ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Tonel Fungus: ಮಳೆಗಾಲದಲ್ಲಿ ಕಾಡುವ ಉಗುರು ಸೋಂಕು ನಿವಾರಣೆಗೆ ಸುಲಭ ಪರಿಹಾರ ಇಲ್ಲಿದೆ

Tonel Fungus: ಶೀತ, ಜ್ವರ, ಕೆಮ್ಮು ಇವುಗಳ ಜತೆಗೆ ಇನ್ನೆಕ್ಷನ್‌ಗಳು ಉಂಟಾಗುತ್ತವೆ. ಇದೀಗ ಕಾಲು ಬೆರಳಿನ ಫಂಗಲ್ ಇನ್ನೆಕ್ಷನ್ ತಡೆಯುವ ಸಿಂಪಲ್ ಟಿಪ್ಸ್ ಇಲ್ಲಿದೆ.
04:00 PM Jul 19, 2024 IST | ಕಾವ್ಯ ವಾಣಿ
UpdateAt: 04:00 PM Jul 19, 2024 IST
Advertisement

Tonel Fungus: ಬೆರಳಿನ ಫಂಗಸ್ ಇನ್ನೆಕ್ಷನ್ ನಿವಾರಣೆ ಹಲವರ ಸಮಸ್ಯೆ ಆಗಿದೆ. ಮುಖ್ಯವಾಗಿ ಪಾದಗಳು ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆರಳು(Toes) ಸಂಧಿಗಳಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಕಾಲಿನ ಬೆರಳಲ್ಲಿ ಕಾಣಿಸಿಕೊಳ್ಳುವ ಟೋನಲ್ ಫಂಗಲ್(Tonel Fungus) ಇನ್ಫೆಕ್ಷನ್ ಬೆರಳೇ ಎದ್ದು ಬಂದ ಹಾಗೆ, ಕೀವು ತುಂಬಿಕೊಂಡು ಹಳದಿ(Yellow) ಬೆರಳಾಗಿ ಕಾಣಿಸಿಕೊಳ್ಳುತ್ತವೆ. ಕಾಲು ತುರಿಕೆ ವಿಪರೀತ ಆಗಿರುತ್ತದೆ, ಅದಲ್ಲದೆ ಮಳೆಗಾಲದಲ್ಲಿ ಹೆಚ್ಚಾಗಿ ಸೋಂಕುಗಳು ಹರಡುವುದರಿಂದ ದೇಹದಲ್ಲಿ ನಾನಾ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ಶೀತ, ಜ್ವರ, ಕೆಮ್ಮು ಇವುಗಳ ಜತೆಗೆ ಇನ್ನೆಕ್ಷನ್‌ಗಳು ಉಂಟಾಗುತ್ತವೆ. ಇದೀಗ ಕಾಲು ಬೆರಳಿನ ಫಂಗಲ್ ಇನ್ನೆಕ್ಷನ್ ತಡೆಯುವ ಸಿಂಪಲ್ ಟಿಪ್ಸ್ ಇಲ್ಲಿದೆ.

Advertisement

ಹೌದು, ಕಾಲು ಬೆರಳಿನಲ್ಲಿ ಕಾಣಿಸಿಕೊಳ್ಳುವ ಈ ಟೋನಲ್‌ ಫಂಗಲ್ ಇನ್ಸೆಕ್ಷನ್ ಅನ್ನು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಗುಣಪಡಿಸುವ ಸರಳ ವಿಧಾನ ಇಲ್ಲಿದೆ.

ಕೊಬ್ಬರಿ ಎಣ್ಣೆ:

Advertisement

ತೆಂಗಿನಕಾಯಿ ಎಣ್ಣೆ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ಇದನ್ನು ಬಳಸುವುದರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಇದರಲ್ಲಿನ ಔಷಧೀಯ ಗುಣಗಳು ಕಾಲ್ಪೆರಳುಗಳಲ್ಲಿ ಫಂಗಸ್ ಆಗುವುದನ್ನು ತಡೆಗಟ್ಟುತ್ತದೆ.

