For the best experience, open
https://m.hosakannada.com
on your mobile browser.
Advertisement

Snake Free State: ಭಾರತದ ಈ ರಾಜ್ಯಕ್ಕೆ 'ಸ್ನೇಕ್ ಫ್ರೀ' ರಾಜ್ಯ ಸ್ಥಾನಮಾನ

Snake Free State: ಭಾರತದಲ್ಲಿ ಹಾವುಗಳೇ ಕಾಣದ ರಾಜ್ಯವೊಂದಿದೆ ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ ಈ ವಿಶೇಷ ಮಾಹಿತಿಯನ್ನು ತಿಳಿಯೋಣ.
10:06 AM Apr 19, 2024 IST | ಸುದರ್ಶನ್
UpdateAt: 10:25 AM Apr 19, 2024 IST
snake free state  ಭಾರತದ ಈ ರಾಜ್ಯಕ್ಕೆ  ಸ್ನೇಕ್ ಫ್ರೀ  ರಾಜ್ಯ ಸ್ಥಾನಮಾನ
Advertisement

Snake Free State: ಹಾವು ವಿಶ್ವದ ಅತ್ಯಂತ ವಿಷಕಾರಿ ಪ್ರಾಣಿ. ಆದರೆ ಈ ವಿಷಪೂರಿತ ಪ್ರಾಣಿ ಭಾರತದ ಯಾವ ರಾಜ್ಯದಲ್ಲಿ ನಿಮಗೆ ಕಾಣಲು ಸಿಗುವುದಿಲ್ಲ ಎಂದು ಗೊತ್ತಿದೆಯೇ? ಭಾರತದ ಬಹುತೇಕ ಸ್ಥಳಗಳಲ್ಲಿ ಹಾವುಗಳು ಕಂಡುಬರುತ್ತವೆ. ಆದರೆ ಭಾರತದಲ್ಲಿ ಹಾವುಗಳೇ ಕಾಣದ ರಾಜ್ಯವೊಂದಿದೆ ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ ಈ ವಿಶೇಷ ಮಾಹಿತಿಯನ್ನು ತಿಳಿಯೋಣ.

Advertisement

ಇದನ್ನೂ ಓದಿ: Bullet Train: ಬುಲೆಟ್ ರೈಲಿನ ಟ್ರ್ಯಾಕ್ ಸಾಮಾನ್ಯ ರೈಲು ಹಳಿಗಿಂತ ಎಷ್ಟು ಭಿನ್ನ?

'ಹಾವು ಮುಕ್ತ' ರಾಜ್ಯದ ಸ್ಥಾನಮಾನವನ್ನು ಹೊಂದಿರುವ ರಾಜ್ಯದ ಕುರಿತು ತಿಳಿಯಬಸುತ್ತೇವೆ. ಭಾರತದಲ್ಲಿ ಕಂಡುಬರುವ ಹಾವುಗಳಲ್ಲಿ ಕೇವಲ 17% ಮಾತ್ರ ವಿಷಕಾರಿ ಉಳಿದ ಎಲ್ಲಾ ಹಾವುಗಳು ವಿಷಕಾರಿಯಲ್ಲ.

Advertisement

ಇದನ್ನೂ ಓದಿ: Fashion Tips: ಅಸಲಿ ಮತ್ತು ನಕಲಿ ಬೆಳ್ಳಿ ಆಭರಣಗಳ ನಡುವೆ ಅಸಲಿ ಬೆಳ್ಳಿ ಪತ್ತೆ ಮಾಡುವುದು ಹೇಗೆ?

ಹಾವುಗಳು ಹೆಚ್ಚಾಗಿ ಕಂಡು ಬರುವ ರಾಜ್ಯವೆಂದರೆ ಕೇರಳ. ಆದರೆ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶವಾಗಿದ್ದು, ಇಲ್ಲಿ ಒಂದು ಹಾವು ಕೂಡ ಪತ್ತೆಯಾಗಿಲ್ಲ. ಲಕ್ಷದ್ವೀಪದ ಒಟ್ಟು ಜನಸಂಖ್ಯೆ ಕೇವಲ 64000 ಮಾತ್ರ. ಮಾಹಿತಿಯ ಪ್ರಕಾರ, ಲಕ್ಷದ್ವೀಪದಲ್ಲಿ 36 ದ್ವೀಪಗಳಿವೆ, ಆದರೆ ಈ ಪೈಕಿ 10 ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಿದ್ದಾರೆ. ಇದರಲ್ಲಿ ಕವರಟ್ಟಿ, ಅಗತ್ತಿ, ಅಮಿನಿ, ಕದ್ಮತ್, ಕಿಲಾತನ್, ಚೆಟ್ಲಾಟ್, ಬಿತ್ರಾ, ಆಂದೋಹ್, ಕಲ್ಪಾನಿ ಮತ್ತು ಮಿನಿಕೋಯ್ ದ್ವೀಪ ಸೇರಿವೆ.

ಹಾವು ಕಾಣದ ರಾಜ್ಯ ಲಕ್ಷದ್ವೀಪ. ಲಕ್ಷದ್ವೀಪದ ಸಸ್ಯ ಮತ್ತು ಪ್ರಾಣಿಗಳ ಪ್ರಕಾರ, ಲಕ್ಷದ್ವೀಪವು ಹಾವು ಮುಕ್ತ ರಾಜ್ಯವಾಗಿದೆ. ಇದಲ್ಲದೆ, ಇದು ರೇಬಿಸ್ ಮುಕ್ತ ರಾಜ್ಯವಾಗಿದೆ, ಏಕೆಂದರೆ ಇಲ್ಲಿ ನಾಯಿಗಳು ಸಹ ಕಂಡುಬರುವುದಿಲ್ಲ. ಆದರೆ, ಕಾಗೆಗಳಂತಹ ಪಕ್ಷಿಗಳು ಇಲ್ಲಿ ಹೇರಳವಾಗಿ ಕಂಡುಬರುತ್ತವೆ. ಅಳಿವಿನಂಚಿನಲ್ಲಿರುವ ಈ ದ್ವೀಪದಲ್ಲಿ ಸಿರೇನಿಯಾ ಅಥವಾ 'ಸಮುದ್ರ ಹಸು' ಇದೆ.

Advertisement
Advertisement
Advertisement