ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bank Rules: ಗ್ರಾಹಕರೆ ಗಮನಿಸಿ - ಮೇ ತಿಂಗಳಲ್ಲಿ ಬದಲಾಗಲಿವೆ ಬ್ಯಾಂಕಿನ ಈ ನಿಯಮಗಳು !!

Bank Rules: ಮೇ ತಿಂಗಳಿಂದ ಬ್ಯಾಂಕ್ ವ್ಯವಹಾರದಲ್ಲಿ ಕೆಲವು ನಿಯಮಗಳು(Bank Rules) ಬದಲಾಗಲಿದ್ದು, ಕೆಲವು ಹೊಸ ನಿಯಮಗಳು ಜಾರಿಯಾಗಲಿವೆ
10:49 AM Apr 30, 2024 IST | ಸುದರ್ಶನ್
UpdateAt: 10:53 AM Apr 30, 2024 IST
Advertisement

Bank Rules: ಮೇ ತಿಂಗಳಿಂದ ಬ್ಯಾಂಕ್ ವ್ಯವಹಾರದಲ್ಲಿ ಕೆಲವು ನಿಯಮಗಳು(Bank Rules) ಬದಲಾಗಲಿದ್ದು, ಕೆಲವು ಹೊಸ ನಿಯಮಗಳು ಜಾರಿಯಾಗಲಿವೆ. ಈ ಕುರಿತು ಬ್ಯಾಂಕ್ ಗಳಿಂದಲೇ ಮಾಹಿತಿ ಲಭ್ಯವಾಗಿದೆ.

Advertisement

ಇದನ್ನೂ ಓದಿ:  Home Remedies For Pimples: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿಂದರೆ ಸಾಕು, ಪಿಂಪಲ್ ಎಲ್ಲಾ ಮಾಯ!

ಹೌದು, ಪ್ರತೀ ತಿಂಗಳ ಆರಂಭದಲ್ಲಿ ನಿಯಮಗಳು ಬದಲಾಗುವಂತೆ ಇದೇ ಮೇ ತಿಂಗಳ ಆರಂಭದಿಂದ ಬ್ಯಾಂಕಿಂಗ್ ವಲಯದಲ್ಲಿ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಉಳಿತಾಯ ಖಾತೆಗಳಿಗೆ ಸಂಬಂಧಿಸಿದ ನಿಯಮಗಳು, ಬ್ಯಾಂಕ್ ನಿಯಮಗಳು ಮತ್ತು ಯೋಜನೆಗಳಲ್ಲಿ ಬದಲಾವಣೆಗಳಿರುತ್ತವೆ. ಹಾಗಿದ್ರೆ ಯಾವ ಬ್ಯಾಂಕ್ ಗಳಲ್ಲಿ ಯಾವ ನಿಯಮಗಳು ಬದಲಾಗುತ್ತವೆ ಎಂಬುದರ ವಿವರ ಇಲ್ಲಿದೆ.

Advertisement

ಇದನ್ನೂ ಓದಿ:  Kannur: ಕಾರು-ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರ ಸಾವು

• ICICI ಬ್ಯಾಂಕ್: 

ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ(ICICI) ಉಳಿತಾಯ ಖಾತೆಯ ಸೇವಾ ಶುಲ್ಕದ ನಿಯಮಗಳನ್ನು ಬದಲಾಯಿಸಿದೆ. ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 99ರೂ., ನಗರ ಪ್ರದೇಶಗಳಲ್ಲಿ 200ರೂ. ಪಾವತಿಸಬೇಕು. ಇನ್ನು ಬ್ಯಾಲೆನ್ಸ್‌ಚೆಕ್ ಸಂದರ್ಭದಲ್ಲಿ 25 ಪುಟಗಳವರೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಅದರ ನಂತರ ಪ್ರತಿ ಪುಟಕ್ಕೆ 4 ರೂ. ಪಾವತಿಸಬೇಕು. ಐಎಂಪಿಎಸ್ ವಹಿವಾಟು ಶುಲ್ಕ 2.50 ರೂ. ನಿಂದ 15 ರೂ. ಎಂದು ನಿರ್ಧರಿಸಲಾಗಿದೆ.

• ಯೆಸ್ ಬ್ಯಾಂಕ್ :

ಮೇ 1 ರಿಂದ, ವಿವಿಧ ರೀತಿಯ ಉಳಿತಾಯ ಖಾತೆಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್‌ ಬದಲಾಗಲಿದೆ. ಯೆಸ್ ಬ್ಯಾಂಕ್ ಪ್ರೊ ಮ್ಯಾಕ್ಸ್ ಕನಿಷ್ಠ ಸರಾಸರಿ ಬ್ಯಾಲೆನ್ಸ್ 50ಸಾವಿರ ರೂ. ಆಗುತ್ತದೆ. ಇದರ ಮೇಲಿನ ಗರಿಷ್ಠ ಶುಲ್ಕ 1 ಸಾವಿರ ರೂ. ನಿಗದಿಪಡಿಸಲಾಗಿತ್ತು. ಪ್ರೊಪ್ಲಸ್ ಉಳಿತಾಯ ಖಾತೆಗಳು ಎಸ್ ರೆಸ್ಪೆಕ್ಟ್ ಎಸ್‌ಎ, ಎಸ್ ಎಸೆನ್ಸ್ ಎಸ್‌ಎ ಕನಿಷ್ಠ ಸರಾಸರಿ ಠೇವಣಿ ಮಿತಿ 25ರೂ.ಗೆ ಪರಿಷ್ಕರಿಸಲಾಗಿದೆ. ಈ ಖಾತೆಗೆ ಗರಿಷ್ಠ ಶುಲ್ಕ 750ರೂ. ನಿಗದಿಪಡಿಸಲಾಗಿತ್ತು. ಬ್ಯಾಂಕ್ ಖಾತೆ ಪ್ರೊನಲ್ಲಿ ಕನಿಷ್ಠ ಬ್ಯಾಲೆನ್ಸ್ 10ಸಾವಿರ ರೂ. ಮತ್ತು ಇದರ ಮೇಲಿನ ಗರಿಷ್ಠ ಶುಲ್ಕ 750ರೂ. ಆಗಿದೆ.

• ಎಚ್‌ಡಿಎಫ್‌ಸಿ(HDFC) ಬ್ಯಾಂಕ್ : 

ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ತನ್ನ ಎಫ್‌ಡಿ ಅವಧಿಯನ್ನು ಮೇ 10 ರವರೆಗೆ ವಿಸ್ತರಿಸಿದೆ. ಈ ನಿಶ್ಚಿತ ಠೇವಣಿ ಯೋಜನೆಯಡಿ, ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡಾ 0.75 ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ. ಹೂಡಿಕೆದಾರರು 5 - 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ 7.75 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಈ ಯೋಜನೆಯಡಿ ಹಿರಿಯ ನಾಗರಿಕರು 5 ಕೋಟಿ ರೂ.ತನಕ ಠೇವಣಿ ಮಾಡಬಹುದು.

Advertisement
Advertisement