ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Tumakuru: 40 ವಯಸ್ಸಿನ ಅಂಕಲ್ ಜೊತೆ ಓಡಿಹೋದ ತುಮಕೂರು ಕಾಲೇಜು ಹುಡುಗಿ - ಬಳಿಕ ಪತ್ತೆಯಾಗಿದ್ದು ಶವವಾಗಿ !!

Tumakuru: 20 ವರ್ಷದ ವಿದ್ಯಾರ್ಥಿನಿ 40 ವರ್ಷದ ವಿವಾಹಿತ ಪುರುಷನನ್ನು ಪ್ರೀತಿಸಿ ಕೊನೆಗೆ ಅವರನೊಂದಿಗೇ ಪರಾರಿಯಾಗಿದ್ದಾಳೆ.
02:11 PM Jun 23, 2024 IST | ಸುದರ್ಶನ್
UpdateAt: 02:11 PM Jun 23, 2024 IST
Advertisement

Tumakuru: ಪ್ರೀತಿ ಕುರುಡೋ ಅಥವಾ ಈ ವಿದ್ಯಾರ್ಥಿನಿಯರೇ ಕುರುಡೋ? ಒಂದೂ ಗೊತ್ತಾಗೊದಿಲ್ಲ. ಯಾಕೆಂದರೆ ಕಾಲೇಜು ಓದುವ ಹುಡುಗಿಯರು ತನ್ನ ತಂದೆಯಷ್ಟು ವಯಸ್ಸಾಗಿರೋ ಅಂಕಲ್ ಗಳ ಜೋತೆ ಓಡಿಹೋಗೋ ಪ್ರಸಂಗಗಳು ಈಗ ಯತೇಚ್ಛವಾಗಿದೆ. ಇದೀಗ ಇಂತಹುದೆ ಒಂದು ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

Advertisement

RBI License: ಈ ಬ್ಯಾಂಕಿನಲ್ಲಿ ಹಣ ಇಟ್ಟವರಿಗೆ ಶಾಕಿಂಗ್ ನ್ಯೂಸ್! ಪ್ರತಿಷ್ಠಿತ ಬ್ಯಾಂಕ್ ಲೈಸೆನ್ಸ್ ರದ್ದು ಮಾಡಿದ RBI!

Advertisement

ಹೌದು, ತುಮಕೂರು(Tumakuru) ಕಾಲೇಜಿನಲ್ಲಿ ಡಿಗ್ರಿ(Degree) ಓದುತ್ತಿರುವ 20 ವರ್ಷದ ವಿದ್ಯಾರ್ಥಿನಿ 40 ವರ್ಷದ ವಿವಾಹಿತ ಪುರುಷನನ್ನು ಪ್ರೀತಿಸಿ ಕೊನೆಗೆ ಅವರನೊಂದಿಗೇ ಪರಾರಿಯಾಗಿದ್ದಾಳೆ. ಆದರೆ ಶಾಕಿಂಗ್ ವಿಚಾರ ಏನಂದರೆ ನಾಲ್ಕು ದಿನದ ಬಳಿಕ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಜೊತೆಗೆ ಆ 40ರ ಪುರುಷನ ಮೃತದೇಹವೂ ಸಿಕ್ಕಿದೆ. ತಮ್ಮ ಪ್ರೀತಿಗೆ ಮನೆಯವರು ಒಪ್ಪುವುದಿಲ್ಲವೆಂದು ಭಯಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಏನಿದು ಪ್ರಕರಣ?
ಅನನ್ಯಾ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯ ಗ್ರಾಮದವಳು. ತುಮಕೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಳು. ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ವಿವಾಹಿತ ಪುರುಷನಾಗಿದ್ದು, ಈತನಿಗೆ ಮಡದಿ ಮತ್ತು ಮಕ್ಕಳೂ ಇದ್ದಾರೆ. ಆದರೆ, ಮಗಳ ವಯಸ್ಸಿನ ಯುವತಿಯನ್ನು ಪ್ರೀತಿ ಮಾಡಿದ್ದಾನೆ ಈ ಬೇಕೂಫ. ಅಲ್ಲದೆ ಇವರಿಬ್ಬರು ಅಕ್ಕ ಪಕ್ಕದ ಊರಿನವರು ಎಂಬುದು ತಿಳಿದುಬಂದಿದೆ.

ಇಬ್ಬರೂ ನಾಪತ್ತೆಯಾಗಿ ಮೂರು ದಿನಗಳಾದರೂ ಪತ್ತೆ ಆಗಿರಲಿಲ್ಲ. ಆಗ ಅವರ ಮೊಬೈಲ್ ಟ್ರೇಸ್ ಮಾಡಿದಾಗ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ಬಳಿ ಮೊಬೈಲ್ ಟ್ರೇಸ್ ಆಗಿದೆ. ನಿನ್ನೆ ಮಾವತ್ತೂರು ಕೆರೆ ಬಳಿ ನಿಲ್ಲಿಸಿದ್ದ ರಂಗಶಾಮಣ್ಣನ ಕಾರಿನಲ್ಲಿ ಇಬ್ಬರ ಮೊಬೈಲ್‌ಗಳು, ಕೆರೆಯ ದಂಡೆಯಲ್ಲಿ ಇಬ್ಬರ ಚಪ್ಪಲಿಗಳು ಪತ್ತೆಯಾಗಿವೆ. ಆಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ ಪೊಲೀಸರು ನಿನ್ನೆ ಮಧ್ಯಾಹ್ನದಿಂದಲೇ ಅಗ್ನಿಶಾಮಕ ದಳದ ಸಹಾಯದಿಂದ ಶವ ಪತ್ತೆಗೆ ಮುಂದಾಗಿದ್ದರು.

ಪತ್ತೆಯ ಬಳಿಕ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಪೊಲೀಸರು ಇಬ್ಬರು ಪ್ರೇಮಿಗಳನ್ನು ಅವರ ಮನೆಯವರೇ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಬಣ್ಣ ಬಯಲಾಗಲಿದೆ.

Karkala Theme Park: ಪರಶರಾಮ ನಕಲಿ ಮೂರ್ತಿ, ಸರಕಾರಕ್ಕೆ ವಂಚನೆ ಆರೋಪ- ಕೃಷ್ಣ ಆರ್ಟ್ ಗ್ಯಾಲರಿ ವಿರುದ್ಧ ಪ್ರಕರಣ ದಾಖಲು

Advertisement
Advertisement