For the best experience, open
https://m.hosakannada.com
on your mobile browser.
Advertisement

Sri Ram Photo: ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ನೀಡಿದ ಅಂಗಡಿ ಮಾಲೀಕ

Sri Ram Photo: ರಾಮನ ಚಿತ್ರ ಮುದ್ರಿಸಿದ ಪ್ಲೇಟ್‌ಗಳಲ್ಲಿ ನಾನ್‌ವೆಜ್ ಬಿರಿಯಾನಿ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
10:23 AM Apr 24, 2024 IST | ಸುದರ್ಶನ್
UpdateAt: 10:26 AM Apr 24, 2024 IST
sri ram photo  ರಾಮನ ಚಿತ್ರವಿರುವ ಪ್ಲೇಟ್‌ನಲ್ಲಿ ನಾನ್‌ವೆಜ್‌ ಬಿರಿಯಾನಿ ನೀಡಿದ ಅಂಗಡಿ ಮಾಲೀಕ

Sri Ram Photo: ಭಗವಾನ್ ರಾಮನ ಚಿತ್ರವನ್ನು ಹೊಂದಿರುವ ಬಿರಿಯಾನಿ ಪ್ಲೇಟ್‌ನಲ್ಲಿ ಬಿರಿಯಾನಿ ಮಾರಾಟ ಮಾಡಿದ ಆರೋಪವೊಂದು ಕೇಳಿ ಬಂದಿದ್ದು, ಅನಂತರ ಹೋಟೆಲ್ ಮಾಲೀಕರ ವಿರುದ್ಧ ದೆಹಲಿ ಪೊಲೀಸರು ಶಾಂತಿ ಕದಡುವ ಶಂಕೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಭಾನುವಾರ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹೋಟೆಲ್ ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಈ ಘಟನೆ ವಾಯುವ್ಯ ದೆಹಲಿಯ ಜಹಾಂಗೀರಪುರಿಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:  Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ 10th ವಿದ್ಯಾರ್ಥಿ

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ರಾಮನ ಚಿತ್ರ ಮುದ್ರಿಸಿದ ಪ್ಲೇಟ್‌ಗಳಲ್ಲಿ ನಾನ್‌ವೆಜ್ ಬಿರಿಯಾನಿ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಷ್ಟರಲ್ಲಿ ಅಲ್ಲಿ ನೆರೆದಿದ್ದ ಜನರು ಪ್ರತಿಭಟನೆ ಮಾಡುತ್ತಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಪೊಲೀಸರು ಭರವಸೆ ನೀಡಿ ಜನರನ್ನು ಸಮಾಧಾನಪಡಿಸಿದರು.

Advertisement

ಇದನ್ನೂ ಓದಿ:  Bengaluru Murder Case: ಒಂಟಿ ಮಹಿಳೆ ಕೊಲೆ ಪ್ರಕರಣ; ಮಹಿಳೆಗಿತ್ತು ಅತಿಯಾದ ಕಾಮಾಸಕ್ತಿ, ಆರೋಪಿ ಬಂಧನ

ಟ್ಟೆಯಲ್ಲಿ ಶ್ರೀರಾಮನ ಫೋಟೋ ಇರುವುದು ನನಗೆ ತಿಳಿದಿರಲಿಲ್ಲ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಪೂರೈಕೆದಾರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೋಟೆಲ್ ಮಾಲೀಕರಿಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement