ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Religion Conversion: ಸದ್ದಿಲ್ಲದೆ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ! ಕಾರಣ ಇದೆನಾ?

Religion Conversion: ಹಿಂದೂ ಧಾರ್ಮಿಕ ವಿಧಿಗಳ ಮೂಲಕ ಮಧ್ಯ ಪ್ರದೇಶ(Madhya Pradesh)ದ ಇಂಧೋರ್‌ನಲ್ಲಿ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ(Religion conversion)ಗೊಂಡಿರುವ ಆಶ್ಚರ್ಯಕರ ಘಟನೆ ನಡೆದಿದೆ.
11:06 AM Jul 01, 2024 IST | ಕಾವ್ಯ ವಾಣಿ
UpdateAt: 11:06 AM Jul 01, 2024 IST
Advertisement

Religion Conversion: ಹಿಂದೂ ಧಾರ್ಮಿಕ ವಿಧಿಗಳ ಮೂಲಕ ಮಧ್ಯ ಪ್ರದೇಶ(Madhya Pradesh)ದ ಇಂಧೋರ್‌ನಲ್ಲಿ 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ(Religion conversion)ಗೊಂಡಿರುವ ಆಶ್ಚರ್ಯಕರ ಘಟನೆ ನಡೆದಿದೆ.

Advertisement

Kambala: ಕಂಬಳ ಸಮಿತಿಯಿಂದ ಓಟಗಾರನಿಗೆ ಹೊಸ ನಿಯಮಾವಳಿ

Advertisement

ಸದ್ಯ ಸ್ಥಳೀಯ ಸಂಘಟನೆ ಸಝಾ ಸಂಸ್ಕೃತಿ ಮಂಚ್‌ ಅಧ್ಯಕ್ಷ ಸ್ಯಾಮ್‌ ಪಾವ್ರಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ 2021ಯಡಿಯಲ್ಲಿ 14 ಮಹಿಳೆಯರು ಸೇರಿದಂತೆ 30 ಜನರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ. ಇದುವರೆಗೆ ಈ ಮತಾಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ.

ಹೌದು, ಇಂಧೋರ್‌ನ ಖಜರಾನ ಗಣೇಶ ದೇವಸ್ಥಾನದಲ್ಲಿ ನಡೆದ ವೈದಿಕ ಸ್ತೋತ್ರ ಪಠಣ ಸೇರಿದಂತೆ ಹಿಂದೂ ಧಾರ್ಮಿಕ ವಿಧಿಗಳಲ್ಲಿ ಈ ವ್ಯಕ್ತಿಗಳು ಪಾಲ್ಗೊಂಡಿದ್ದು, ಈ ಜನರು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021 ರ ಅಡಿಯಲ್ಲಿ ಜಿಲ್ಲಾಡಳಿತಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ, ಅವರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಬದಲಾಯಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, ಖಜರಾನ ಗಣೇಶ ದೇವಸ್ಥಾನದಲ್ಲಿ 30 ಮಂದಿ ಸ್ವ ಇಚ್ಛೆಯಿಂದ ಧರ್ಮ ಬದಲಾವಣೆಗೆ ತೊಡಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು, ಯಾವುದೇ ಒತ್ತಡ, ಪ್ರಭಾವ, ದುರಾಸೆಗೆ ಒಳಗಾಗಿ ಧರ್ಮ ಬದಲಾಯಿಸಿರುವ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ, ದೂರು ಬಂದರೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಅಭಿನಯ್ ವಿಶ್ವಕರ್ಮ ಪಿಟಿಐಗೆ ತಿಳಿಸಿದ್ದಾರೆ.

ಅಲ್ಲದೇ ಒಂದುವೇಳೆ ಒತ್ತಾಯಪೂರ್ವಕವಾಗಿ ಅಥವಾ ವಂಚನೆ ಅಥವಾ ದುರಾಸೆಯ ಮೂಲಕ ಧಾರ್ಮಿಕ ಮತಾಂತರಗಳನ್ನು ನಿಷೇಧಿಸಲು ಮಧ್ಯಪ್ರದೇಶದ ಧರ್ಮ ಸ್ವಾತಂತ್ರ್ಯ ಕಾಯಿದೆ 2021 ಅನ್ನು ಜಾರಿಗೊಳಿಸಲಾಗಿದೆ ಮತ್ತು ಉಲ್ಲಂಘಿಸುವವರು 10 ವರ್ಷಗಳವರೆಗೆ ಜೈಲು ಮತ್ತು Rs1 ಲಕ್ಷ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

NEET UG 2024: ನೀಟ್‌ ಹೊಸ ಫಲಿತಾಂಶ ಬಿಡುಗಡೆ; ಹೊಸ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Advertisement
Advertisement