Varaha Roopam Controversy: ʼಕಾಂತಾರʼ ಚಿತ್ರದ ʼವರಾಹರೂಪಂ..' ಹಾಡಿನ ಹಕ್ಕುಸ್ವಾಮ್ಯ ಪ್ರಕರಣ; ಮಹತ್ವದ ಆದೇಶ ನೀಡಿದ ಕೇರಳ ಹೈಕೋರ್ಟ್!!!
Varaha Roopam song controversy: ʼಕಾಂತಾರʼ ಸಿನಿಮಾದ ಜನಪ್ರಿಯ ಹಾಡು ʼವರಾಹ ರೂಪಂʼ ಗೆ ಸಂಬಂಧಿಸಿದಂತೆ (Varaha Roopam song controversy) ಹಕ್ಕುಸ್ವಾಮ್ಯ ಉಲ್ಲಂಘಟನೆ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ಸಿನಿಮಾ ನಿರ್ಮಾಪಕರು ಹಾಗೂ ದೂರುದಾರರು ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ಹೇಳಿದ ಕಾರಣ ಪಿ ಎ ಕುಂಞಕೃಷ್ಣನ್ ನೇತೃತ್ವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಪ್ರಕರಣ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ಕಾಂತಾರ ಸಿನಿಮಾದಲ್ಲಿ ವರಾಹರೂಪಂ ಹಾಡನ್ನು ಬಳಸದೇ ಪ್ರದರ್ಶನ ಮಾಡಬೇಕೆಂಬ ಕೇರಳ ಹೈಕೋರ್ಟ್ ಆದೇಶ ಫೆಬ್ರವರಿಯಲ್ಲಿ ತಡೆ ನೀಡಿತ್ತು. 1957ರ ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 63ರಡಿ ಶಿಕ್ಷಾರ್ಹ ಅಪರಾಧಗಳನ್ನು ಉಲ್ಲೇಖಿಸಿ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಿ ವಿಚಾರಣೆ ಕೊನೆಗೊಳಿಸಿದೆ.
ಇದನ್ನೂ ಓದಿ: Sorry ಅಂದ್ರೆ ಕ್ಷಮಿಸಿ ಅಂತ ಅಲ್ವಂತೆ! ಇದರ ಹಿಂದಿದೆ ಬೇರೇನೆ ಅರ್ಥ ಎಲ್ಲಿಂದ ಬಂತು ಈ ಪದ?