For the best experience, open
https://m.hosakannada.com
on your mobile browser.
Advertisement

Tirupati: ತಿರುಪತಿ ಬಾಲಾಜಿ ದರ್ಶನ ಮಾಡಬೇಕ? KSRTC ಬಸ್ಗಳಲ್ಲಿ ಟಿಕೆಟ್ ಬುಕ್ ಮಾಡಬೇಕಾ?

Tirupati: ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆನ್ನುವ ಆಸೆಯೇ? ಪ್ರಯಾಣದ ಟಿಕೆಟ್‌ ಖರ್ಚು ಎಷ್ಟು? ಎಲ್ಲಿ ದೊರಕುತ್ತದೆ? ವೇಳಾಪಟ್ಟಿ ಏನು? ಇಲ್ಲಿದೆ ವಿವರ
01:07 PM Apr 22, 2024 IST | ಸುದರ್ಶನ್
UpdateAt: 01:07 PM Apr 22, 2024 IST
tirupati  ತಿರುಪತಿ ಬಾಲಾಜಿ ದರ್ಶನ ಮಾಡಬೇಕ  ksrtc ಬಸ್ಗಳಲ್ಲಿ ಟಿಕೆಟ್ ಬುಕ್ ಮಾಡಬೇಕಾ
Advertisement

Tirupati: ಹಿಂದೂ ಧರ್ಮದಲ್ಲಿ ಅನೇಕ ಪುಣ್ಯಕ್ಷೇತ್ರಗಳಿವೆ. ಒಂದೊಂದು ಪುಣ್ಯಕ್ಷೇತ್ರವು ಒಂದೊಂದು ರೀತಿಯ ವೈಶಿಷ್ಟ್ಯಗಳಿಂದ ಕೂಡಿದೆ. ಅದೇ ರೀತಿಯಲ್ಲಿ  ಸಪ್ತಗಿರಿಯಲ್ಲಿ ನೆಲೆಸಿರುವ ಶ್ರೀ ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಕರ್ನಾಟಕದಿಂದ ಮಾತ್ರವಲ್ಲದೆ ದೇಶದ ನಾನಾ ಭಾಗಗಳಿಂದ ಜನಸಾಗರವೇ ಹರಿದು ಬರುತ್ತದೆ.

Advertisement

ಈ ರೀತಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆನ್ನುವವರಿಗೆ ಕನ್ನಡಿಗರಿಗೆ, ಕರ್ನಾಟಕದ ಹೆಮ್ಮೆಯ ಕೆ ಎಸ್ ಆರ್ ಟಿ ಸಿ ಬೆಂಗಳೂರು ಒಳಗೊಂಡಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ತಿರುಪತಿಗೆ ಬಸ್ ಸೇವೆಯನ್ನು ಒದಗಿಸುತ್ತಿದೆ.
ಹಾಗಾದರೆ ಇದರ ಪ್ರಯಾಣದ ಟಿಕೆಟ್ಗೆ ಎಷ್ಟು ಹಣ ಖರ್ಚಾಗುತ್ತದೆ? ಎಲ್ಲಿ ತೆಗೆದುಕೊಳ್ಳಬೇಕು? ಇದರ ವೇಳಾಪಟ್ಟಿ ಏನು ಎಂಬುದನ್ನು ಇಲ್ಲಿ ತಿಳಿಯೋಣ.

ಸಾಮಾನ್ಯವಾಗಿ ಬೆಂಗಳೂರಿನಿಂದ ತಿರುಪತಿ ಮಾರ್ಗವಾಗಿ ದಿನನಿತ್ಯ ಬಸ್ ಸಂಚಾರ ಇದ್ದೇ ಇದೆ. ಇಲ್ಲಿ ಬೆಳಗ್ಗಿನಿಂದ ಹಿಡಿದು ರಾತ್ರಿವರೆಗೂ ಬಸ್ ಗಳು ಸಂಚರಿಸುತ್ತಲೇ ಇರುತ್ತವೆ. ಸಾಮಾನ್ಯವಾಗಿ ಏಸಿ ಸ್ಲೀಪರ್ ಬಸ್ಗಳಲ್ಲಿ ₹803 ರು. ಖರ್ಚಾಗುತ್ತೆ, ಅದೇ ರೀತಿ ಐರಾವತ ಕ್ಲಬ್ ಕ್ಲಾಸ್ ನಲ್ಲಿ 654 ರು. ಇಂದ 704 ರು., ವರೆಗೂ ಖರ್ಚಾಗುತ್ತೆ, ಇನ್ನು ನಾನ್ ಎಸಿ ಸ್ಲೀಪರ್ ರು. 704 ರಿಂದ 654 ರು. ಇದೆ, ಹಾಗೆ ನಾನ್ ಎಸಿ ಸ್ಲಿಪ್ಪರ್ ಬಸ್ಗಳಲ್ಲಿ (ರಾಜಹಂಸ)680 ರಿಂದ 477 ರು. ಟಿಕೆಟ್ ದರ ವಿದ್ಯೆ, ಹಾಗೆಯೇ ಸಾಮಾನ್ಯ ಬಸ್ಗಳಲ್ಲಿ 351 ರು. ನಿಗದಿಪಡಿಸಲಾಗಿದೆ.

