For the best experience, open
https://m.hosakannada.com
on your mobile browser.
Advertisement

Lok Sabha Election: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮುನ್ನಾ 20.85 ಕೋಟಿ ರೂಪಾಯಿ ನಗದು, 27 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶ

Lok Sabha Election: ರಾಜ್ಯದಲ್ಲಿ 20.85 ಕೋಟಿ ರೂಪಾಯಿ ನಗದು ಮತ್ತು 27 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
08:58 AM Mar 30, 2024 IST | ಸುದರ್ಶನ್
UpdateAt: 09:23 AM Mar 30, 2024 IST
lok sabha election  ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮುನ್ನಾ 20 85 ಕೋಟಿ ರೂಪಾಯಿ ನಗದು  27 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶ
Advertisement

Lok Sabha Election: ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತ ರಾಜ್ಯದಲ್ಲಿ 20.85 ಕೋಟಿ ರೂಪಾಯಿ ನಗದು ಮತ್ತು 27 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Advertisement

ಇದನ್ನೂ ಓದಿ: Daniel Balaji Passes Away: ಖ್ಯಾತ ಖಳನಟ ಡೇನಿಯಲ್‌ ಬಾಲಾಜಿ ಹೃದಯಾಘಾತದಿಂದ ನಿಧನ

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹೊರಡಿಸಿದ ಹೇಳಿಕೆಯ ಪ್ರಕಾರ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಫೈಯಿಂಗ್ ಸ್ಕ್ಯಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್‌ ತಂಡಗಳು ಮತ್ತು ಪೊಲೀಸ್‌

Advertisement

ಅಧಿಕಾರಿಗಳು 20.85 ಕೋಟಿ ನಗದು, 70.86 ಲಕ್ಷ

ಉಚಿತ, 8.63 ಲಕ್ಷ ಲೀಟ‌ರ್ ಮದ್ಯವನ್ನು

ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Indian Navy: ಖಡಗಳ್ಳರ ದಾಳಿಯಿಂದ 23 ಜನ ಪಾಕಿ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ

27 ಕೋಟಿಗೂ ಅಧಿಕ ಮೌಲ್ಯದ 211.23 ಕೆಜಿ ಮಾದಕ ವಸ್ತುಗಳು, 1.47 ಕೋಟಿ ರೂ.ಗೂ ಅಧಿಕ ಮೌಲ್ಯದ 211.23 ಕೆಜಿ ಮಾದಕ ವಸ್ತುಗಳು, 9 ಕೋಟಿ ರೂ.ಗೂ ಅಧಿಕ ಮೌಲ್ಯದ 15 ಕೆಜಿಗಿಂತ ಹೆಚ್ಚಿನ ಚಿನ್ನ, 27 ಲಕ್ಷ ರೂ.ಗೂ ಅಧಿಕ ಮೌಲ್ಯದ 59.04 ಕೆಜಿ ಬೆಳ್ಳಿ ಹಾಗೂ 9 ಲಕ್ಷ ರೂ. ಮೌಲ್ಯದ 21.17 ಕ್ಯಾರೆಟ್ ವಜ್ರಗಳು ಸೇರಿದಂತೆ ಇತರವುಗಳು. ಇಲ್ಲಿಯವರೆಗೆ ವಶಪಡಿಸಿಕೊಂಡಿರುವ ಒಟ್ಟು ಮೌಲ್ಯ 62.42 ಕೋಟಿ ರುಪಾಯಿ ಆಗಿದೆ.

ನಗದು, ಮದ್ಯ, ಡ್ರಗ್ಸ್‌, ಬೆಲೆಬಾಳುವ ಲೋಹ ಉಚಿತ ವಸ್ತುಗಳನ್ನು ವಶಪಡಿಸಿಕೊಂಡ ಬಗ್ಗೆ ಅವರು 969 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಅಬಕಾರಿ ಇಲಾಖೆಯು 974 ಹೇಯ ಪ್ರಕರಣಗಳು, ಪರವಾನಗಿ ಷರತ್ತುಗಳ ಉಲ್ಲಂಘನೆಗಾಗಿ 884 ಪ್ರಕರಣಗಳು, 50 NDPS (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಪ್ಪೆನ್ಸ್ ಆಕ್ಟ್) ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15 (ಎ) ಅಡಿಯಲ್ಲಿ 3,682 ಪ್ರಕರಣಗಳು ಮತ್ತು 567 ವಿವಿಧ ರೀತಿಯ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ತಿಳಿಸಿದೆ.

Advertisement
Advertisement
Advertisement