Pratap Simha: ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣ - ದೆಹಲಿ ಪೋಲೀಸರಿಂದ ಪ್ರತಾಪ್ ಸಿಂಹ ವಿಚಾರಣೆ ?!
ಪ್ರತಾಪ್ ಸಿಂಹ: ಲೋಕಸಭೆ ಕಲಾಪ ವೀಕ್ಷಣೆ ಪ್ರಯುಕ್ತ ಡಿ.13ರಂದು ಪ್ರತಾಪ್ ಸಿಂಹ (ಪ್ರತಾಪ್ ಸಿಂಹ) ಅವರು ಲಖನೌನ ಸಾಗರ್ ಶರ್ಮಾ ಮತ್ತು ಮೈಸೂರಿನ ಡಿ.ಮನೋರಂಜನ್ ಅವರಿಗೆ ಪಾಸು ನೀಡಿದ್ದು, ಈ ಹಿನ್ನೆಲೆ ಲೋಕಸಭೆಯ ಮೇಲೆ ಹೊಗೆ ಬಾಬ್ ದಾಳಿ ನಡೆಸಿದ ಇಬ್ಬರಿಗೆ ಸಂಸತ್ ಪ್ರವೇಶಿಸಿದ ಪಾಸು ನೀಡಿದ್ದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆ ಪಡೆಯಲು ದೆಹಲಿ ಪೊಲೀಸರ ವಿಶೇಷ ಘಟಕ ಸಿದ್ಧತೆ ನಡೆಸಿದೆ.
ಲೋಕಸಭೆ ಕಲಾಪ ವೀಕ್ಷಣೆಯ ಸಮಯದಲ್ಲಿ ಲಖನೌನ ಸಾಗರ್ ಶರ್ಮಾ ಮತ್ತು ಮೈಸೂರಿನ ಡಿ.ಮನೋರಂಜನ್ ಈ ಇಬ್ಬರು ಸಂಸತ್ ಕಲಾಪದ ವೇಳೆ ಹೊಗೆ ಬಾಂಬ್ ಸಿಡಿಸಿ ಗದ್ದಲ ಎಬ್ಬಿಸಿದ್ದರು. ಈ ಪಡೆಯಲು ಪ್ರತಾಪ್ ಸಿಂಹ ಹೇಳಿಕೆ ವಿಶೇಷ ಸೆಲ್ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಮಾಹಿತಿ ಪ್ರಕಾರ ಪಾಸ್ ಗಾಗಿ ಮನೋರಂಜನ್ ಕಳೆದ ಮೂರು ತಿಂಗಳಿನಿಂದ ಪ್ರತಾಪ್ ಸಿಂಹ ಅವರ ಕಚೇರಿಗೆ ಭೇಟಿ ನೀಡಿ ಹಲವು ಬಾರಿ ಮನವಿ ಮಾಡಿದ್ದರು. ಮೈಸೂರಿನ ನಿವಾಸಿ ಎಂದು ಹೇಳಿ ಪಾಸ್ ಮಾಡಿದ್ದ. ಸಾಮಾನ್ಯವಾಗಿ ಮೈಸೂರಿನವರು ಎಂದರೆ ಪ್ರತಾಪ್ ಸಿಂಹ ಅವರ ಮನವಿಗೆ ಪ್ರತಿಕ್ರಿಯಿಸುವುದು ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಪ್ರತಾಪ್ ಸಿಂಹ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ, ಪ್ರತಾಪ್ ಸಿಂಹ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಲಿಲ್ಲ. ಆದರೆ, ಘಟನೆಯ ಬಗ್ಗೆ ಲೋಕಸಭೆ ಸ್ಪೀಕರ್ ಓಮ್ ಬಿರ್ಲಾ ಅವರನ್ನು ಭೇಟಿ ಮಾಡಿದರು.
ಸದ್ಯದ ಬಳಿಕ ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಲು ಮತ್ತು ಅಂತಹ ಘಟನೆಗಳನ್ನು ಮರುಕಳಿಸದಂತೆ ಖಚಿತಪಡಿಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲು 'ಉನ್ನತ ಸಮಿತಿ'ಯನ್ನು ರಚಿಸಿರುವುದಾಗಿ ಬಿರ್ಲಾ ಶನಿವಾರ ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದಾರೆ.