For the best experience, open
https://m.hosakannada.com
on your mobile browser.
Advertisement

Protein Rich foods: ಮೊಟ್ಟೆ ಬದಲಾಗಿ ಇಲ್ಲಿದೆ ನಿಮಗೆ ಪ್ರೊಟೀನ್ ರಿಚ್ ಫುಡ್!

Protein Rich foods: ಕೆಲವರ ಪ್ರಕಾರ ಮೊಟ್ಟೆ ಮಾತ್ರ ಪ್ರೊಟೀನ್ ಇರುವ ಆಹಾರ ಅಂದುಕೊಂಡರೆ ಅದು ತಪ್ಪು. ಹೌದು, ಮೊಟ್ಟೆ ಬದಲಾಗಿ ಇತರ ಆಹಾರ ಪದಾರ್ಥ ಗಳಲ್ಲಿ ಪ್ರೊಟೀನ್ ಇರುತ್ತದೆ. ಅವು ಯಾವುದೆಂದು ಇಲ್ಲಿ ತಿಳಿಯಿರಿ.
03:34 PM Jun 24, 2024 IST | ಕಾವ್ಯ ವಾಣಿ
UpdateAt: 03:34 PM Jun 24, 2024 IST
protein rich foods  ಮೊಟ್ಟೆ ಬದಲಾಗಿ ಇಲ್ಲಿದೆ ನಿಮಗೆ ಪ್ರೊಟೀನ್ ರಿಚ್ ಫುಡ್
Advertisement

Protein Rich foods: ಆಹಾರದ ಬಗೆಗಿನ ಕೆಲವು ತಪ್ಪು ಕಲ್ಪನೆ ಮತ್ತು ಪ್ರೊಟೀನ್ ಯುಕ್ತ ಆಹಾರಗಳು (Protein Rich foods) ಯಾವುದು ಎಂಬ ನಿಮ್ಮ ಗೊಂದಲಗಳಿಗೆ ಇಲ್ಲಿದೆ ಸರಿಯಾದ ಉತ್ತರ. ಕೆಲವರ ಪ್ರಕಾರ ಮೊಟ್ಟೆ ಮಾತ್ರ ಪ್ರೊಟೀನ್ ಇರುವ ಆಹಾರ ಅಂದುಕೊಂಡರೆ ಅದು ತಪ್ಪು. ಹೌದು, ಮೊಟ್ಟೆ ಬದಲಾಗಿ ಇತರ ಆಹಾರ ಪದಾರ್ಥ ಗಳಲ್ಲಿ ಪ್ರೊಟೀನ್ ಇರುತ್ತದೆ. ಅವು ಯಾವುದೆಂದು ಇಲ್ಲಿ ತಿಳಿಯಿರಿ.

Advertisement

ಮುಖ್ಯವಾಗಿ ಸಸ್ಯಾಹಾರಿಗಳು ಅಥವಾ ಮೊಟ್ಟೆಗಳನ್ನು ಇಷ್ಟಪಡದಿದ್ದರೆ  ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಹೊಂದಿರುವ ಈ ಕೆಳಗಿನ ಆಹಾರಗಳು ಲಭ್ಯವಿವೆ. ಅವುಗಳನ್ನು ಸೇವಿಸಬಹುದಾಗಿದೆ.

Sonakshi Sinha Zaheer Iqbal Wedding: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ವಿರುದ್ಧ ಪ್ರತಿಭಟನೆ

Advertisement

ಸೋಯಾ ಬೀನ್:

ಸೋಯಾಬೀನ್‌ ಪ್ರೋಟೀನ್‌ನ ಉತ್ತಮ ಮೂಲ. ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು  ಮತ್ತು ವಿಟಮಿನ್ ಸಿ, ಪ್ರೊಟೀನ್ ಮತ್ತು ಫೋಲೇಟ್ ಅಧಿಕವಾಗಿದೆ. ಅವು ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಮೆಗ್ನಿಶಿಯಂ, ರಂಜಕ ಮತ್ತು ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದೆ.