ವಿನೆಗ‌ರ್:

ವಿನೆಗ‌ರ್ ಅನ್ನು ಬಳಸುವುದರಿಂದ ಚರ್ಮದ ಬಹುತೇಕ ಕಾಯಿಲೆಗಳು ಗುಣವಾಗುತ್ತವೆ. ಅದರಲ್ಲೂ ಫಂಗಲ್ ಇನ್ಸೆಕ್ಷನ್ ಆಗಿರುವ ಕಾಲನ್ನು ದಿನಕ್ಕೆ 30 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿದ ವಿನೆಗರ್‌ನಲ್ಲಿ ನೆನೆಸಬೇಕು.

ಸೂರ್ಯಕಾಂತಿ ಎಣ್ಣೆ:

ಸೂರ್ಯಕಾಂತಿ ಎಣ್ಣೆ ಫಂಗಸ್ ಮತ್ತು ಬ್ಯಾಕ್ಟಿರಿಯಾದಂತಹ ಸಣ್ಣ ಜೀವಿಗಳನ್ನು ನಾಶಪಡಿಸುತ್ತದೆ. ಇದನ್ನು ದಿನದಲ್ಲಿ ಎರಡು ಬಾರಿ ಹಚ್ಚಿದರೆ ಟೋನಲ್ ಇನ್ಸೆಕ್ಷನ್ ಕಡಿಮೆಯಾಗುತ್ತದೆ.

ಆಲಿವ್:

ಆಲಿವ್‌ಗಳಲ್ಲಿ ಒಲ್ಯುರೋಪಪೈನ್, ಆಂಟಿಮೈಕ್ರೋಬಿಯಲ್ ಮತ್ತು ರೋಗನಿರೋಧಕ ಉತ್ತೇಜಿಸುವ ಗುಣಲಕ್ಷಣಗಳಿದೆ. ಇದನ್ನು  ನೇರವಾಗಿ ಫಂಗಸ್ ಆದ ಬೆರಳಿಗೆ ಹಚ್ಚಬೇಕು.

ಇನ್ನು ಕಾಲಿನ ಬೆರಳು ಸೋಂಕು ವಿನ ಮುಂಜಾಗ್ರತೆಯಾಗಿ ನೀವು ಸದಾ ನೀರಿನಲ್ಲಿ ಇರುವುದರಿಂದ ಕಾಲುಗಳಲ್ಲಿ ತೇವಾಂಶ ಅಧಿಕವಾಗಿ, ಕಾಲ್ಪೆರಳುಗಳು ಕೊರೆಯುತ್ತವೆ. ಕಾಲ್ಪೆರಳುಗಳ ನಡುವೆ ಕಟ್ ಚರ್ಮ ಕೊರೆದು ನಡೆಯಲು ಕಷ್ಟವಾಗುತ್ತದೆ. ಅದಕ್ಕಾಗಿ ಕಾಲನ್ನು ನೆನೆಯಲು ಬಿಡಬೇಡಿ. ಇನ್ನು ಸಾರ್ವಜನಿಕ ಸ್ಥಳದಲ್ಲಿ ಯಾವಾಗಲೂ ಪಾದರಕ್ಷೆಗಳನ್ನು ಧರಿಸಿ. ಮನೆಯಲ್ಲಿಯೂ ಖಾಲಿ ಪಾದಗಳ ನಡಿಗೆಯನ್ನು ತಪ್ಪಿಸಿ. ಮಳೆ ನೀರಿನಲ್ಲಿ ನಡೆಯುವಾಗ ಚಪ್ಪಲಿ ಧರಿಸಿ. ಕಾಲನ್ನು ಯಾವಾಗಲು ಸ್ವಚ್ಛವಾಗಿ ತೊಳೆಯಿರಿ.

Mohan Bhagavat: ಕೆಲವರು ಸೂಪರ್ ಮ್ಯಾನ್ ಆಗಿ ಬಳಿಕ ದೇವರಾಗಲು ಹಾತೊರೆಯುತ್ತಾರೆ !! ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರಾ ಮೋಹನ್ ಭಾಗವತ್ ?!

Advertisement
Advertisement