ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Tablet Infection: ಕೆಮ್ಮು ಶೀತವೆಂದು ವೈದ್ಯರ ಸಲಹೆಯಿಲ್ಲದೇ ಮಾತ್ರೆ ತಗೊಂಡ ಮಹಿಳೆ; ಮುಖದ ಚರ್ಮ ಸುಕ್ಕುಗಟ್ಟಿತು, ಕಣ್ಣಿಂದ ರಕ್ತ ಹರಿಯಿತು; ಕಾರಣ?

Tablet Infection: ಇಬುಪ್ರೊಫೇನ್‌ ಎನ್ನುವ ಮಾತ್ರೆಯನ್ನು ನುಂಗಿದ್ದು, ಸ್ವಲ್ಪ ಹೊತ್ತಿನ ನಂತರ ಈಕೆಯ ಕಣ್ಣು ಕೆಂಪಾಗಾಗಿದ್ದು, ಮುಖ ಸುಕ್ಕುಗಟ್ಟಿದಂತಾಗಿ ಹಾವಿನ ಚರ್ಮದಂತಾಗಿದೆ
12:54 PM Apr 17, 2024 IST | ಸುದರ್ಶನ್
UpdateAt: 01:11 PM Apr 17, 2024 IST

Tablet Infection: ವೈದ್ಯರ ಸಲಹೆ ಇಲ್ಲದೆ ಔಷಧ ತೆಗೆದುಕೊಂಡು ಏನಾಗುತ್ತದೆ ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ. ನೆಗಡಿಯಾಯಿತೆಂದು ಈ ಮಹಿಳೆ ಮೈಕೈ ನೋವು ನಿವಾರಕ ಇಬುಪ್ರೊಫೇನ್‌ ಎನ್ನುವ ಮಾತ್ರೆಯನ್ನು ನುಂಗಿದ್ದು, ಸ್ವಲ್ಪ ಹೊತ್ತಿನ ನಂತರ ಈಕೆಯ ಕಣ್ಣು ಕೆಂಪಾಗಾಗಿದ್ದು, ಮುಖ ಸುಕ್ಕುಗಟ್ಟಿದಂತಾಗಿ ಹಾವಿನ ಚರ್ಮದಂತಾಗಿದೆ.

Advertisement

ಇದನ್ನೂ ಓದಿ: Best Way to Eat Mango: ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಟ್ಟು ತಿನ್ನಿ; ಕಾರಣ ಇಲ್ಲಿದೆ

ತುಟಿಗಳ ಮೇಲೆ ಹಳದಿ ಪದರ ಬಂದಿತ್ತು. ಕಣ್ಣಿನಿಂದ ರಕ್ತ ಹರಿಯೋಕೆ ಪ್ರಾರಂಭವಾಗಿದೆ. ಇಬುಪ್ರೊಫೇನ್‌ ಸುರಕ್ಷಿತ ಮಾತ್ರ. ಆದರೆ ಇದನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು ಎಂದು ವೈದ್ಯರ ಹೇಳಿಕೆ.

Advertisement

ಆದರೆ ಇರಾಕ್‌ ಮಹಿಳೆ ಇದನ್ನು ತಗೊಂಡಿದ್ದಾಳೆ. ಮೈಕೈ ನೋವು ಶೀತವೆಂದು ಈ ಔಷಧಗಳನ್ನು ತೆಗೆದುಕೊಂಡ ನಂತರ ಈ ಭೀಕರ ಲಕ್ಷಣಗಳು ಕಂಡಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಈ ಔಷಧವು ಆಕ್ರಮಣ ಮಾಡಲು ಪ್ರಾರಂಭ ಮಾಡಿದೆ. ಇದರಿಂದ ದೇಹದಲ್ಲಿ ಗುಳ್ಳೆಗಳು ಏಳುತ್ತದೆ, ಊತ ಉಂಟಾಗುತ್ತದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ ಸ್ಟೀವನ್ಸ್‌-ಜಾನ್ಸನ್‌ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Banana: ರಾತ್ರಿಯ ಸಮಯದಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ? : ತಪ್ಪದೇ ಸೇವಿಸಿ

ಇದೊಂದು ಅಪರೂಪದ ಸೋಂಕು. ಮಹಿಳೆ ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಯಾಗಿದೆ. ಗಂಟಲಿಗೆ ಟ್ಯೂಬ್‌ ಅಳವಡಿಸಲಾಗಿದೆ. ಅಪರೂಪದ ಸಂದರ್ಭಗಳಲ್ಲಿ ಸಾವು ಸಂಭವಿಸುತ್ತದೆ ಎನ್ನಲಾಗಿದೆ. ಅನೇಕ ಸಂದರ್ಭದಲ್ಲಿ ಈ ಮಾತ್ರೆ ನುಂಗಿದರೆ ಚರ್ಮದ ಸೋಂಕುಗಳು ಸಂಭವಿಸುತ್ತದೆ.

ಮಹಿಳೆ 400 ಮಿಗ್ರಾಂ ಇಬುಪ್ರೊಫೇನ್‌ ಎರಡು ಮಾತ್ರೆ ತೆಗೆದುಕೊಂಡಿರುವುದಾಗಿ ವೈದ್ಯರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

Advertisement
Advertisement
Next Article