ಮುಂದಿನ 24 ಇಲ್ಲ 48 ಗಂಟೆಯಲ್ಲಿ ಬಂದು ಶರಣಾಗು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಮನವಿ ಮಾಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಗರದ ಜೆಡಿಎಸ್ ಕಛೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಈ ನೆಲದಲ್ಲಿ ಕಾನೂನು ಇದೆ. ಯಾಕೆ ಹೆದರಬೇಕು. ಎಷ್ಟು ದಿನ ಈ ಕಳ್ಳ ಪೊಲೀಸ್ ಆಟ ? ಬಂದು ಶರಣಾಗು. ವಿದೇಶದಿಂದ ಬಂದು ತನಿಖೆಗೆ ಸಹಕಾರ ನೀಡಬೇಕು' ಎಂದು ಅವರು ಪ್ರಜ್ವಲ್ ರೇವಣ್ಣರವರಿಗೆ ಮನವಿ ಮಾಡಿದ್ದಾರೆ.

Advertisement

ಪ್ರಜ್ವಲ್ ಎಲ್ಲೆ ಇದ್ದರೂ ಸರೆಂಡರ್ ಆಗಲು ಹೇಳಿ ಎಂದು ದೇವೇಗೌಡರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
'ಪದ್ಮನಾಭನಗರಕ್ಕೆ ನಾನು ಪ್ರಜ್ವಲನನ್ನು ಬಿಡಿಸಲು ತಂದೆ ಜೊತೆ ಮಾತನಾಡಲು ಹೋಗಿಲ್ಲ. ತಂದೆ- ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ಹೊಗುತ್ತೇನೆ. ನಾನು ತಂದೆ ( ದೇವೇಗೌಡರಿಗೆ) ಮನವಿ ಮಾಡಿದ್ದೇನೆ. ಪ್ರಜ್ವಲ್ ಎಲ್ಲಿಯೇ ಇದ್ದರೂ ಬಂದು ಸರೆಂಡರ್ ಆಗಲು ಮಾನವಿ ಮಾಡಲು ಹೇಳಿದ್ದೇನೆ' ಎಂದರು.

ಸಂಸದ ಪ್ರಜ್ವಲ್ ರೇವಣ್ಣರವರ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದ ಎಲ್ಲರೂ ತಲೆತಗ್ಗಿಸುವ ಪ್ರಕರಣ. ಹಾಗಾಗಿ ನಾನು ಸಾರ್ವಜನಿಕವಾಗಿ ಇನ್ನೊಮ್ಮೆ ಕ್ಷಮೆ ಕೋರುತ್ತೇನೆ. ಇದು ಎಲ್ಲರೂ ಅಸಹ್ಯ ಪಡುವ ಪ್ರಕರಣ ಇದು. ಈ ಕೇಸ್ ನಲ್ಲಿ ನನ್ನ ಹಾಗೂ ದೇವೇಗೌಡರನ್ನು ತಾಳೆ ಹಾಕಿದ್ದಾರೆ ಅನ್ನೋದು ಬೇಸರ ತರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಅವರು ಇಡೀ ಕಾರಿದ್ದಾರೆ.

Advertisement

"ನಿನ್ನೆ ತಾನೇ ಹೊಸ ಆಡಿಯೋ ಬಂತಲ್ಲ. ಈಗ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ ? ಕುಮಾರಸ್ವಾಮಿಯೇ ಪೆನ್ ಡ್ರೈವ್ ಹೊಟ್ಟಿದ್ದು ಅಂತ ಹೇಳು ಅಂತಿರಾ. ಈ ಸರ್ಕಾರ 376 ಸರ್ಕಾರ. ಯಾರು ನಿಮ್ಮ ವಿರುದ್ಧ ಮಾತನಾಡುತ್ತಾರೆಯೋ ಅವರಿಗೆ 376 ಹಾಕಿಸುತ್ತಾರೆ" ಎಂದಿದ್ದಾರೆ ಕುಮಾರಣ್ಣ. ಈ ಸಂದರ್ಭದಲ್ಲಿ ದೇವರಾಜ್‌ ಗೌಡ ಬಗ್ಗೆ ನಾನು ವಕಾಲತ್ತು ವಹಿಸಲ್ಲ, ಸತ್ಯಾಂಶ ಮಾತ್ರ ಹೇಳುತ್ತೇನೆ ಎಂದಿದ್ದಾರೆ.

