For the best experience, open
https://m.hosakannada.com
on your mobile browser.
Advertisement

Panipuri Ban: ಗೋಬಿ ಆಯ್ತು, ಈಗ ರಾಜ್ಯದಲ್ಲಿ ಪಾನಿಪುರಿ ಕೂಡ ಬ್ಯಾನ್ ?!

Panipuri Ban: ಗೋಬಿ ಹಾಗೂ ಕಬಾಬ್ ಗೆ ಕೃತಕ ಬಣ್ಣ ಬಳಕೆ ನಿರ್ಬಂಧ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ಪಾನಿಪುರಿ ಕೂಡ ಬ್ಯಾನ್(Panipuri Ban) ಆಗುವ ಸಂಭವಗಳು ಎದುರಾಗಿವೆ.
08:53 AM Jun 28, 2024 IST | ಸುದರ್ಶನ್
UpdateAt: 08:53 AM Jun 28, 2024 IST
panipuri ban  ಗೋಬಿ ಆಯ್ತು  ಈಗ ರಾಜ್ಯದಲ್ಲಿ ಪಾನಿಪುರಿ ಕೂಡ ಬ್ಯಾನ್

Panipuri Ban: ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ(Cotton Candy), ಗೋಬಿ ಹಾಗೂ ಕಬಾಬ್ ಗೆ ಕೃತಕ ಬಣ್ಣ ಬಳಕೆ ನಿರ್ಬಂಧ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ಪಾನಿಪುರಿ ಕೂಡ ಬ್ಯಾನ್(Panipuri Ban) ಆಗುವ ಸಂಭವಗಳು ಎದುರಾಗಿವೆ.

Advertisement

Haveri: ಭೀಕರ ರಸ್ತೆ ಅಪಘಾತ; 13 ಜನ ಸ್ಥಳದಲ್ಲೇ ಸಾವು

ಹೌದು, ಬಾಂಬೆ ಮಿಠಾಯಿ(Bambe Mitai), ಗೋಬಿ(Gobi Manchuri), ಕಬಾಬ್‌(Kabab) ತಯಾರಿಕೆಯಲ್ಲಿ ಬಳಸುವ ಪದಾರ್ಥಗಳನ್ಪು ಬ್ಯಾನ್‌ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರೂಪುರೇಷೆ ನಿರ್ಮಿಸುತ್ತಿದೆ. ಈ ಬೆನ್ನಲ್ಲೇ ಸರ್ಕಾರ ಪಾನಿಪುರಿ ಪ್ರಿಯರಿಗೆ ಶಾಕ್ ನೀಡಲು ಮುಂದಾಗಿದ್ದು, ಇದರ ತಯಾರಿಕೆಯ ಕೆಲುವ ಪದಾರ್ಥಗಳನ್ನು ಬ್ಯಾನ್ ಮಾಡಲು ಸದ್ದಿಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಯಾರಿ ನಡೆಸಿದೆ. ಇದರ ಫಲವಾಗಿ ಈಗ ಬಾಂಬೆ ಮಿಠಾಯಿ, ಗೋಬಿ ಹಾಗೂ ಕಬಾಬ್‌ನಲ್ಲಿ ಸಿಕ್ಕಿರುವಂತೆ, ಪಾನಿಪೂರಿಯಲ್ಲೂ ಕೂಡ ಕ್ಯಾನ್ಸರ್‌ ಕಾರಕ ಅಂಶಗಳು ಪತ್ತೆಯಾಗಿವೆ!!

Advertisement

ಏನೇನು ಬ್ಯಾನ್ ಆಗಬಹುದು?
ಪಾನಿಪೂರಿಗೆ ಬಳಸೋ ಐದು ಮಾದರಿಯ ಸಾಸ್‌ಗಳು ಹಾಗೂ ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಹೀಗಾಗಿ ಕ್ಯಾನ್ಸರ್ ಕಾರಕ ಇರೋ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇತ್ತೀಚೆಗೆ ಬೆಂಗಳೂರಿನ 49 ಪ್ರದೇಶಗಳಿಂದ ಈ ಕುರಿತಂತೆ ಮಾಹಿತಿ ಸಂಗ್ರಹಿಸಲಾಗಿದೆ. 49 ಕಡೆ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ. ಶೀಘ್ರದಲ್ಲೆ ಪಾನಿಪೂರಿಗೆ ಬಳಸೋ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ನಿರ್ಧಾರ ಮಾಡಲಾಗಿದೆ.

ಅಂದಹಾಗೆ ಕೆಲವು ದಿನಗಳ ಹಿಂದೆ ಕಬಾಬ್ ತಯಾರಿಕೆಯಲ್ಲಿ ಬಳಸುವ ಕಲರ್‌ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಬಾಬ್‌ಗೆ ಕಲರ್ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿತ್ತು. ಅಲ್ಲದೆ ಯಾರಾದರು ಕಣ್ಣುತಪ್ಪಿಸಿ ಬಳಕೆ ಮಾಡುವುದು ಕಂಡುಬಂದಲ್ಲಿ 7 ವರ್ಷ ಶಿಕ್ಷೆ ಹಾಗೂ 10 ಲಕ್ಷ ದಂಡದ ಎಚ್ಚರಿಕೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

Jio: ‘ಜಿಯೋ’ ಬಳಕೆದಾರರಿಗೆ ಬಿಗ್ ಶಾಕ್- ರಿಚಾರ್ಜ್ ದರದಲ್ಲಿ 25% ಹೆಚ್ಚಳ !!

Advertisement
Advertisement
Advertisement