ಕಾಟೇಜ್ ಚೀಸ್:

ಕಾಟೇಜ್ ಚೀಸ್‌ನಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಹಾಗೂ ಪ್ರೋಟೀನ್ ಹೆಚ್ಚಿರುತ್ತದೆ. ಇದರಲ್ಲಿ ಉತ್ತಮ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಗತ್ಯ ಪೋಷಕಾಂಶಗಳಿರುತ್ತವೆ.

ಕಾಬೂಲ್ ಕಡಲೆ:

ಕಡಲೆ ಅಥವಾ ಕಾಬೂಲ್ ಕಡಲೆಯಲ್ಲಿ ಕಬ್ಬಿಣ, ಪಾಸ್ಪೇಟ್, ಕ್ಯಾಲ್ಸಿಯಂ, ಮೆಗ್ನಿಶಿಯಂ, ಸತು, ವಿಟಮಿನ್ ಕೆ ಸಮೃದ್ಧವಾಗಿದೆ. ವಿವಿಧ ಖಾದ್ಯಗಳಲ್ಲಿ ಈ ಕಡಲೆಯನ್ನು ಬಳಸಿಕೊಳ್ಳಬಹುದು. ಸಾಕಷ್ಟು ಪ್ರಮಾಣದ ಪ್ರೋಟೀನ್ ಅನ್ನು ಇದು ದೇಹಕ್ಕೆ ಒದಗಿಸುತ್ತದೆ.

ಕುಂಬಳಕಾಯಿ ಬೀಜ:

ಪ್ರೋಟೀನ್ ಜೊತೆಗೆ ಮೆಗ್ನಿಶಿಯಂ ಕೂಡಾ ಇದರಲ್ಲಿ ಉತ್ತಮ ಪ್ರಮಾಣದಲ್ಲಿದೆ. ಇದೂ ಆರೋಗ್ಯಕ್ಕೆ ಉತ್ತಮವಾದ ಆಹಾರಗಳಲ್ಲಿ ಒಂದಾಗಿದೆ.

ಬಾದಾಮಿ:

ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಕೂಡಾ ಒಂದು. ಇದರಲ್ಲಿ ವಿಟಮಿನ್ ಸಿ, ತಾಮ್ರ, ಮೆಗ್ನಿಶಿಯಂ ಕೂಡಾ ಉತ್ತಮ ಪ್ರಮಾಣದಲ್ಲಿದೆ.

ಶೇಂಗಾ:

ಶೇಂಗಾದಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡೇಟ್‌ಗಳು ಸಮೃದ್ಧವಾಗಿವೆ. ಶೇಂಗಾ ಬೀಜ ಹೃದಯಕ್ಕೆ ಉತ್ತಮವಾದ ಮೊನೊ ಅನ್‌ಸ್ಯಾಚುರೇಟೆಡ್, ಪಾಲಿ ಅನ್‌ಸ್ಯಾಚುರೇಟೆಡ್ ಕೊಬ್ಬುಗಳು, ಫೋಲಿಕ್ ಆಮ್ಲ ಮತ್ತು ವಿಟಮಿನ್ ಇ ಯನ್ನೂ ಹೊಂದಿರುತ್ತವೆ.

ಸೆಣಬಿನ ಬೀಜಗಳು:

ಸೆಣಬಿನ ಬೀಜಗಳಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಇದು ಕಡಿಮೆ ಕ್ಯಾಲೋರಿ ಹಾಗೂ ಅಧಿಕ ಪ್ರೋಟೀನ್ ಹೊಂದಿರುತ್ತದೆ. ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ತೂಕ ನಷ್ಟಕ್ಕೂ ಈ ಬೀಜಗಳು ಸಹಾಯಕ ಆಗಿದೆ.

Soundarya Jagadish-Pavitra Gowda: ನಿರ್ಮಾಪಕ ಸೌಂದರ್ಯ ಜಗದೀಶ್‌ ಕೊಟ್ಟ ಹಣದಲ್ಲಿ ಪವಿತ್ರಾ ಗೌಡ ಮನೆ ಖರೀದಿ ಆರೋಪ

Advertisement
Advertisement
Advertisement