For the best experience, open
https://m.hosakannada.com
on your mobile browser.
Advertisement

Surrogacy Laws: ಇನ್ಮುಂದೆ ಮಕ್ಕಳನ್ನು ಹೀಗೂ ಪಡೆಯಬಹುದು - ಹೈಕೋರ್ಟ್ ಮಾಡಿಕೊಡ್ತು ಹೊಸ ಅವಕಾಶ

10:50 AM Nov 23, 2023 IST | ಕಾವ್ಯ ವಾಣಿ
UpdateAt: 10:50 AM Nov 23, 2023 IST
surrogacy laws  ಇನ್ಮುಂದೆ ಮಕ್ಕಳನ್ನು ಹೀಗೂ ಪಡೆಯಬಹುದು   ಹೈಕೋರ್ಟ್ ಮಾಡಿಕೊಡ್ತು ಹೊಸ ಅವಕಾಶ
Advertisement

Surrogacy Laws: 2023ರ ಮಾರ್ಚ್ 14ರಿಂದ ಜಾರಿಗೆ ಬಂದಿರುವ ಬಾಡಿಗೆ ತಾಯ್ತನ ತಿದ್ದುಪಡಿ ನಿಯಮ 7 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀವು ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು 13 ದಂಪತಿಗಳಿಗೆ ಹೈಕೋರ್ಟ್ ಅವಕಾಶ ಕಲ್ಪಿಸಿದೆ.

Advertisement

ಕಾನೂನು ಪ್ರಕಾರ (Surrogacy Laws) ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ನೂತನ ತಿದ್ದುಪಡಿ ಪ್ರಕಾರ ದಾನಿಗಳ ವೀರ್ಯ ಪಡೆಯಲು ನಿರ್ಬಂಧವಿದೆ. ಆದರೆ, ಎಲ್ಲವನ್ನೂ ಏಕರೂಪದಲ್ಲಿ ಗಮನಿಸುವುದು ಸರಿಯಲ್ಲ. ಪ್ರತಿಯೊಂದನ್ನೂ ಸಂಬಂಧ ಪಟ್ಟ ಪ್ರಕರಣಕ್ಕೆ ತಕ್ಕಂತೆ ಗಮನಿಸಿ, ನಿಯಮಗಳನ್ನು ಆಧರಿಸಿ ಸಡಿಲಗೊಳಿಸಬಹುದು' ಎಂದು ಆದೇಶಿಸಿದೆ.

ಅದಲ್ಲದೆ ಹಲವು ಬಾಡಿಗೆ ತಾಯ್ತನ ಆಯ್ಕೆ ವಿಚಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇದೆ. ಆದಾಗ್ಯೂ, ಅರ್ಜಿದಾರ ದಂಪತಿಗಳ ವೈದ್ಯಕೀಯ ಸ್ಥಿತಿಗತಿಗಳನ್ನು ಪರಿಗಣಿಸಿ ಬಾಡಿಗೆ ತಾಯ್ತನದ ಮೂಲಕ ಅವರು ಮಕ್ಕಳನ್ನು ಪಡೆಯಬಹುದು. ಈ ಸಂಬಂಧ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಪರಿಶೀಲಿಸಿ ಅಗತ್ಯ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು' ಎಂದು ನ್ಯಾಯಪೀಠ ಆದೇಶಿಸಿದೆ.

Advertisement

ಇದನ್ನೂ ಓದಿ: Induction Stove Cleaning Tips: ಕರೆಂಟ್ ಸ್ಟವ್ ಕ್ಲೀನ್ ಮಾಡಲು ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್

Advertisement
Advertisement
Advertisement