ಸಿಡಿ ಶಿವು !
"ಕೇಸ್ ಹಾಕಿಸಲು ಯಾರ ಬಳಿ ದೂರು ನೀಡಿಸಿದ್ರಿ ಆಮೇಲೆ ಟಿವಿಯಲ್ಲಿ ಸ್ಟೋರಿ ಬಿಲ್ಡಪ್ ಮಾಡಿದ್ರಿ. ಎಲ್ಲಾ ನಮಗೆ ಗೊತ್ತು. ನನಗೆ ದೌರ್ಜನ್ಯ ಆಗಿದೆ ಎಂದು ದೇವರಾಜೇಗೌಡ ವಿರುದ್ದ ದೂರು ನೀಡಿಸಿದ್ರಿ. ಆದ್ರೆ ಯಾಕೆ ನೀವು ಹೊಳೆನರಸೀಪುರದಲ್ಲಿ ದೂರು ಕೊಡಲಿಲ್ಲ. ಬೆಂಗಳೂರಿಗೆ ಬಂದು ಯಾಕೆ ದೂರು ನೀಡಿಸಿದ್ರಿ, ಹೇಳಿ ? ಅದಕ್ಕೆ ಎಷ್ಟು ಹಣ ಕೊಟ್ರಿ. ಬೆಂಗಳೂರಿನಲ್ಲಿ ಟೈಪ್ ಆಗಿದ್ದ ಲೆಟರ್ ಹೊಳೆನರಸೀಪುರ ಠಾಣೆಗೆ ಕಳಿಸಿದ್ದಾರಾ
ಹೇಳಿ ಸಿಡಿ ಶಿವು ಎಂದು ಕಿಡಿಕಾರಿದ್ದಾರೆ.

ವಿಡಿಯೋ ಮಾಡಿರುವ ಕರ್ತೃ ಯಾರಿದ್ದಾರೆ ಕರೆಸಿ ಗಲ್ಲಿಗೆ ಹಾಕಿ ಬೇಕಾದ್ರೆ. ನಾನು ಸಿಎಂ ಇದ್ದಾಗ ಬೆಂಗಳೂರು ಕಮಿಷನರ್ ಮಾಡಲಿಲ್ಲ ಎಂದು ನಮ್ಮ ಕುಟುಂಬದ ಮೇಲೆ ಅಲೋಕ್ ಮೋಹನ್ ದ್ವೇಷ ಮಾಡುತ್ತಿದ್ದಿರಾ, ಹೇಳಿ? ನಾನು ಈಗಲೂ ಹೇಳುತ್ತಿದ್ದೇನೆ ವಿಡಿಯೋ ಮಾಡಿರುವ ಕರ್ತೃ ಯಾರಿದ್ದಾರೆ ಕರೆಸಿ ಗಲ್ಲಿಗೆ ಹಾಕಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಶಿವಕುಮಾರ್ ಜೈಲಿನಲ್ಲಿದ್ದಾಗ ಅವರ ತಾಯಿಯ ಭೇಟಿಯಾಗಿ ಸಾಂತ್ವನ ಹೇಳಿದ್ದೆ
"ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿ ಇದ್ದಾಗ ನಾನು ನಿಮ್ಮ ತಾಯಿ ಭೇಟಿ ಮಾಡಿ ಸಾಂತ್ವನ ಹೇಳಿದ್ದೆ. ನಿಮ್ಮನ್ನು ಕೂಡ ತಿಹಾರ್ ಜೈಲಿನಲ್ಲಿ ಭೇಟಿ ಮಾಡಿದ್ದೆ. ನಂತರ ನಾಲ್ಕು ದಿನಗಳಲ್ಲಿ ನೀವು ಬಿಡುಗಡೆ ಆದ್ರಿ. ಆದ್ರೆ ಈಗ ನೀವು ಏನು ಮಾಡುತ್ತಿದ್ದೀರಿ ? ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಮ್ಮ ತಾಯಿ ಕೈಯಿಂದ ಅನ್ನ ತಿಂದಿದ್ದಾರೆ. ತಾಯಿಯ ನೋವು ಏನು ಅಂತ ಅವರಿಗೆ ಗೊತ್ತಿದೆ ಅಂದುಕೊಳ್ಳುತ್ತೇನೆ." ಎಂದು ಎಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

Advertisement
Advertisement
Advertisement