For the best experience, open
https://m.hosakannada.com
on your mobile browser.
Advertisement

Bengalore: ನಟ ದರ್ಶನ್ ಮನೆ ಮುಂದೆ ಕಾರು ನಿಲ್ಸಿದಕ್ಕೆ ಮಹಿಳೆ ಮೇಲೆ ಮನೆಯ ನಾಯಿಯಿಂದ ಅಟ್ಯಾಕ್- ಛೂ ಬಿಟ್ಟದ್ದು ಯಾರು ಗೊತ್ತಾ !!

06:37 AM Nov 01, 2023 IST | ಹೊಸ ಕನ್ನಡ
UpdateAt: 06:37 AM Nov 01, 2023 IST
bengalore  ನಟ ದರ್ಶನ್ ಮನೆ ಮುಂದೆ ಕಾರು ನಿಲ್ಸಿದಕ್ಕೆ ಮಹಿಳೆ ಮೇಲೆ ಮನೆಯ ನಾಯಿಯಿಂದ ಅಟ್ಯಾಕ್  ಛೂ ಬಿಟ್ಟದ್ದು ಯಾರು ಗೊತ್ತಾ
Advertisement

Actor Darshan dog bite : ಖ್ಯಾತ ಚಲನಚಿತ್ರ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಎದುರುಗಡೆ ತಿಳಿಯದೆ ಮಹಿಳೆಯೊಬ್ಬರು ಕಾರ್ ಪಾರ್ಕ್ ಮಾಡಿದ್ದು, ಇದಕ್ಕಾಗಿ ದರ್ಶನ್ ಮನೆಯ ಸಿಬ್ಬಂದಿಗಳು ನಾಯಿಯನ್ನು( Actor Darshan dog bite ) ಛೂ ಬಿಟ್ಟು ಆ ಮಹಿಳೆಯ ಮೇಲೆ ನಾಯಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ(Bengalure) ನಡೆದಿದೆ.

Advertisement

ಹೌದು, ಅಮಿತಾ ಜಿಂದಾಲ್ ಎಂಬುವವರು ನಟ ದರ್ಶನ್(Darshan) ಮನೆ ಮುಂದೆ ತಿಳಿಯದೆ ಕಾರ್ ಪಾರ್ಕ್ ಮಾಡಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಮರಳಿ ಬಂದು ಕಾರ್ ತೆಗೆಯುವ ವೇಳೆಯಲ್ಲಿ ದರ್ಶನ್‌ ಮನೆಯ ಸಿಬ್ಬಂದಿ ಗಲಾಟೆ ಮಾಡಿ, ನಂತರ ನಾಯಿಯನ್ನು ಛೂ ಬಿಟ್ಟು ಅಮಿತಾ ಅವರಿಗೆ ಕಚ್ಚಿಸಿ ವಿಕೃತಿ ಮೆರೆದಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿದ ಸಂತ್ರಸ್ತೆಯು 'ಸ್ಪರ್ಶ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಇತ್ತು. ಅಲ್ಲಿ ಪಾರ್ಕ್ ಮಾಡಿ ಹೋಗೋ ಅಷ್ಟರಲ್ಲಿ ಲೇಟ್ ಆಗುತ್ತೆ ಎಂದು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿದೆ. ಅಂದರೆ ದರ್ಶನ್ ಮನೆ ಬಳಿಯೇ ಕಾರನ್ನು ಪಾರ್ಕ್ ಮಾಡಿದೆ. ಆಗ ಅಲ್ಲಿ ಯಾರು ಇರಲಿಲ್ಲ. ನಂತರ ಕಾರ್ಯಕ್ರಮ ಮುಗಿಸಿಕೊಂಡು ಕಾರನ್ನು ತೆಗೆಯಲು ಹೋದಾಗ ದರ್ಶನ್ ಮನೆಯ ಸಿಬ್ಬಂದಿ ಅಲ್ಲಿದ್ದರು. ಕಾರನ್ನು ಮನೆಯ ಮುಂದೆ ನಿಲ್ಲಿಸಿದ್ದಕ್ಕೆ ಅವರು ನಮ್ಮ ಮೇಲೆ ಗಲಾಟೆ ಮಾಡೋಕೆ ಬಂದರು. ಆಗ ಅವರು ಕೈಯಲ್ಲಿ ನಾಯಿಗಳನ್ನು ಹಿಡಿದುಕೊಂಡಿದ್ದರು. ಈ ವೇಳೆ ಒಂದು ನಾಯಿ ನನ್ನ ಮೇಲೆ ಅಟ್ಯಾಕ್ ಮಾಡಲು ಮುಂದಾಯ್ತು. ಆಗ ನಾಯಿಯನ್ನು ಹಿಡಿದುಕೊಳ್ಳಿ ಎಂದು ನಾನು ಮನವಿ ಮಾಡಿದೆನುದರೂ ನೀನ್ಯಾಕೆ ಇಲ್ಲಿ ನಿನ್ನ ಕಾರನ್ನು ಪಾರ್ಕ್ ಮಾಡಿದೆ ಅಂತ ನನ್ನ ಮೇಲೆ ದಾಳಿ ಮಾಡುವಂತೆ ನಾಯಿಗೆ ಸೂಚನೆ ನೀಡಿ ಛೂ ಬಿಟ್ಟರು. ಮಾಲೀಕನ ಸೂಚನೆ ಮೇರೆಗೆ ನಾಯಿ ಬಂದು ದಾಳಿ ಮಾಡಿ, ಹೊಟ್ಟೆ ಹಾಗೂ ಇತರೆ ಭಾಗಕ್ಕೆಲ್ಲಾ ಕಚ್ಚಿತು ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

ಇಷ್ಟೇ ಅಲ್ಲದೆ ಮುಂದುವರೆದು ಮಾತನಾಡಿದ ಅವರು ಕ್ಷಣಮಾತ್ರದಲ್ಲಿ ನನ್ನ ಮೇಲೆ ನಾಯಿಗಳು ದಾಳಿ ಮಾಡಿ ಘಾಸಿಗೊಳಿಸಿದ್ದವು. ದರ್ಶನ್‌ ಮನೆಯ ಸಿಬ್ಬಂದಿ ನಾಯಿ ಅಟ್ಯಾಕ್ ಮಾಡಲು ಬಿಟ್ಟು ಸುಮ್ಮನೆ ನಿಂತಿದ್ದರು. ನಾಯಿ ಕಚ್ಚುತ್ತಿದ್ದರೂ ನೋಡುತ್ತಾ ನಿಂತು ವಿಕೃತಿ ಮೆರೆದರು. ಕೊನೆಗೆ, ಮಾನವೀಯತೆಯಿಂದಲೂ ಅವರು ನಮ್ಮನ್ನು ಆಸ್ಪತ್ರೆಗೆ ಸೇರಿಸಲಿಲ್ಲ. ಆ ಕೂಡಲೇ ಅಲ್ಲಿಂದ ಸೀದಾ ನಾನು ಆರ್‌.ಆರ್‌. ನಗರ ಪೊಲೀಸ್‌ ಠಾಣೆಗೆ ಹೋಗಿ ದೂರನ್ನು ಕೊಟ್ಟೆನು' ಎಂದು ಹೇಳಿದ್ದಾರೆ.

ಇದನ್ನೂ ಓದಿ: K M Shivalinge gouda: ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ರಾಜ್ಯದ ಸಿಎಂ ಪಟ್ಟ !!

Advertisement
Advertisement
Advertisement