For the best experience, open
https://m.hosakannada.com
on your mobile browser.
Advertisement

Parliment Election: ಟಿಕೆಟ್ ಮಿಸ್ ಆಗಿದ್ದಕ್ಕೆ ತಮಿಳುನಾಡು ಸಂಸದ ವಿಷ ಕುಡಿದು ಆತ್ಮಹತ್ಯೆಗೆ ಯತ್ನ!!

Parliment Election: ತಮಿಳುನಾಡಿನ ಎಂಡಿಎಂಕೆ(MDMK) ಸಂಸದ ಗಣೇಶಮೂರ್ತಿ ಅವರು ಕ್ರಿಮಿನಾಶಕ ಸೇವಿಸಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
12:28 PM Mar 25, 2024 IST | ಸುದರ್ಶನ್
UpdateAt: 12:43 PM Mar 25, 2024 IST
parliment election  ಟಿಕೆಟ್ ಮಿಸ್ ಆಗಿದ್ದಕ್ಕೆ ತಮಿಳುನಾಡು ಸಂಸದ ವಿಷ ಕುಡಿದು ಆತ್ಮಹತ್ಯೆಗೆ ಯತ್ನ
Advertisement

Parliment Electionಗೆ ಸ್ಪರ್ಧಿಸಲು ಈ ಸಲ ಟಿಕೆಟ್ ನೀಡಲಿಲ್ಲವೆಂದು ತಮಿಳುನಾಡಿನ ಎಂಡಿಎಂಕೆ(MDMK) ಸಂಸದ ಗಣೇಶಮೂರ್ತಿ(MP Ganeshmurthy) ಅವರು ಕ್ರಿಮಿನಾಶಕ ಸೇವಿಸಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

Advertisement

ಇದನ್ನು ಓದಿ: Holi Video in Metro: ಹೋಳಿ ನೆಪ; ಮೆಟ್ರೋದಲ್ಲಿ ರೊಮ್ಯಾನ್ಸ್‌ ಮೂಡ್‌ನಲ್ಲಿ ಡ್ಯಾನ್ಸ್‌ ಮಾಡಿದ ಯುವತಿಯರು

Advertisement

ಹೌದು, ತಮಿಳುನಾಡಿನ(Tamilunadu) ಈರೋಡ್ ಸಂಸದ ಎ. ಗಣೇಶಮೂರ್ತಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಅವರನ್ನು ಕೊಯಂಬತ್ತೂರಿನ(Koyambatur) ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಈರೋಡ್ ಲೋಕಸಭೆ ಕ್ಷೇತ್ರದಿಂದ ಗಣೇಶಮೂರ್ತಿ ಅವರಿಗೆ ಟಿಕೆಟ್ ನೀಡಲು ಎಂಡಿಎಂಕೆ ಪಕ್ಷ ನಿರಾಕರಿಸಿದ್ದರಿಂದ ಇತ್ತೀಚೆಗೆ ಮಾನಸಿಕವಾಗಿ ನೊಂದಿದ್ದ ಅವರು ರವಿವಾರ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Death News: ಹೊಲಕ್ಕೆ ಬಿದ್ದ ಬೆಂಕಿ ನಂದಿಸಲು ಹೋಗಿ ಮಹಿಳೆ ಆಗ್ನಿಗಾಹುತಿ

ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಚಿಕಿತ್ಸೆಗಾಗಿ ಈರೋಡ್(Erod) ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರನ್ನು ತಪಾಸಣೆ ಮಾಡಿ ಐಸಿಯುಗೆ ದಾಖಲಿಸಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು.

ಅಂದಹಾಗೆ ಡಿಎಂಕೆ ಈ ಬಾರಿ ಈರೋಡ್‌ ಲೋಕಸಭಾ ಕ್ಷೇತ್ರಕ್ಕೆ ಗಣೇಶಮೂರ್ತಿ ಅವರ ಬದಲಿಗೆ ಕೆ ಇ ಪ್ರಕಾಶ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ತೀವ್ರ ಮನನೊಂದು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಕೆಲ ಕಾರ್ಯಕರ್ತರು ಅಭಿಪ್ರಾಯ ಹೊರಹಾಕಿದ್ದಾರೆ.

Advertisement
Advertisement
Advertisement