For the best experience, open
https://m.hosakannada.com
on your mobile browser.
Advertisement

Drought Relief: ರಾಜ್ಯದ ರೈತರಿಗೆ ಬೊಂಬಾಟ್ ನ್ಯೂಸ್ - ನಿಮ್ಮ ಕೈ ಸೇರುತ್ತೆ 22,500 ದಷ್ಟು ಭರ್ಜರಿ ಬೆಳೆ ಪರಿಹಾರ !! ಹೀಗೆ ಮಾಡಿದರಷ್ಟೇ

04:42 PM Dec 07, 2023 IST | ಅಶ್ವಿನಿ ಹೆಬ್ಬಾರ್
UpdateAt: 04:44 PM Dec 07, 2023 IST
drought relief  ರಾಜ್ಯದ ರೈತರಿಗೆ ಬೊಂಬಾಟ್ ನ್ಯೂಸ್   ನಿಮ್ಮ ಕೈ ಸೇರುತ್ತೆ  22 500 ದಷ್ಟು ಭರ್ಜರಿ ಬೆಳೆ ಪರಿಹಾರ    ಹೀಗೆ ಮಾಡಿದರಷ್ಟೇ
Image source: One India
Advertisement

Drought Relief: ರಾಜ್ಯದ ರೈತರೇ ಗಮನಿಸಿ, ನಿಮಗೊಂದು ಖುಷಿಯ ಸುದ್ದಿ (Good News)ಹೊರಬಿದ್ದಿದೆ. ಬರ ಪರಿಸ್ಥಿತಿ(Drought)ಹಿನ್ನೆಲೆಯಲ್ಲಿ ಎನ್‌ ಡಿಆರ್‌ ಎಫ್‌(NDRF)ಅನುದಾನ ಬಂದ ಬಳಿಕ ಹೆಕ್ಟೇರ್‌ ಗೆ 22,500 ರವರೆಗೆ ಬೆಳೆ ಪರಿಹಾರ (Drought Relief)ನೀಡಲಾಗುವ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.

Advertisement

ಇದನ್ನು ಓದಿ: 7th pay commission: 7ನೇ ವೇತನ ಆಯೋಗ ಜಾರಿ - ಸದನದಲ್ಲಿ ಸಿದ್ದರಾಮಯ್ಯ ಮಹತ್ವದ ಹೇಳಿಕೆ!!

ಕೇಂದ್ರ ಸರ್ಕಾರ(Central Government)ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಅನುದಾನ ನಿರೀಕ್ಷಿಸಿ ಬೆಳೆ ಹಾನಿ (crop loss)ಪರಿಹಾರದ ಮೊದಲ ಕಂತಿನ ರೂಪದಲ್ಲಿ ಅರ್ಹ ರೈತರಿಗೆ ತಲಾ ₹ 2 ಸಾವಿರ ಪಾವತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರದಿಂದ ಅನುದಾನ ಬಂದ ಕೂಡಲೇ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯ ಅನುಸಾರ ಪರಿಹಾರ ನೀಡಲಾಗುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ. ಶೇ 33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್‌ಗೆ ಪರಿಹಾರ ನಿಗದಿ ಮಾಡಲಾಗಿದೆ.ಹೆಕ್ಟೇರ್‌ಗೆ ₹ 22,500 ರವರೆಗೆ ಬೆಳೆ ಪರಿಹಾರ ನೀಡಲಾಗುತ್ತದೆ. ಮಳೆಯಾಶ್ರಿತ ಬೆಳೆಗಳಿಗೆ-8,500 ರೂ. ಪರಿಹಾರ ಸಿಗಲಿದೆ. ನೀರಾವರಿ ಬೆಳೆಗೆ-17,000 ರೂ. ಸಿಗಲಿದ್ದು, ಬಹುವಾರ್ಷಿಕ ಬೆಳೆಗೆ- 22,500 ರೂ. ನಿಗದಿ ಮಾಡಲಾಗಿದೆ.

Advertisement

Advertisement
Advertisement
Advertisement