Rahul Gandhi: ರಾಹುಲ್ ಗಾಂಧಿಗೆ ಶಾಕ್ - 'ಕೈ' ಬಿಟ್ಟು 'ಕಮಲ' ಹಿಡಿದ ವಯನಾಡು ಕಾಂಗ್ರೆಸ್ ಕಾರ್ಯದರ್ಶಿ !!
Rahul Gandhi: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲೇ ರಾಹುಲ್ ಗಾಂಧಿ(Rahul Gandhi)ಯವರಿಗೆ ಬಿಗ್ ಶಾಕ್ ಎದುರಾಗಿದೆ. ವಯನಾಡಿನಲ್ಲಿ ಕಾಂಗ್ರೆಸ್ನ(Congress) ಜಿಲ್ಲಾ ಕಾರ್ಯದರ್ಶಿ(Secretary) ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಸೇರ್ಪಡೆಗೊಂಡು ರಾಹುಲ್ ಗಾಂಧಿಗೆ ದೊಡ್ಡ ಅಘಾತವನ್ನು ಉಂಟು ಮಾಡಿದ್ದಾರೆ.
ಹೌದು, ಸುಲಭದಲ್ಲಿ ತಾನು ಗೆಲ್ಲುವ ಕ್ಷೇತ್ರ ಕೇರಳದ(Kerala) ವಯನಾಡು (Vayanadu) ಎಂದು ಅರಿತುಕೊಂಡು ಈ ಸಲದ ಚುನಾವಣೆಗೂ ವಯನಾಡಿನಿಂದ ಸ್ಪರ್ಧೆಗಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈ ಸಲದ ಗೆಲುವು ಮಾತ್ರ ಕಬ್ಬಿಣದ ಕಡಲೆಯಾಗಿದೆ. ಒಂದರ ಹಿಂದೆ ಒಂದಂತೆ ಆಘಾತ ಎದುರಾಗುತ್ತಿದೆ. ಇದೀಗ ವಯಾನಾಡು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್(PM Sudhakar) ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದು ಮತ್ತೊಂದು ಶಾಕ್ ನೀಡಿದ್ದಾರೆ.
ಸಿಪಿಎಂ ಹಾಗೂ ಬಿಜೆಪಿ(BJP) ಕೂಡ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ತೀವ್ರಿ ಜಿದ್ದಾಜಿದ್ದಿನ ಕಣವಾಗಿದ್ದ ವಯನಾಡಿನಲ್ಲಿ ವಯನಾಡು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್ ಬಿಜೆಪಿ ಸೇರಿಕೊಂಡಿದ್ದು, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಆತಂಕ ಹೆಚ್ಚಿಸುವಂತೆ ಮಾಡಿದೆ.
ಅಚ್ಚರಿ ಏನಂದ್ರೆ ಬಿಜೆಪಿ ಸೇರುತ್ತಿದ್ದಂತೆ ಪಿಎಂ ಸುಧಾಕರನ್ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. 'ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ನನಗೆ ರಾಹುಲ್ ಗಾಂಧಿ ಸಿಗುತ್ತಿಲ್ಲ. ವಯನಾಡು ಕಾಂಗ್ರೆಸ್‌ನ ಹಲವು ಮುಖಂಡರಿಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ಜನಸಾಮಾನ್ಯರಿಗೆ ರಾಹುಲ್ ಗಾಂಧಿ ಸಿಗುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಅಂದಹಾಗೆ ಏಪ್ರಿಲ್ 26ರಂದು ಕೇರಳದಲ್ಲಿ ಚುನಾವಣೆ ನಡೆಯಲಿದೆ. ಒಂದು ಹಂತದಲ್ಲಿ ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
NOTA: ಸೌಜನ್ಯಾ ನ್ಯಾಯಕ್ಕಾಗಿ ನೋಟಾ ಅಭಿಯಾನ; ಉಜಿರೆಯಿಂದ ಪೂಂಜಾಲುಕಟ್ಟೆಯ ತನಕ ಬೃಹತ್ ವಾಹನ ರ್ಯಾಲಿ !