Mumbai: ದುಡ್ಡು ಕೊಡಲಿಲ್ಲ ಎಂದು 3 ತಿಂಗಳ ಕಂದನನ್ನು ರೇಪ್ ಮಾಡಿ ಕೊಂದ ತೃತೀಯಲಿಂಗಿ - ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್
Mumbai: 2021ರಲ್ಲಿ ಮುಬೈನ ಕಫೆ ಪರೇಡ್‌ನಲ್ಲಿ ಪೈಶಾಚಿಕ ಘಟನೆ ನಡೆದಿತ್ತು. ಇಡೀ ದೇಶವೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು. ಅದೇನೆಂದರೆ ತೃತೀಯಲಿಂಗಿಯೊಬ್ಬರು 3 ತಿಂಗಳ ಹೆಣ್ಣು ಮಗುವನ್ನು ಅಪಹರಿಸಿ, ಅತ್ಯಾಚಾರ ಹಾಗೂ ಕೊಲೆ ಮಾಡಿದ ಪ್ರಕರಣ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ(Mumbai) ಪೋಕ್ಸೋ ಕೋರ್ಟ್ ಮಂಗಳವಾರ 24 ವರ್ಷದ ತೃತೀಯ ಲಿಂಗಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: Nirmala Sitaraman: ಬೆಂಗಳೂರಿನ ತೆರಿಗೆ ಪಾವತಿದಾರರು ನಮಗೆ ಉತ್ಸಾಹವನ್ನು ಹೆಚ್ಚಿಸುತ್ತಿದ್ದಾರೆ : ನಿರ್ಮಲಾ ಸೀತಾರಾಮನ್
ಹೌದು, ಇದನ್ನು ಅನಾಗರಿಕ ಹಾಗೂ ಅಮಾನವೀತ ಘಟನೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಇದು ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ಹೇಳಿದೆ. ಮಕ್ಕಳ ಲೈಂಗಿಕ ಅಪರಾಧಗಳ ತಡೆಗಟ್ಟುವಿಕೆ (ಪೋಕ್ಸೊ) ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಆದಿತೀ ಕದಮ್ ಈ ಕುರಿತು ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?
ತನಿಖೆಯ ಪ್ರಕಾರ ಆರೋಪಿಯಾಗಿರುವ ತೃತೀಯ ಲಿಂಗಿ, ಹೆಣ್ಣು ಮಗು ಹುಟ್ಟಿರುವ ಕಾರಣಕ್ಕೆ ರಾತ್ರಿ 8 ಗಂಟೆ ಸುಮಾರಿಗೆ 9 ಗಜದ ಸೀರೆ, ತೆಂಗಿನಕಾಯಿ ಮತ್ತು ಹೆಣ್ಣು ಮಗು ಜನಿಸಿದಾಗ ₹ 1,100 ರೂಪದಲ್ಲಿ ಉಡುಗೊರೆ ಕೇಳಿಕೊಂಡು ಮನೆಗೆ ಬಂದಿದ್ದ. ಆದರೆ, ಕುಟುಂಬ ಇದನ್ನು ನೀಡಲು ನಿರಾಕರಿಸಿದೆ. ಇದರಿಂದ ಸಿಟ್ಟಾಗಿದ್ದ ತೃತೀಯ ಲಿಂಗಿ ಈ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಎನ್ನುವ ಜಿದ್ದಿಗೆ ಇಳಿದಿದ್ದ. ಆ ಬಳಿಕ ಇಡೀ ಮನೆಯವರು ಮಲಗಿದ್ದ ವೇಳೆ ಸಣ್ಣ ಮಗುವನ್ನು ಕಿಡ್ನ್ಯಾಪ್ ಮಾಡಿದ್ದ. ಮಾತ್ರವಲ್ಲ, ಪುಟ್ಟ ಶಿಶುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಶವವನ್ನು ಪಕ್ಕದಲ್ಲಿಯೇ ಹರಿಯುವ ತೋಡಿನಲ್ಲಿ ಎಸೆದಿದ್ದ. ಈ ವೇಳೆ ಈತನಿಗೆ ಮತ್ತೊಬ್ಬ ಸಹಾಯ ಕೂಡ ಮಾಡಿದ್ದ. ಆದರೆ, ನ್ಯಾಯಾಧೀಶರು ಆತನ ಮೇಲಿದ್ದ ಎಲ್ಲಾ ಆರೋಪಗಳನ್ನು ಖುಲಾಸೆ ಮಾಡಿದ್ದಾರೆ.