Advertisement

ಬೆಂಗಳೂರಿನಲ್ಲಿರುವಂತೆಯೇ ರಾಜ್ಯದ ವಿವಿಧ ಭಾಗಗಳಲ್ಲಿ ಬಸ್ ಸೇವೆಯಿದ್ದು, ಮೈಸೂರಿನಿಂದ ತಿರುಪತಿಗೆ ಐರಾವತ ಕ್ಲಬ್ ಕ್ಲಾಸ್ ಬಸ್ ಸಂಚಾರವಿದೆ. ಈ ಬಸ್ನಲ್ಲಿ ಟಿಕೆಟ್ ವೊಂದಕ್ಕೆ ರೂ.1,066 ದರವಿದೆ. ಈ ಬಸ್ ಸಂಜೆ 4:30ಕ್ಕೆ ಮೈಸೂರಿನಿಂದ ಹೊರಟು ಬೆಳಗ್ಗೆ 3:00 ವೇಳೆಗೆ ತಿರುಪತಿಯನ್ನು ತಲುಪುತ್ತದೆ. ಮತ್ತೊಂದು ಐರಾವತ ಕ್ಲಬ್ ಕ್ಲಾಸ್ ಬಸ್ ರಾತ್ರಿ 8:25ಕ್ಕೆ ಮೈಸೂರಿನಿಂದ ಹೊರಟು, ಬೆಳಗ್ಗೆ ಸುಮಾರು ನಾಲ್ಕು ಮೂವತ್ತರ ಸುಮಾರಿಗೆ ತಿರುಪತಿಯನ್ನು ತಲುಪುತ್ತದೆ.

ಪುನಃ ಈ ಬಸ್ ರಾತ್ರಿ 8ರ ಸುಮಾರಿಗೆ ತಿರುಪತಿಯಿಂದ ಹೊರಟು ಬೆಳಗ್ಗೆ 4:30 ಸಮಯಕ್ಕೆ ಮೈಸೂರನ್ನು ತಲುಪುತ್ತದೆ. ಮತ್ತೊಂದು ಐರಾವತ ಕ್ಲಬ್ ಕ್ಲಾಸ್ ಬಸ್ ರಾತ್ರಿ 9:30ಕ್ಕೆ ಹೊರಟು, ಬೆಳಗ್ಗೆ 6 ಗಂಟೆ ಸುಮಾರಿಗೆ ಮೈಸೂರು ತಲುಪುತ್ತದೆ.

ಇನ್ನು ಮಂಗಳೂರು ಭಾಗದಿಂದಲೂ ತಿರುಪತಿಗೆ ನೇರ ಬಸ್ ಸಂಚಾರವಿದೆ. ಈ ಭಾಗದಲ್ಲೂ ಐರಾವತ ಕ್ಲಬ್ ಕ್ಲಾಸ್ ಬಸ್‌ಗಳು ಓಡಾಟವನ್ನು ನಡೆಸುತ್ತವೆ. ಇದರ ಟಿಕೆಟ್ ದರ 1,684 ರು. ಮಂಗಳೂರಿನಿಂದ ಮಧ್ಯಾಹ್ನ 12ಕ್ಕೆ ಹೊರಡುವ ಬಸ್ ಮಧ್ಯಾಹ್ನ 12 ಗಂಟೆ ಸಮಯಕ್ಕೆ ತಿರುಪತಿ ತಲುಪುತ್ತದೆ. ಇನ್ನೊಂದು ಬಸ್ ಐರಾವತ ಕ್ಲಬ್ ಕ್ಲಾಸ್ ಬಸ್‌ ಮಧ್ಯಾಹ್ನ 2 ಗಂಟೆಗೆ ಹೊರಟು, ತಿರುಪತಿಗೆ ಬೆಳಗಿನ ಜಾವ 6:00ಗೆ ತಲುಪುತ್ತದೆ. ಮೂರನೆಯ ಐರಾವತ ಬಸ್ ರಾತ್ರಿ 8.30 ರ ಸುಮಾರಿಗೆ ಹೊರಟು ಬೆಳಗ್ಗೆ 11:30 ಕ್ಕೆ ತಿರುಪತಿಗೆ ತಲುಪಲಿದೆ.

ನಿಮಗೆ ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೆ ಎಸ್ ಆರ್ ಟಿ ಸಿ ಯ ಅಧಿಕೃತ ಜಾಲತಾಣ https://www.ksrtc.in/oprs-web/ ಗೆ ಬೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ. ಅಥವಾ ನಿಮ್ಮ ಹತ್ತಿರದ ಬಸ್ ಸ್ಟಾಂಡ್ ಗೆ ತೆರಳಿ ಮಾಹಿತಿ ಪಡೆಯಲಿ.

ಇದನ್ನೂ ಓದಿ: Gadag: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣ ; ಕೊಲೆಗೆ ಸುಪಾರಿ ನೀಡಿದ್ದು ಯಾರು ಗೊತ್ತೇ?

Advertisement
Advertisement
Advertisement