Cockroaches: ಜಿರಳೆ ಕಂಡಾಕ್ಷಣ ಕಾಲಲ್ಲಿ ತುಳಿದು ಸಾಯಿಸ್ತೀರಾ?! ಅಬ್ಬಾ.. ಇದೆಷ್ಟು ಡೇಂಜರ್ ಅನ್ನೋದು ನಿಮಗೆ ಗೊತ್ತಾ ?!
Cockroaches: ಮನೆಗೆ ಕರೆಯದೇ ಬರುವ ಅತಿಥಿಗಳು ಎಂದರೆ, ಜೀರಳೆಗಳು, ಸೊಳ್ಳೆಗಳು, ಸಣ್ಣ-ಪುಟ್ಟ ಕೀಟಗಳು, ಇರುವೆಗಳು, ಮನೆಯ ಹಂಚಿನಲ್ಲಿ ಅಥವಾ ಕಿಟಕಿ-ಬಾಗಿಲುಗಳ ಮೂಲೆಗಳಲ್ಲಿ ಬಲೆ ಕಟ್ಟಿರುವ ಜೇಡಗಳು, ಗೋಡೆಗಳಲ್ಲಿ ಸರ್ಕಸ್ ಮಾಡುತ್ತಿರುವ ಹಲ್ಲಿಗಳು. ಉಳಿದವು ಬಿಡಿ ಹೇಗೋ ಬಂದು ಹೋಗುತ್ತವೆ, ಇಲ್ಲ ನಾವೇನಾದರೂ ಮದ್ದು ಮಾಡಿದರೆ ಬರುವುದೂ ಇಲ್ಲ. ಆದರೆ ಜಿರಳೆಗಳು(Cockroaches) ಉಂಟಲ್ಲಾ? ಪರ್ಮನೆಂಟ್ ಗೆಸ್ಟ್ ಆಗಿಬಿಡುತ್ತವೆ. ಇವುಗಳ ಕಾಟದಿಂದ ಮುಕ್ತೀಯೇ ಇಲ್ಲವೆನ್ನುವಂತಾಗಿದೆ.
ಅಂದಹಾಗೆ ಹುಡುಗಿಯರನ್ನು ಅತೀ ಸುಲಭದಲ್ಲಿ ಹೆದರಿಸುವ ಈ ಜಿರಳೆಗಳು ಮನೆಯಲ್ಲಿ ಏನಾದರೂ ಕಂಡಾಗ ಈ ಅಮ್ಮಂದಿರು, ಅಜ್ಜಿಯಂದಿರು ಅಥವಾ ಯಾರಾದರೂ ತುಳಿದು ಸಾಯಿಸಿಬಿಡುತ್ತಾರೆ. ಅದು ಜಜ್ಜಿದ ರೀತಿ ಕಂಡಾಗ ಬಿಸಾಕುತ್ತಾರೆ. ಇದು ಸಾಮಾನ್ಯ ವಿಚಾರ. ಆದರೆ ಇದೆಷ್ಟು ಡೇಂಜರ್ ಅನ್ನೋದು ಗೊತ್ತಿದೆಯಾ? ಹೀಗೆ ತುಳಿದರೆ ಏನೆಲ್ಲಾ ಅಪಾಯಗಳು ಸಂಭವಿಸುತ್ತವೆ ಗೊತ್ತಾ? ಇದನ್ನು ನೀವೇನಾದರೂ ತಿಳಿದರೆ ಇನ್ನು ಜೀವನದಲ್ಲೆ ಜಿರಲೆಗಳನ್ನು ತುಳಿಯಲು ಮುಂದಾಗುವುದಿಲ್ಲ.
ಜಿರಳೆಗಳನ್ನು ತುಳಿಯುವುದರಿಂದ ಆಗೋ ದುಷ್ಪರಿಣಾಣಮ:
• ಜಿರಳೆ ತುಳಿದಾಗ ಇವುಗಳಿಂದ ಹೊರಬರುವ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಮತ್ತು ಅದನ್ನು ಉಸಿರಾಡುವುದರಿಂದ ಅಸ್ತಮಾ ಮತ್ತು ಅಲರ್ಜಿ ಸಮಸ್ಯೆಗಳು ಉಂಟಾಗುತ್ತದೆ. ಜಿರಳೆ ಸತ್ತಿರುವ ಜಾಗದಲ್ಲಿ ಉಸಿರಾಡುವಾಗ ಸುರಕ್ಷಿತವಾಗಿರುವುದು ಉತ್ತಮ ಎನ್ನುತ್ತಾರೆ ತಜ್ಞರು.
• ಸತ್ತ ಜಿರಳೆಯಿಂದ ಸಾಲ್ಮೊನೆಲ್ಲಾ, ಸ್ಟ್ರೆಪ್ಟೋಕೊಕಿ, ಸ್ಟ್ಯಾಫಿಲೋಕೊಕಿಯಂತಹ ಬ್ಯಾಕ್ಟೀರಿಯಾಗಳು ಬಿಡುಗಡೆಯಾಗುತ್ತವೆ. ಇದು ಮಾನವ ದೇಹದಲ್ಲಿ ವಿಶೇಷವಾಗಿ ಕರುಳಿನಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಅತಿಸಾರ, ಕಾಲರಾ, ಟೈಫಾಯಿಡ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಜಿರಲೆಗಳಿಂದ ಪಾರಾಗುವುದು ಹೇಗೆ?
ಜಿರಳೆ ಸಾಯಿಸಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ಜಿರಳೆ ಸಮಸ್ಯೆಯಿದ್ದರೆ ಅದನ್ನು ಕೊಲ್ಲಲು ಮಾರುಕಟ್ಟೆಯಲ್ಲಿ ಹಲವು ಬಗೆಯ ಔಷಧಗಳು ಲಭ್ಯವಿವೆ. ಅವುಗಳನ್ನು ಬಳಸಿ, ಸಾಯಿಸಿ. ಅದರ ಬದಲು ಕಾಲಿನಿಂದ ತುಳಿಯುವುದನ್ನು ತಪ್ಪಿಸಿ.