ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Telangana: ಇಬ್ಬರು ಹುಡುಗಿಯರಿಗೆ ಯುವಕನಿಂದ ಚಾಕು ಇರಿತ - ಚಾಕು ಇರಿದ ಬಳಿಕ ಏನು ಮಾಡಿದ ಗೊತ್ತಾ?! ಯಪ್ಪಾ.. ಭಯ ಹುಟ್ಟಿಸುತ್ತೆ ಘಟನೆ

01:52 PM Jan 20, 2024 IST | ಹೊಸ ಕನ್ನಡ
UpdateAt: 03:47 PM Jan 20, 2024 IST
Advertisement

Telangana: ಪ್ರೀತಿ, ಪ್ರೇಮದ ವಿಚಾರದಲ್ಲಿ ಇಂದು ನಡೆಯುತ್ತಿರುವ ಕೃತ್ಯಗಳು ನಿಜಕ್ಕೂ ಮರುಕ ಹುಟ್ಟಿಸುವಂತವು. ಅದರಲ್ಲೂ ಏನೂ ತಿಳಿಯದ ಅಪ್ರಾಪ್ತೆಯರ ಮೇಲೆ ಆಗುವ ದೌರ್ಜನ್ಯ ಎಂತವರ ಮನಸ್ಸನ್ನು ಹಿಂಡಿತ್ತವೆ. ಅಂತೆಯೇ ಇದೀಗ ಬೆಚ್ಚಿಬೀಳಿಸುವಂತ ಘಟನೆ ತೆಲಂಗಾಣ(Telangana)ದಲ್ಲಿ ನಡೆದಿದೆ.

Advertisement

ಹೌದು, ಪ್ರೀತಿ, ಪ್ರೇಮ ಹೆಸರಲ್ಲಿ ಅಪ್ರಾಪ್ತ ಬಾಲಕಿಗೆ (16) ಕೆಲ ದಿನಗಳಿಂದ ಮೊಬೈಲ್‌ನಲ್ಲಿ ಮೆಸೇಜ್ ಕಳುಹಿಸುವುದು, ಕಾಲೇಜಿಗೆ ಹೋಗುತ್ತಿರುವಾಗ ಕಿರುಕುಳ ನೀಡುತ್ತಿದ್ದ ಯುವಕನೊಬ್ಬ, ಆಕೆಗೆ ಹಾಗೂ ಆಕೆಯ ಅಕ್ಕನಿಗೆ ಚಾಕುವಿನಿಂದ ಇರಿದು ಚಲಿಸುವ ರೈಲಿಗೆ ಸಿಲುಕಿ (16) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ವಿದ್ಯಾನಗರದ ಬಳಿ ಈ ಘಟನೆ ನಡೆದಿದೆ.

ಇದನ್ನು ಓದಿ: Ram Idol :ರಾಮ ಮೂರ್ತಿ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಚಿಂತನೆ!!

Advertisement

ಏನಿದು ಘಟನೆ?
ತೆಲಂಗಾಣದ ಅಂಬರಪೇಟೆಯ ತುರಬ್‌ನಗರದ ಬಾಲಕಿ ಮತ್ತು ಆತ್ಮಹತ್ಯೆ ಮಾಡಿಕೊಂಡ ಹುಡುಗ ಒಂದೇ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದರು. ಹೀಗಿರುವಾಗ ಬಾಲಕಿಯ ತಾಯಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಟೈಲರಿಂಗ್ ಉಪಕರಣಗಳನ್ನು ಮೃತ ಬಾಲಕನ ಮನೆಯವರು ಖರೀದಿಸಿದ್ದಾರೆ.

ಹೀಗಿರುವಾಗ ಬಾಲಕನಿಗೆ ಬಾಲಕಿ ಮೇಲೆ ಪ್ರೇಮವಾಗಿ ಗುರುವಾರ ಸಂಜೆ ತಮ್ಮ ದೊಡ್ಡಮ್ಮ ಮಗಳ ಬಳಿ ಟ್ಯೂಷನ್‌ಗೆ ಹೋಗಿದ್ದಳು. ಇದನ್ನು ಗಮನಿಸಿದ ಬಾಲಕ ರಾತ್ರಿ 7.30ಕ್ಕೆ ಟ್ಯೂಷನ್‌ಗೆ ಹೋಗಿದ್ದ ಬಾಲಕಿಗೆ ಚಾಕುವಿನಿಂದ ಇರಿದಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ಆಕೆಯ ದೊಡ್ಡಮ್ಮನ ಮಗಳನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಚಾಕು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಅಂಬರಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನು ಇದೆಲ್ಲದೂ ಆದ ಬಳಿಕ ಆ ಬಾಲಕ ಚಲಿಸುವ ರೈಲಿಗೆ ಸಿಲುಕಿ ಗುರುವಾರ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಎರಡು ಘಟನೆಗಳ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಘಟನೆ ಕುರಿತು ಕಾಚಿಗುಡ ರೈಲ್ವೆ ಇನ್ಸ್‌ಪೆಕ್ಟ‌ರ್ ಎಲ್ಲಪ್ಪ ಮಾಹಿತಿ ನೀಡಿದ್ದು, ಗುರುವಾರ ಮಧ್ಯರಾತ್ರಿ ವಿದ್ಯಾನಗರ ಮತ್ತು ಜಾಮಿಯಾ ಉಸ್ಮಾನಿಯಾ ನಿಲ್ದಾಣಗಳ ನಡುವೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಆದರೆ ಭಯ ಹುಟ್ಟಿಸುವ ಸಂಗತಿ ಎಂದರೆ ಕೇವಲ 10ನೆ ತರಗತಿ ಓದುವ ಮಕ್ಕಳು ಹೀಗೆ ಪ್ರೀತಿ, ಪ್ರೇಮ ಎಂದು ಅಲೆಯುತ್ತಾ, ಸಾಯಿಸುವ ಹಾಗೂ ಸಾಯುವ ಹಂತಕ್ಕೆ ತಲುಪುತ್ತಾರೆ ಎಂದರೆ ಅದು ನಿಜಕ್ಕೂ ಭಯ ಹುಟ್ಟಿಸುವ ವಿಷಯವೇ ಆಗಿದೆ. ಹೀಗಾದಾಗ ಪೋಷಕರಿಗೆ, ಹೆಣ್ಣು ಹೆತ್ತವರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಧೈರ್ಯವಾದರೂ ಬರುವುದು ಹೇಗೆ?

Advertisement
Advertisement