ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Rama mandir donation: ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಅತೀ ಹೆಚ್ಚು ದೇಣಿಗೆ ನೀಡಿದ್ದು ಇವರೇ ನೋಡಿ

01:27 PM Jan 22, 2024 IST | ಹೊಸ ಕನ್ನಡ
UpdateAt: 03:20 PM Jan 22, 2024 IST
Advertisement

Rama mandir donation: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಯಾಗಿ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನಿಗೆ (ಬಾಲ ರಾಮ) ಪ್ರಾಣ ಪ್ರತಿಷ್ಠೆ ನೆರವೇರಿದೆ.ಈ ಮೂಲಕ ನೂರಾರು ವರ್ಷಗಳ ಕನಸು ನೆರವೇರಿದಂತಾಗಿದೆ. ಅಂದಹಾಗೆ ರಾಮಭಕ್ತರ ದೇಣಿಗೆಯಿಂದಲೇ ಅಯೋಧ್ಯೆಯಲ್ಲಿ ಭಗವಾನ್ ರಾಮನ ಭವ್ಯ ಮಂದಿರ ನಿರ್ಮಾಣವಾಗಿದ್ದು, ಎಲ್ಲರಿಗೂ ತಿಳಿದೇ ಇದೆ. ಹಾಗಿದ್ರೆ ಈ ಮಂದಿರ ನಿರ್ಮಾಣಕ್ಕೆ ಅತೀ ಹೆಚ್ಚು ದೇಣಿಗೆ(Rama mandir donation)ನೀಡಿದ್ದು ಯಾರು ಗೊತ್ತಾ?!

Advertisement

ಹೌದು, ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಒಂದು ರೂಪಾಯಿ ಕೂಡ ದೇಣಿಗೆ ನೀಡಿಲ್ಲ, ರಾಷ್ಟ್ರಾದ್ಯಂತ, ವಿಶ್ವಾದ್ಯಂತ ಭಕ್ತರು ನೀಡಿದ ಹಣದಿಂದಲೇ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಇದಕ್ಕಾಗಿ ಭಕ್ತರು ತಮ್ಮ ಕೈಲಾದ 10, 20 ರೂಗಳಿಂದಲೂ ಹಿಡಿದು ಸಾವಿರ, ಲಕ್ಷ, ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಹಾಗಾದರೆ ಹೆಚ್ಚು ದೇಣಿಗೆ ನೀಡಿದವರು ಯಾರು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಮಂದಿರ ಬೆನ್ನಲ್ಲೇ ಮಸೀದಿ ನಿರ್ಮಾಣ ಯೋಜನೆ!!

Advertisement

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರು ಮೊರಾರಿ ಬಾಪು(Morari bapu). ಬಾಪು ಅವರು 18.6 ಕೋಟಿ ರೂಪಾಯಿಗಳ ಗಮನಾರ್ಹ ದೇಣಿಗೆ ನೀಡಿದ್ದಾರೆ. ಅವರಿಂದ ಭಾರತದೊಳಗೆ 11.30 ಕೋಟಿ ರೂಪಾಯಿ, ಯುಕೆ ಮತ್ತು ಯುರೋಪ್‌ನಿಂದ 3.21 ಕೋಟಿ ರೂಪಾಯಿ ಮತ್ತು ಅಮೆರಿಕ, ಕೆನಡಾ ಮತ್ತು ಇತರ ದೇಶಗಳಿಂದ 4.10 ಕೋಟಿ ರೂಪಾಯಿ ದೇಣಿಗೆ ಬಂದಿದೆ.

ಅವರು ಆಧ್ಯಾತ್ಮಿಕ ನಾಯಕ ಮತ್ತು ಗುಜರಾತ್‌ನ ರಾಮ ಕಥಾ ನಿರೂಪಕರಾಗಿದ್ದಾರೆ. ಅವರು ರಾಮಾಯಣವನ್ನು ಪ್ರಚುರಪಡಿಸಲು ಆರು ದಶಕಗಳನ್ನು ಕಳೆದಿದ್ದಾರೆ. ಆಗಸ್ಟ್ 2020 ರಲ್ಲಿ ಗುಜರಾತ್‌ನ ಪಿಥೋರಿಯಾದಲ್ಲಿ ಆನ್‌ಲೈನ್ ಕಥಾದಲ್ಲಿ ಮೊರಾರಿ ಬಾಪು ಅವರ ಹೃತ್ಪೂರ್ವಕ ಮನವಿಗೆ ಪ್ರತಿಕ್ರಿಯೆಯಾಗಿ ಉದಾರವಾದ ಹಣವನ್ನು ಕ್ರೋಢೀಕರಿಸಲಾಗಿದೆ.

ಮೊರಾರಿ ಬಾಪು ಮೊದಲ ಸ್ಥಾನದಲ್ಲಿದ್ದರೆ, ಅವರ ನಂತರದ ಸ್ಥಾನದಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದ ಗುಜರಾತ್‌ನ ಉದ್ಯಮಿಯೂ ಇದ್ದಾರೆ. ಹೌದು, ಗುಜರಾತ್‌ನ ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಅವರು ರಾಮಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ್ದಾರೆ. ನಿಧಿ ಸಂಗ್ರಹ ಅಭಿಯಾನದ ಅಂಗವಾಗಿ ಅವರು ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ 11 ಕೋಟಿ ರೂಪಾಯಿ ದೇಣಿಗೆಯನ್ನು ಚೆಕ್ ಮುಖಾಂತರ ಹಸ್ತಾಂತರಿಸಿದ್ದಾರೆ.

Related News

Advertisement
Advertisement