For the best experience, open
https://m.hosakannada.com
on your mobile browser.
Advertisement

School Viral News: ಸ್ಕೂಲಲ್ಲೇ ಮಗುವಿನ ತಲೆಗೆ ಕುಕ್ಕಿದ ಕೋಳಿ- ಶಾಲೆಗೆ ಬಂದು ಪೋಷಕರು ಮಾಡಿದ್ದೇನು ಗೊತ್ತಾ?!

04:41 PM Nov 24, 2023 IST | ಕಾವ್ಯ ವಾಣಿ
UpdateAt: 07:08 PM Dec 05, 2023 IST
school viral news  ಸ್ಕೂಲಲ್ಲೇ ಮಗುವಿನ ತಲೆಗೆ ಕುಕ್ಕಿದ ಕೋಳಿ  ಶಾಲೆಗೆ ಬಂದು ಪೋಷಕರು ಮಾಡಿದ್ದೇನು ಗೊತ್ತಾ
Advertisement

School Viral News: ಹೆತ್ತವರಿಗೆ ತಮ್ಮ ಮಕ್ಕಳ ಮೇಲೆ ಅತಿಯಾದ ಪ್ರೀತಿ ಇರುವುದು ಸಹಜ. ಅಂತೆಯೇ ಅಕ್ಷರ ಕಲಿಯಲು ಶಾಲೆಗೆ ಕಳಿಸಿದ ಮಗುವಿಗೆ ಕೋಳಿ ಕುಕ್ಕಿ ಗಾಯ ಗೊಳಿಸಿದ್ದು, ಈ ಹಿನ್ನೆಲೆ ಪೋಷಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದು. ಜೊತೆಗೆ ಆ ಶಾಲೆಗೆ ಬೀಗ ಜಡಿದ ವಿಚಾರ (School Viral News) ಬೆಳೆಕಿಗೆ ಬಂದಿದೆ.

Advertisement

ಪೋಷಕರ ಪ್ರಕಾರ, ಶಾಲೆಗೆ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೇ ಮಗುವನ್ನು ಕೋಳಿ ಕುಕ್ಕಿದೆ ಎಂದು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಗುರುವಾರ ಚಾಮರಾಜನಗರದ ಹನೂರು ತಾಲೂಕಿನ ಪೆದ್ದನಪಾಳ್ಯ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗುರುವಾರದಂದೆ ಶಾಲೆಗೆ ಬೀಗ ಜಡಿದು ಮಕ್ಕಳನ್ನು ಪಾಲಕರು ಮನೆಗೆ ಕರೆದೊಯ್ದಿದ್ದರು. ಇಂದು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪಾಲಕರು ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟಿಸಿ ಅಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನು ಓದಿ: Covid Time Research: ಕೋವಿಡ್ ಸಮಯದಲ್ಲಿ ನೀವು ಈ ರೂಲ್ಸ್ ಫಾಲೋ ಮಾಡಿಲ್ವಾ? ಹಾಗಿದ್ರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್

Advertisement

ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ ಹಸು ಕರುಗಳನ್ನು ಕಟ್ಟುತ್ತಿದ್ದು ಜೊತೆಗೆ ಕೋಳಿಗಳನ್ನು ಮೇಯಲು ಬಿಡುತ್ತಿರುವ ಪರಿಣಾಮ ಈ ಘಟನೆ ನಡೆದಿದ್ದು ಇಲಾಖೆ ಸರಿಯಾದ ರೀತಿ ವ್ಯವಸ್ಥೆ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ. ಸದ್ಯ, ಅಧಿಕಾರಿಗಳು ಇಂದು ಶಾಲೆಗೆ ಭೇಟಿ ಕೊಟ್ಟು ಪಾಲಕರ ಮನವೊಲಿಸುವ ಪಾಲಕರು ಮಾಡುತ್ತಿದ್ದಾರೆ.

ಇದನ್ನು ಓದಿ: Gujarat: ನನ್ನ ಸಂಬಳ ಕೊಡಿ ಎಂದು ಕೇಳಿದ ದಲಿತ ಸೇಲ್ಸ್‌ ಮ್ಯಾನೇಜರ್‌ ಮೇಲೆ ಬೂಟ್‌ ನೆಕ್ಕಿಸಿ, ಹಲ್ಲೆ!!!

Advertisement
Advertisement
Advertisement