For the best experience, open
https://m.hosakannada.com
on your mobile browser.
Advertisement

Shubman Gil : ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಕುಟ್ಟಿ ಪುಡಿಮಾಡಿದ ಶುಭ್ ಮನ್ ಗಿಲ್ 

Shubman gill: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಆಡುವ ಮೂಲಕ ಈ ಸಾಧನೆಯನ್ನು ಮಾಡಿದರು.
07:00 AM Apr 26, 2024 IST | ಸುದರ್ಶನ್
UpdateAt: 07:00 AM Apr 26, 2024 IST
shubman gil   ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಕುಟ್ಟಿ ಪುಡಿಮಾಡಿದ ಶುಭ್ ಮನ್ ಗಿಲ್ 
Advertisement

Shubman Gil : ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಬುಧವಾರ ತಮ್ಮ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, 100 ಐಪಿಎಲ್ ಪಂದ್ಯಗಳನ್ನು ಅಡಿದ ಎರಡನೇ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಆಡುವ ಮೂಲಕ ಈ ಸಾಧನೆಯನ್ನು ಮಾಡಿದರು.

Advertisement

24 ವರ್ಷ ವಯಸ್ಸಿನ ಶುಭಮನ್ ಐಪಿಎಲ್ ಇತಿಹಾಸದಲ್ಲಿ 100 ಪಂದ್ಯಗಳ ಗಡಿ ದಾಟಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಬಾಜನರಾಗಿದ್ದಾರೆ.

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರು 24 ವರ್ಷ ಮತ್ತು 221 ದಿನಗಳ ವಯಸ್ಸಿನಲ್ಲಿ ತಮ್ಮ 100 ನೇ ಐಪಿಎಲ್ ಪಂದ್ಯವನ್ನು ಆಡಿದ ಮೂಲಕ ಈ ಮೈಲಿಗಲ್ಲನ್ನು ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ.

Advertisement

ಭಾರತದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ 25 ವರ್ಷ ಮತ್ತು 182 ದಿನಗಳ ವಯಸ್ಸಿನಲ್ಲಿ ತಮ್ಮ 100 ನೇ ಐಪಿಎಲ್ ಪಂದ್ಯವನ್ನು ಆಡಿದ್ದರು.

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಟ್ಸನ್ ಮತ್ತು ಪಿಯೂಷ್ ಚಾವ್ಹಾ ಅವರು ಕ್ರಮವಾಗಿ 25 ಹಾಗೂ 26 ವರ್ಷಗಳಿದ್ದಾಗ ತಮ್ಮ 100 ನೇ ಪಂದ್ಯಗಳನ್ನು ಆಡಿದ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

Advertisement
Advertisement
Advertisement