For the best experience, open
https://m.hosakannada.com
on your mobile browser.
Advertisement

Theft case: ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುತ್ತೀರಾ? ಈ ರೀತಿ ಮೋಸ ಹೋಗುತ್ತೀರಿ ಎಚ್ಚರ!

Theft case: ಬೈಕ್ ಶೋಕಿ ಮಾಡುತ್ತೀರಾ? ಹಿಂದೆ ಮುಂದೆ ನೋಡದೆ ಪದೇ ಪದೇ ಬೈಕ್ ಚೇಂಜ್ ಮಾಡುತ್ತೀರಾ? ಹಾಗಿದ್ರೆ ಈ ವಿಚಾರ ನೀವು ತಿಳಿಯಲೇ ಬೇಕು.
11:42 AM Jul 03, 2024 IST | ಕಾವ್ಯ ವಾಣಿ
UpdateAt: 11:43 AM Jul 03, 2024 IST
theft case  ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುತ್ತೀರಾ  ಈ ರೀತಿ ಮೋಸ ಹೋಗುತ್ತೀರಿ ಎಚ್ಚರ

Theft case: ಬೈಕ್ ಶೋಕಿ ಮಾಡುತ್ತೀರಾ? ಹಿಂದೆ ಮುಂದೆ ನೋಡದೆ ಪದೇ ಪದೇ ಬೈಕ್ ಚೇಂಜ್ ಮಾಡುತ್ತೀರಾ? ಹಾಗಿದ್ರೆ ಈ ವಿಚಾರ ನೀವು ತಿಳಿಯಲೇ ಬೇಕು. ಹೌದು, ಕಡಿಮೆ ಬೆಲೆ ಅಂತಾ ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಮುನ್ನ ಎಚ್ಚರವಾಗಿರಿ. ಖತರ್ನಾಕ್ ಗ್ಯಾಂಗ್ ಒಂದು ರಸ್ತೆ ಬದಿ ನಿಲ್ಲಿಸುತ್ತಿದ್ದ ಬೈಕ್‌ ಕದ್ದು ನಿಮಗೆ ಮಾರುತ್ತಾರೆ ಅನ್ನುವ ಸುದ್ದಿ ಬೆಳಕಿಗೆ ಬಂದಿದೆ.

Advertisement

Airtel, Jio and Vi Plans: ಇಂದಿನಿಂದ ಜಿಯೋ, ಏರ್‌ಟೆಲ್‌ ಶುಲ್ಕ ಏರಿಕೆ; ಪರಿಷ್ಕೃತ ದರ ಪಟ್ಟಿ ಇಲ್ಲಿದೆ

ಈಗಾಗಲೇ ನಗರದ ಸಾರ್ವಜನಿಕ ಸ್ಥಳ, ಪಾರ್ಕಿಂಗ್, ಬಸ್ ನಿಲ್ದಾಣ, ರಸ್ತೆಬದಿ ನಿಲ್ಲಿಸಿದ ಬೈಕ್‌ಗಳ ಹ್ಯಾಂಡ್‌ಲಾಕ್ ಮುರಿದು ಕ್ಷಣ ಮಾತ್ರದಲ್ಲಿ ಕದ್ದು ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಳ್ಳರನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

Advertisement

ಬೈಕ್ ಕಾಣೆಯಾದ ಬಗ್ಗೆ ದೂರುಗಳು (Theft case)  ಬಂದ ಹಿನ್ನೆಲೆ ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸ್ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಕಾರ್ಯಾಚರಣೆ ವೇಳೆ ಖಯೂಮ್ ಪಾಷಾ ಅಲಿಯಾಸ್ ಅಬ್ದುಲ್ ರೆಹಮಾನ್, ಧನು ಶೆಟ್ಟಿ, ಉಮರ್ ಬೆಗ್ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 30ಕ್ಕೂ ಹೆಚ್ಚು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೈಕ್ ಗಳನ್ನ ವಶಕ್ಕೆ ಪಡೆದ ಪೊಲೀಸರು. ದಾವಣಗೆರೆ, ಚಿಕ್ಕಮಗಳೂರು, ಹೊನ್ನಳ್ಳಿ, ಕಡೂರು ಸೇರಿದಂತೆ ರಾಜ್ಯದ ಹಲವೆಡೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಪೋಲೀಸರ ಬಲೆಗೆ ಬಿದ್ದಿದೆ.

ಬೈಕ್ ಕಳ್ಳರ ವಿಚಾರಣೆ ವೇಳೆ, ಮೊದಲು ಬೈಕ್‌ಗಳನ್ನ ಕದಿಯುತ್ತಿದ್ದ ಖದೀಮರು. ಬಳಿಕ ಕದ್ದ ಬೈಕ್‌ಗಳನ್ನ ಗುಜರಿ ಅಂಗಡಿ ನಡೆಸುವ ಉಮರ್ ಬೇಗ್ ಎಂಬುವವನಿಗೆ ಆರೋಪಿಗಳು ಮಾರುತ್ತಿದ್ದರು. ಉಮರ್ ಬೇಗ್ ಕಳ್ಳರಿಂದ ಬೈಕ್ ಖರೀದಿಸಿ ಬೈಕ್‌ನ ಬಿಡಿಭಾಗಗಳನ್ನು ಬೇರ್ಪಡಿಸಿ ಗುಜುರಿವಸ್ತುಗಳನ್ನಾಗಿ ಮಾಡಿ ಬಳಿಕ ಅದೇ ಗುಜುರಿ ವಸ್ತುಗಳನ್ನ ಒಟ್ಟುಗೂಡಿಸಿ  ಸೆಕೆಂಡ್ ಹ್ಯಾಂಡ್ ಬೈಕ್ ರೆಡಿ ಮಾಡುತ್ತಿದ್ದ ಆರೋಪಿ.

ಬೈಕ್ ರೆಡಿ ಆದಮೇಲೆ ಕಡಿಮೆ ಬೆಲೆಗೆ ಬೈಕ್ ಮಾರಾಟದ ಬಗ್ಗೆ ವಾಟ್ಸಾಪ್ ಗ್ರೂಪ್ ಗಳಿಗೆ ಹಂಚಿ ಜನರಿಗೆ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡುತ್ತಿದ್ದ. ಇದೇ ರೀತಿ ಉಮರ್‌ ಬೇಗ್ ನಿಂದ ಹಲವಾರು ಸೆಕೆಂಡ್ ಬೈಕ್‌ಗಳು ಜನರಿಗೆ ಮಾರಾಟವಾಗಿದೆ. ಸದ್ಯ ಆರೋಪಿ ಉಮರ್‌ನಿಂದ ಸುಮಾರು 2.15 ಲಕ್ಷ ರೂಪಾಯಿ ನಗದನ್ನು ಪೊಲೀಸರುವಶಕ್ಕೆ ಪಡೆದಿದ್ದಾರೆ.

PM Modi: ಕಿರುಚಿ ಕಿರುಚಿ ದಣಿದಿದ್ದೀರಿ, ತಗೊಳ್ಳಿ ನೀರು ಕುಡಿಯಿರಿ – ಸಂಸತ್ತಿನಲ್ಲಿ ತನ್ನ ವಿರುದ್ಧ ಪ್ರತಿಭಟಿಸಿದ ಸಂಸದರಿಗೆ ನೀರು ಕೊಟ್ಟ ಮೋದಿ !!

Advertisement
Advertisement
Advertisement